ADVERTISEMENT

ಮಂಗಳೂರು | ಟೋಸ್ಟ್‌ಮಾಸ್ಟರ್ಸ್: ಭಾಷಣ ಸ್ಪರ್ಧೆ ಏ.2ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 14:28 IST
Last Updated 21 ಮಾರ್ಚ್ 2023, 14:28 IST

ಮಂಗಳೂರು: ಟೋಸ್ಟ್‌ಮಾಸ್ಟರ್ಸ್ ಇಂಟನ್‌ನ್ಯಾಷನಲ್ ವಿಭಾಗ ಎಲ್, ಜಿಲ್ಲೆ 121ರ ವತಿಯಿಂದ ಡಿವಿಷನ್ ಮೀಟ್-ಕ್ರಿಯೇಟಿಂಗ್ ಚಾಂಪಿಯನ್- ಭಾಷಣ ಸ್ಪರ್ಧೆ ಮತ್ತು ಮೌಲ್ಯಮಾಪನ ಭಾಷಣ ಸ್ಪರ್ಧೆ ಏ.2ರಂದು ಮಧ್ಯಾಹ್ನ 1.30ರಿಂದ ಸಂಜೆ 6ರವರೆಗೆ ಮುಡಿಪುದಲ್ಲಿರುವ ಇನ್ಫೋಸಿಸ್‌ನಲ್ಲಿ ನಡೆಯಲಿದೆ.

ಎರಡೂ ವಿಭಾಗಗಳ ವಿಜೇತರು ಮೇ ತಿಂಗಳಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆಯುವ ಜಿಲ್ಲಾ 121 ಹಂತಕ್ಕೆ ಆಯ್ಕೆಯಾಗಲಿದ್ದಾರೆ. ಮಂಗಳೂರಿನಲ್ಲಿ ಟೋಸ್ಟ್‌ಮಾಸ್ಟರ್ಸ್ ಆಂದೋಲನ 2,000ನೇ ಇಸವಿಯಲ್ಲಿ ಆರಂಭವಾಗಿದೆ. ಆತ್ಮವಿಶ್ವಾಸದ ಸಂವಹನ, ನಾಯಕತ್ವ ಗುಣಗಳನ್ನು ಇಲ್ಲಿ ಕಲಿಯಬಹುದಾಗಿದೆ. ಸದಸ್ಯರು ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್‌ನಲ್ಲಿ ಮಾತನಾಡಬಹುದು ಎಂದು ಕಾರ್ಯಕ್ರಮ ಅಧ್ಯಕ್ಷೆ ಡಿಟಿಎಂ ಜ್ಯೋತಿಕಾ ಶೆಟ್ಟಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟೋಸ್ಟ್‌ಮಾಸ್ಟರ್ಸ್ ಪ್ರಮುಖರಾದ ಡೇರಿಲ್ ರಾಡ್ರಿಕ್ಸ್, ಮೀರಾ ಎ.ರಾವ್, ರಂಜನಿ ವಿಠ್ಠಲದಾಸ್, ಹರ್ಷರಾಜ್ ಗಟ್ಟಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.