ADVERTISEMENT

ಯುಪಿಎಸ್‌ಸಿ ಫಲಿತಾಂಶ: ಧಾರವಾಡ ಜಿಲ್ಲೆಯ ಮೇಘಾ ಜೈನ್‌ಗೆ 354ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 16:34 IST
Last Updated 24 ಸೆಪ್ಟೆಂಬರ್ 2021, 16:34 IST
ಮೇಘಾ ಜೈನ್‌
ಮೇಘಾ ಜೈನ್‌    

ಹುಬ್ಬಳ್ಳಿ: ‘ಯುಪಿಎಸ್‌ಸಿ ಪರೀಕ್ಷೆ ಪಾಸಾಗುವುದಕ್ಕಾಗಿ ಸಾಫ್ಟ್‌ವೇರ್ ಕಂಪನಿಯ ಕೆಲಸ ಬಿಟ್ಟು ಬಂದಿದ್ದೆ. ಪರಿಶ್ರಮಕ್ಕೆ ಕೊನೆಗೂ ಫಲ ದೊರೆತಿದೆ’ ಎಂದು ಧಾರವಾಡ ಜಿಲ್ಲೆಯ ನವಲಗುಂದದ ಮೇಘಾ ಜೈನ್‌ ಪ್ರತಿಕ್ರಿಯಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 354ನೇ ರ‍್ಯಾಂಕ್‌ ಗಳಿಸಿರುವ ಅವರು, ‘ನಿತ್ಯವೂ 10 ತಾಸು ಅಧ್ಯಯನ ಮಾಡುತ್ತಿದ್ದೆ. ಐದನೇ ಬಾರಿಗೆ ಯಶಸ್ಸು ದೊರೆತಿದೆ. ತುಂಬಾ ಖುಷಿಯಾಗಿದೆ. ಪೋಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ’ ಎಂದು ಹೇಳಿದರು.

ನವಲಗುಂದದ ರೋಟರಿ ಶಾಲೆಯಲ್ಲಿ ಪ್ರಾಥಮಿಕ, ಲಯನ್ಸ್‌ ಶಾಲೆಯಲ್ಲಿ ಪ್ರೌಢ, ಹುಬ್ಬಳ್ಳಿಯ ಪಿ.ಸಿ. ಜಾಬಿನ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಮೇಘನಾ ಅವರ ತಂದೆ ಮನೋಜ ಪಾರಸಮಲ್‌ ಜೈನ್‌ ಅವರು ನವಲಗುಂದದಲ್ಲಿ ಮೆಡಿಕಲ್‌ ಶಾಪ್‌ ಹೊಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.