ADVERTISEMENT

ಸಿಇಟಿ ಫಲಿತಾಂಶ ಪ್ರಕಟ-ಎಂಜಿನಿಯರಿಂಗ್‌: ನಚಿಕೇತ್‌ಗೆ 66ನೇ ಶ್ರೇಯಾಂಕ

ಸಿಇಟಿ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:39 IST
Last Updated 21 ಸೆಪ್ಟೆಂಬರ್ 2021, 4:39 IST
ಚಿಕ್ಕಮಗಳೂರಿನ ಸಾಯಿ ಏಂಜಲ್ಸ್‌ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯ ನಾಗರಾಜು ಅವರು ಸಿಇಟಿ ಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಅಭಿನಂದಿಸಿದರು.
ಚಿಕ್ಕಮಗಳೂರಿನ ಸಾಯಿ ಏಂಜಲ್ಸ್‌ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯ ನಾಗರಾಜು ಅವರು ಸಿಇಟಿ ಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಅಭಿನಂದಿಸಿದರು.   

ಚಿಕ್ಕಮಗಳೂರು: ವೃತ್ತಿ ಶಿಕ್ಷಣ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ನಗರದ ಸಾಯಿ ಏಂಜಲ್ಸ್‌ ಪಿಯು ಕಾಲೇಜಿನ ನಚಿಕೇತ್ ಎಸ್ ಶಾಸ್ತ್ರಿ ಎಂಜಿನಿಯರಿಂಗ್‌ನಲ್ಲಿ 66ನೇ ಶ್ರೇಯಾಂಕ ಪಡೆದು ಸಾಧನೆ ಮೆರೆದಿದ್ದಾರೆ.

ಜಿಲ್ಲೆಯಲ್ಲಿ 2632 ಮಂದಿ ಸಿಇಟಿ ಬರೆದಿದ್ದರು. ಶ್ರೇಯಾಂಕ ಪಟ್ಟಿಯಲ್ಲಿ ಪ್ರಕೃತಿ ಮತ್ತು ಯೋಗ ಕೋರ್ಸ್‌– 2270 (ಶೇ 86.25), ಎಂಜಿನಿಯರಿಂಗ್‌– 2574 (ಶೇ 97.8), ಬಿ.ಎಸ್ಸಿ (ಕೃಷಿ)– 2241 (ಶೇ 85.14), ಬಿ.ವಿಎ‌ಸ್ಸಿ (ಪಶು ವೈದ್ಯಕೀಯವಿಜ್ಞಾನ)–2266 (ಶೇ 86.09), ಬಿ ಫಾರ್ಮ– 2603 (ಶೇ 98.9) ಹಾಗೂ ಡಿ ಫಾರ್ಮ– 2603 (ಶೇ 98.9) ಮಂದಿ ಸ್ಥಾನ ಪಡೆದಿದ್ದಾರೆ.

ಎಂಜಿನಿಯರಿಂಗ್‌ ಕೋರ್ಸ್‌ ಶ್ರೇಯಾಂಕ ಪಟ್ಟಿಯಲ್ಲಿ ನಗರದ ಸಾಯಿ ಏಂಜಲ್ಸ್‌ ಪಿಯು ಕಾಲೇಜಿನ ಪಿ.ವಿಸ್ಮಯ್– 206, ಅರವಿಂದಆನಂದ್ 511, ಸಿ.ಆರ್. ಭೂಮಿಕಾ ನಾಯ್ಡು– 673, ಟಿ.ಎ. ಆದ್ಯಾ 1000 ಹಾಗೂ ಬಿ.ಎಸ್ಸಿ(ಕೃಷಿ) ಶ್ರೇಯಾಂಕ ಪಟ್ಟಿಯಲ್ಲಿ ಬಿ.ಸಿ. ಪ್ರಶಾಂತ್– 970 ನೇ ಸ್ಥಾನ ಪಡೆದಿದ್ದಾರೆ ಎಂದು ಸಾಯಿ ಏಂಜಲ್ಸ್‌ ಸಂಸ್ಥೆ ಕಾರ್ಯದರ್ಶಿ ವಿಜಯ ನಾಗೇಶ್ ಪ್ರಾಚಾರ್ಯ ಕೆ.ಕೆ.ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.