ADVERTISEMENT

ಅನಿವಾರ್ಯವಿದ್ದಾಗ ರಾಸಾಯನಿಕ ಬಳಸಿ: ಕೇಂದ್ರ ಸಚಿವ ಭಗವಂತ ಖೂಬಾ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:01 IST
Last Updated 22 ಸೆಪ್ಟೆಂಬರ್ 2021, 4:01 IST
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರದಲ್ಲಿ ಸೋಮವಾರ ನಡೆದ ರೈತರ ಒಂದು ದಿನದ ಕಾರ್ಯಾಗಾರದಲ್ಲಿ ಡಾ.ಎಸ್.ಎ.ಪಾಟೀಲ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಚಂದ್ರಶೇಖರ ನಾಯ್ಕ, ಮಾರ್ತಂಡ ಮಚಕೂರಿ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರದಲ್ಲಿ ಸೋಮವಾರ ನಡೆದ ರೈತರ ಒಂದು ದಿನದ ಕಾರ್ಯಾಗಾರದಲ್ಲಿ ಡಾ.ಎಸ್.ಎ.ಪಾಟೀಲ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಚಂದ್ರಶೇಖರ ನಾಯ್ಕ, ಮಾರ್ತಂಡ ಮಚಕೂರಿ ಇದ್ದರು   

ಬಸವಕಲ್ಯಾಣ: ‘ಎಲ್ಲರೂ ಸಾವಯವ ಕೃಷಿ ಪದ್ಧತಿ ಕೈಗೊಂಡು ಉತ್ತಮ ಗುಣಮಟ್ಟದ ಬೆಳೆ ಬೆಳೆಯಬೇಕು. ಅಗತ್ಯವಿದ್ದಾಗ ಮಾತ್ರ ರಾಸಾಯನಿಕಗಳ ಬಳಕೆ ಮಾಡಬೇಕು’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಸಲಹೆ ನೀಡಿದ್ದಾರೆ.

ತಾಲ್ಲೂಕಿನ ಪ್ರತಾಪುರದ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ, ಕೀಟನಾಶಕ ಸೂತ್ರೀಕರಣ, ತಂತ್ರಜ್ಞಾನ ಸಂಸ್ಥೆ ರಾಸಾಯನಿಕ ಮತ್ತು ಪೆಟ್ರೊಕೆಮಿಕಲ್ಸ್ ವಿಭಾಗ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ರೈತರ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಆನ್‌ಲೈನ್‌ನಲ್ಲಿ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಮಾತನಾಡಿ,‘ಮಣ್ಣಿನ ಪೋಷಕಾಂಶಗಳ ಸರಿಯಾದ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು. ಕೀಟನಾಶಕಗಳ ಸುರಕ್ಷಿತ ಬಳಕೆಯಿಂದ ಅನಗತ್ಯ ಹಾನಿ ತಡೆಯಬಹುದು. ಇಳುವರಿ ಹೆಚ್ಚಿಗೆ ಪಡೆಯುವ ಕೃಷಿ ಪದ್ಧತಿ ಅನುಸರಿಸಿದರೆ ಅಭಿವೃದ್ಧಿ ಸಾಧ್ಯ’ ಎಂದರು.

ADVERTISEMENT

ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ, ನಿರ್ದೇಶಕ ಜೀತೇಂದ್ರಕುಮಾರ, ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ, ಕೃಷಿ ವಿಜ್ಞಾನ ಕೇಂದ್ರದ ಡಾ.ಸುನಿಲಕುಮಾರ, ಡಾ.ರಾಜೀವ ತೆಗ್ಗಳ್ಳಿ, ಡಾ.ಆನಂದ ನಾಯ್ಕ, ಡಾ.ಮಲ್ಲಿಕಾರ್ಜುನ ಹಾಗೂ ಡಾ.ಅಕ್ಷಯಕುಮಾರ ಮಾತನಾಡಿದರು.

ಕಾರ್ಯಾಗಾರದಲ್ಲಿ ಸಸ್ಯಜನ್ಯ ಕೀಟನಾಶಕ, ಬೇವಿನ ಮೂಲದ ಕೀಟನಾಶಕ, ಕೀಟನಾಶಕಗಳ ಸುರಕ್ಷಿತ ಬಳಕೆ, ಸಮಗ್ರ ಕೀಟಗಳ ನಿರ್ವಹಣೆ, ಮಣ್ಣು ಮತ್ತು ಮಣ್ಣಿನ ಪೋಷಕಾಂಶಗಳ ನಿರ್ವಹಣೆಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.