ADVERTISEMENT

ಡಾ.ರಾಜೇಂದ್ರಗೆ ಜೆಪಿಎನ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 20:13 IST
Last Updated 3 ಫೆಬ್ರುವರಿ 2020, 20:13 IST
ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ಪ್ರತಿಭಾವಂತ ಈಡಿಗ ಸಮಾಜದ ವಿದ್ಯಾರ್ಥಿಗಳಿಗೆ ಜೆ.ಪಿ.ಸುಧಾಕರ್‌ ಪ್ರತಿಭಾ ಪುರಸ್ಕಾರ ವಿತರಿಸಿದರು. ಡಾ. ಹಂಪ ನಾಗರಾಜಯ್ಯ, ರಾಜೇಂದ್ರ ಜಾಲಪ್ಪ, ಡಾ.ಎಂ.ತಿಮ್ಮೇಗೌಡ, ಗಣ್ಯರು ಇದ್ದರು
ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ಪ್ರತಿಭಾವಂತ ಈಡಿಗ ಸಮಾಜದ ವಿದ್ಯಾರ್ಥಿಗಳಿಗೆ ಜೆ.ಪಿ.ಸುಧಾಕರ್‌ ಪ್ರತಿಭಾ ಪುರಸ್ಕಾರ ವಿತರಿಸಿದರು. ಡಾ. ಹಂಪ ನಾಗರಾಜಯ್ಯ, ರಾಜೇಂದ್ರ ಜಾಲಪ್ಪ, ಡಾ.ಎಂ.ತಿಮ್ಮೇಗೌಡ, ಗಣ್ಯರು ಇದ್ದರು   

ಮಾಗಡಿ: ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ನಾರಾಯಣ ಸ್ವಾಮಿ ಅವರ 68ನೇ ಜನ್ಮದಿನ ಮತ್ತು ಪ್ರತಿಷ್ಠಾನದ ಪ್ರಥಮ ವಾರ್ಷಿಕೋತ್ಸವ, ರಕ್ತದಾನ ಸಮಾರಂಭ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಆರ್.ಎಲ್.ಜಾಲಪ್ಪ ಅವರ ಪುತ್ರ ಡಾ.ರಾಜೇಂದ್ರ ಅವರಿಗೆ ಜೆ.ಪಿ.ಎನ್.ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈಡಿಗ ಸಮಾಜದ ಹಿರಿಯರಾದ ದಾಸೇಗೌಡ, ಎಸ್.ಜೆ.ಕಾಳೇಗೌಡ, ತುಮಕೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹಿರಿಯ ಅಧಿಕಾರಿ ಎಂ.ಆರ್.ಏಕಾಂತಪ್ಪ ಅವರನ್ನು ಸನ್ಮಾನಿಸಲಾಯಿತು.

ಈಡಿಗ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಹಿತಿ ಡಾ. ಹಂಪ ನಾಗರಾಜಯ್ಯ, ‘ರಾಜ್ಯದ ಅಭ್ಯುದಯಕ್ಕೆ ಈಡಿಗರ ಕೊಡುಗೆ ಅನನ್ಯವಾದುದು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಕನ್ನಡಿಗರ ಸಾಕ್ಷಿಪ್ರಜ್ಞೆಯಾಗಿವೆ’ ಎಂದು ತಿಳಿಸಿದರು.

ADVERTISEMENT

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ.ನಾಯಕ್ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್ ಮಾತನಾಡಿ, ‘₹65 ಲಕ್ಷ ವೆಚ್ಚದಲ್ಲಿ ಸೋಲೂರಿನಲ್ಲಿ ಈಡಿಗ ಸಮುದಾಯ ಭವನ ನಿರ್ಮಿಸಿದ್ದೇವೆ. ಪ್ರತಿವರ್ಷ ಫೆ.2ರಂದು ಜೆ.ಪಿ.ಹಬ್ಬ ಆಚರಿಸಲಾಗುವುದು’ ಎಂದರು.

ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಕೆ.ಪಿ.ಎಸ್.ಸಿ ಸದಸ್ಯ ಡಾ.ಲಕ್ಷ್ಮೀನರಸಯ್ಯ, ರಾಜ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಪಾರ್ವತಮ್ಮ ಜೆ.ಪಿ.ನಾರಾಯಣಸ್ವಾಮಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಇ.ಎನ್.ಕೃಷ್ಣಪ್ಪ, ಮಂಜಪ್ಪ, ಪೂರ್ಣೇಶ್‌, ಟ್ರಸ್ಟಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.