ADVERTISEMENT

ಪುಟ್ಟರಾಜ ಗವಾಯಿ ಜಯಂತಿ ಆಚರಿಸಿ: ಕಲ್ಲಯ್ಯಜ್ಜ ಮನವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:59 IST
Last Updated 22 ಸೆಪ್ಟೆಂಬರ್ 2021, 3:59 IST
ಬೀದರ್ ತಾಲ್ಲೂಕಿನ ಬಾವಗಿಯ ಶ್ರೀ ಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಪಂಡಿತ ಶಿವಯೋಗಿ ಪುಟ್ಟರಾಜ ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಘದ ವತಿಯಿಂದ ಆಯೋಜಿಸಿದ್ದ ಪಂಡಿತ ಪುಟ್ಟರಾಜ ಕವಿ ಗವಾಯಿ ಅವರ 11ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಮಾತನಾಡಿದರು. ಅಶೋಕಕುಮಾರ ಕರಂಜಿ, ಬಸವರಾಜ ಉಮರಾಣಿ, ಸಿದ್ಧಲಿಂಗ ಸ್ವಾಮಿ, ನವಲಿಂಗ ಪಾಟೀಲ, ಎಸ್.ಎ.ವಠಾರ ಇದ್ದಾರೆ
ಬೀದರ್ ತಾಲ್ಲೂಕಿನ ಬಾವಗಿಯ ಶ್ರೀ ಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಪಂಡಿತ ಶಿವಯೋಗಿ ಪುಟ್ಟರಾಜ ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಘದ ವತಿಯಿಂದ ಆಯೋಜಿಸಿದ್ದ ಪಂಡಿತ ಪುಟ್ಟರಾಜ ಕವಿ ಗವಾಯಿ ಅವರ 11ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಮಾತನಾಡಿದರು. ಅಶೋಕಕುಮಾರ ಕರಂಜಿ, ಬಸವರಾಜ ಉಮರಾಣಿ, ಸಿದ್ಧಲಿಂಗ ಸ್ವಾಮಿ, ನವಲಿಂಗ ಪಾಟೀಲ, ಎಸ್.ಎ.ವಠಾರ ಇದ್ದಾರೆ   

ಜನವಾಡ: ‘ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿ ಅವರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕು’ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಮನವಿ ಮಾಡಿದರು.

ಬೀದರ್: ತಾಲ್ಲೂಕಿನ ಬಾವಗಿಯ ಶ್ರೀ ಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಪಂಡಿತ ಶಿವಯೋಗಿ ಪುಟ್ಟರಾಜ ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಘದ ವತಿಯಿಂದ ಆಯೋಜಿಸಿದ್ದ ಪಂಡಿತ ಪುಟ್ಟರಾಜ ಕವಿ ಗವಾಯಿ ಅವರ 11ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರದ ವತಿಯಿಂದ ಜಯಂತಿ ಆಚರಿಸುವುದರಿಂದ ಮುಂದಿನ ಪೀಳಿಗೆಗೆ ಪುಟ್ಟರಾಜ ಗವಾಯಿ ಸಾಧನೆ ಪರಿಚಯಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಸಂಗೀತ ಕಲಿಕೆ ಪೂರಕವಾಗಿದೆ. ಪ್ರತಿ ಗ್ರಾಮದಲ್ಲಿ ಸಂಗೀತ ಪಾಠಶಾಲೆ ಆರಂಭಿಸಬೇಕು. ಪಾಠಶಾಲೆ ತೆರೆಯುವವರಿಗೆ ಗ್ರಾಮಸ್ಥರು ಪ್ರೋತ್ಸಾಹ ನೀಡಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮಿ ಮಾತನಾಡಿ, ‘ದಕ್ಷಿಣದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರೆ, ಉತ್ತರ ಕರ್ನಾಟಕದಲ್ಲಿ ಪಂಡಿತ ಪುಟ್ಟರಾಜ ಗವಾಯಿ ಅವರು ಶಿಷ್ಯರಿಗೆ ಸಂಗೀತ ಧಾರೆ ಎರೆದಿದ್ದಾರೆ’ ಎಂದು ಬಣ್ಣಿಸಿದರು.

ಬಸವಕಲ್ಯಾಣ ವಲಯ ಅರಣ್ಯಾಧಿಕಾರಿ ಎಸ್.ಎ.ವಠಾರ ಹಾಗೂ ಆರ್.ಎಸ್ ಕಮ್ಯುನಿಕೇಷನ್ ಮಾಲೀಕ ರವೀಂದ್ರ ಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿದರು.

ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ, ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಕಾರ್ತಿಕ ಮಠಪತಿ, ಬ್ರಿಮ್ಸ್ ಲೆಕ್ಕಾಧಿಕಾರಿ ಲಿಂಗರಾಜ ಹಿರೇಮಠ, ಭದ್ರೇಶ್ವರ ದೇವಸ್ಥಾನದ ಅರ್ಚಕ ವಿನೋದ ಗುರೂಜಿ, ಗುತ್ತಿಗೆದಾರ ಸೂರ್ಯಕಾಂತ ಯದಲಾಪುರೆ, ಭದ್ರಯ್ಯ ಸ್ವಾಮಿ, ಭದ್ರೇಶ್ವರ ದೇವಸ್ಥಾನದ ಶಿವಕುಮಾರ ಸ್ವಾಮಿ, ಮಲ್ಲಯ್ಯ ಗವಾಯಿ, ಪತ್ರಕರ್ತರಾದ ಶಿವಕುಮಾರ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಮರಕಲೆ ಇದ್ದರು.

ಸರಿಗಮಪ ಖ್ಯಾತಿಯ ಕಲಾವಿದ ಸರ್ವಜ್ಞ ಪ್ರಾರ್ಥಿಸಿದರು. ಕಮಠಯ್ಯ ಸ್ವಾಮಿ ಸ್ವಾಗತಿಸಿದರು. ನವಲಿಂಗ ಪಾಟೀಲ ಅವರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.