ADVERTISEMENT

ಸಂಗೋಳಗಿ ಹಬ್ಬ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 5:41 IST
Last Updated 22 ಮಾರ್ಚ್ 2023, 5:41 IST
ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಇರುವ ಖುತುಬಿ ಸಾಹೇಬರ ದರ್ಗಾ
ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಇರುವ ಖುತುಬಿ ಸಾಹೇಬರ ದರ್ಗಾ   

ಬೀದರ್: ಮಹಾ ಸೂಫಿ ಸಂತ ಖುತುಬಿ ಸಾಹೇಬರ ಜಾತ್ರಾ ಮಹೋತ್ಸವ ಸಮಿತಿಯು ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಮಾ. 22 ಮತ್ತು 23 ರಂದು ನಮ್ಮೂರು ಸಂಗೋಳಗಿ ಹಬ್ಬ-2023 ಹಮ್ಮಿಕೊಂಡಿದೆ.

ಹಬ್ಬದ ಅಂಗವಾಗಿ ಗ್ರಾಮದ ಖುತುಬಿ ಸಾಹೇಬರ ದರ್ಗಾದಲ್ಲಿ ಮಾ. 22 ರಂದು ಬೆಳಿಗ್ಗೆ 10 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2.30ಕ್ಕೆ ಕವ್ವಾಲಿ, ಸಂಜೆ 4ಕ್ಕೆ ಪಲ್ಲಕ್ಕಿ ಮಹೋತ್ಸವ ಜರುಗಲಿದೆ.

ಮಾ. 23 ರಂದು ಬೆಳಿಗ್ಗೆ 8.30ಕ್ಕೆ ಜಂಗಿ ಕುಸ್ತಿ ಸ್ಪರ್ಧೆಗಳು ನಡೆಯಲಿವೆ ಎಂದು ಪ್ರಮುಖರಾದ ಶಿವಕುಮಾರ ಕಾಶೆಂಪುರೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.