ADVERTISEMENT

ಮೃದಂಗ ವಿದ್ವಾನ್ ಎಂ.ಆರ್.ಸಾಯಿನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:21 IST
Last Updated 17 ಸೆಪ್ಟೆಂಬರ್ 2021, 16:21 IST
ಎಂ.ಆರ್.ಸಾಯಿನಾಥ್
ಎಂ.ಆರ್.ಸಾಯಿನಾಥ್   

ಮಂಗಳೂರು: ಮೃದಂಗ ವಿದ್ವಾನ್ ಎಂ.ಆರ್. ಸಾಯಿನಾಥ್ (66) ಹೃದಯಾಘಾತದಿಂದ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಪುತ್ರಿಯರಾದ ಎಂ.ಎಸ್.ಲಾವಣ್ಯ, ಎಂ.ಎಸ್.ಸುಬ್ಬಲಕ್ಷ್ಮಿ ಮತ್ತು ಪುತ್ರ ಎಂ.ಎಸ್.ಸುಧೀಂದ್ರ ಇದ್ದಾರೆ. ಈ ಮೂವರೂ ಸ್ಯಾಕ್ಸೊಫೋನ್ ಕಲಾವಿದರು.

ಮೈಸೂರು ಅರಮನೆಯ ಆಸ್ಥಾನ ವಿದ್ವಾನ್‌ ಆಗಿದ್ದ ಎಂ.ಆರ್‌.ರಾಜಪ್ಪ ಮತ್ತು ಸರೋಜಮ್ಮ ದಂಪತಿ ಪುತ್ರ ಸಾಯಿನಾಥ್‌, ತಂದೆಯಿಂದಲೇ ಮೃದಂಗ ವಾದನದ ಪ್ರಾಥಮಿಕ ಪಾಠ ಕಲಿತವರು. 1984ರಲ್ಲಿ ಆಲ್‌ ಇಂಡಿಯಾ ರೇಡಿಯೊ ಮಂಗಳೂರಿನಲ್ಲಿ ಅವರು ಮೃದಂಗ ಕಲಾವಿದರಾಗಿ ನೇಮಕಗೊಂಡರು. ನಂತರ ಬೆಂಗಳೂರಿಗೆ ವರ್ಗಾವಣೆಗೊಂಡು, ‘ಎ’ ಗ್ರೇಡ್ ಕಲಾವಿದರಾಗಿ ಗುರುತಿಸಿಕೊಂಡರು. ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆಸ್ಥಾನ ವಿದ್ವಾನ್ ಆಗಿದ್ದರು.

ಸಾಯಿನಾಥ್ ಅವರು ಹಿರಿಯ ಕಲಾವಿದರ ಜೊತೆ ದೇಶ–ವಿದೇಶಗಳಲ್ಲಿ ಅನೇಕ ಸಂಗೀತ ಕಚೇರಿಗಳನ್ನು ನೀಡಿದ್ದರು. ಅವರ ಸಾಧನೆಗೆ ‘ಲಯ ಕಲಾನಿಧಿ’, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.