ADVERTISEMENT

ಮೆಗಾ ಲಸಿಕೆ ಮೇಳ: ಒಂದೇ ದಿನ 1.34 ಲಕ್ಷ ಜನರಿಗೆ ಲಸಿಕೆ

ಪ್ರೆಸ್‌ ಕ್ಲಬ್‌ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 3:00 IST
Last Updated 18 ಸೆಪ್ಟೆಂಬರ್ 2021, 3:00 IST
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಸಮರ್ಥನಾ ಫೌಂಡೇಶನ್ ಮತ್ತು ಕೆ.ಎಂ.ಸಿ ಅಸ್ಪತ್ರೆ ಸಹಯೋಗದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ದಾಖಲೆ ರಹಿತ ನಿರ್ಗತಿಕರಿಗೆ ಶುಕ್ರವಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಯಿತು. ಸಮರ್ಥನಾ ಸಂಸ್ಥೆಯ ಸುಜಿತ್ ಪ್ರತಾಪ್, ಪ್ರೀತಂ ರೈ, ಅನೀಲ್ ಮೇಂಡ, ಕೆ.ಎಂ.ಸಿ ಆಸ್ಪತ್ರೆಯ ಸಿಂಧೂ ಸುರೇಂದ್ರ ಪ್ರಸಾದ್, ಜಯರಾಮ ಪೂಜಾರಿ ಹಾಗೂ ರೋಟರಿ ಕ್ಲಬ್‌ನ ನಂದಿನಿ ರಘುಚಂದ್ರ ಇದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಸಮರ್ಥನಾ ಫೌಂಡೇಶನ್ ಮತ್ತು ಕೆ.ಎಂ.ಸಿ ಅಸ್ಪತ್ರೆ ಸಹಯೋಗದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ದಾಖಲೆ ರಹಿತ ನಿರ್ಗತಿಕರಿಗೆ ಶುಕ್ರವಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಯಿತು. ಸಮರ್ಥನಾ ಸಂಸ್ಥೆಯ ಸುಜಿತ್ ಪ್ರತಾಪ್, ಪ್ರೀತಂ ರೈ, ಅನೀಲ್ ಮೇಂಡ, ಕೆ.ಎಂ.ಸಿ ಆಸ್ಪತ್ರೆಯ ಸಿಂಧೂ ಸುರೇಂದ್ರ ಪ್ರಸಾದ್, ಜಯರಾಮ ಪೂಜಾರಿ ಹಾಗೂ ರೋಟರಿ ಕ್ಲಬ್‌ನ ನಂದಿನಿ ರಘುಚಂದ್ರ ಇದ್ದರು.   

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮೆಗಾ ಲಸಿಕೆ ಮೇಳದಲ್ಲಿ ಒಟ್ಟು 1,34,577 ಜನರಿಗೆ ಲಸಿಕೆ ನೀಡುವ ಮೂಲಕ ಶೇ 90ರಷ್ಟು ಗುರಿ ಸಾಧನೆಯಾಗಿದೆ.

ಜಿಲ್ಲೆಯಲ್ಲಿ ಒಂದೇ ದಿನ 1.50 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿದಂತೆ 600ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜನರಿಗೆ ಲಸಿಕೆ ಪಡೆಯುವ ಸೌಲಭ್ಯ ಕಲ್ಪಿಸಲಾಗಿತ್ತು.

ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದವರ ಒಟ್ಟು ಸಂಖ್ಯೆ 20 ಲಕ್ಷ ದಾಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ಎಲ್ಲರಿಗೂ ಲಸಿಕೆ ನೀಡಲು ಕ್ರಮ: ಗರಿಷ್ಠ ಸಿದ್ಧತೆ ಮಾಡಿಕೊಂಡು ಲಸಿಕಾ ಮೇಳದಲ್ಲಿ ಒಂದನೇ ಡೋಸ್ ಪಡೆಯುವವರು ಮತ್ತು ಎರಡನೇ ಡೋಸ್‌ ಬಾಕಿ ಇದ್ದವರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರಕೆ.ವಿ. ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಲಸಿಕೆ ಮೇಳಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ‘ಬೆಳಗಿನಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನ 1.30ರ ವೇಳೆಗೆ ಶೇ 45ರಷ್ಟು ಗುರಿ ದಾಟಿತ್ತು’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪದಾಧಿಕಾರಿಗಳಾದ ಪುಷ್ಪರಾಜ್ ಬಿ.ಎನ್, ಭಾಸ್ಕರ್ ರೈ ಕಟ್ಟ, ಸುರೇಶ್ ಪಳ್ಳಿ ಇದ್ದರು.

ವಿವಿಧೆಡೆ ಡಿಸಿ ಭೇಟಿ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಬಿಗ್ ಬಜಾರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಫೋರಂ ಮಾಲ್, ಲಯನ್ಸ್ ಕ್ಲಬ್, ಅಡ್ಯಾರ್ ಪಂಚಾಯಿತಿ, ಅಡ್ಯಾರ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ ಲಸಿಕಾ ಅಭಿಯಾನವನ್ನು ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.