ADVERTISEMENT

‘ಎಂಬೆಡೆಡ್ ಸಿಸ್ಟಮ್ಸ್’ ಕಲಿಕೆ ಅದ್ಭುತ ಸೃಷ್ಟಿಸಬಲ್ಲದು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:58 IST
Last Updated 22 ಸೆಪ್ಟೆಂಬರ್ 2021, 4:58 IST
ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಕುಶಾಲ ನೇಸರ್ಕರ್ ಉದ್ಘಾಟಿಸಿದರು. ಡಾ.ಶಶಿಧರ ಕಲಶೆಟ್ಟಿ, ಡಾ.ಸಿದ್ದರಾಮ ಪಾಟೀಲ್‌, ಡಾ.ಎಸ್.ಎಸ್ ಹೆಬ್ಬಾಳ, ಡಾ.ಜಿ.ಎಸ್. ಬಿರಾದಾರ, ಡಾ.ರಾಕೇಶ ಹುಡೇದ ಇದ್ದರು
ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಕುಶಾಲ ನೇಸರ್ಕರ್ ಉದ್ಘಾಟಿಸಿದರು. ಡಾ.ಶಶಿಧರ ಕಲಶೆಟ್ಟಿ, ಡಾ.ಸಿದ್ದರಾಮ ಪಾಟೀಲ್‌, ಡಾ.ಎಸ್.ಎಸ್ ಹೆಬ್ಬಾಳ, ಡಾ.ಜಿ.ಎಸ್. ಬಿರಾದಾರ, ಡಾ.ರಾಕೇಶ ಹುಡೇದ ಇದ್ದರು   

ಕಲಬುರ್ಗಿ: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರವಾದ ಕ್ರಾಂತಿ ಮಾಡಿ, ಅದ್ಭುತವಾದ ಬದಲಾವಣೆಗಗಳು ಆಗುವುದಕ್ಕೆ ಕಾರಣವಾಗಿರುವ ಎಂಬೆಡೆಡ್ ಸಿಸ್ಟಮ್ಸ್ (ಅಂತರ್ಗತ ವ್ಯವಸ್ಥೆ) ಇವತ್ತು ಯುವ ಎಂಜಿನಿಯರ್‌ಗಳಲ್ಲಿ ಸಾಕಷ್ಟು ಸಂಚಲನ ಉಂಟು ಮಾಡುತ್ತಿದೆ’ ಎಂದುಬೆಂಗಳೂರಿನ ಎಡ್ ಗೇಟ್ ಟೆಕ್ನಾಲಜಿಯ ಎಂಜಿನಿಯರ್‌ ಕುಶಾಲ ನೇಸರ್ಕರ್ ಅಭಿಪ್ರಾಯಪಟ್ಟರು.

ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯುನ್ಮಾನ ಹಾಗೂ ದೂರಸಂಪರ್ಕ ವಿಭಾಗ ಹಾಗೂ ಬೆಂಗಳೂರಿನ ಎಡ್ ಗೇಟ್ ಟೆಕ್ನೊಲೊಜಿ ಸಹಯೋಗದಲ್ಲಿ ‘ಎಂಬೆಡೆಡ್ ಸಿಸ್ಟಮ್ಸ್‌– ಎ ಹ್ಯಾಂಡ್ಸ್ ಆನ್ ಅಪ್ರೋಚ್’ ವಿಷಯದ ಮೇಲೆ ಆಯೋಜಿಸಿದ ಮೂರು ದಿನಗಳ ವಿಶೇಷ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‌‘ಇಂಟರ್ನೆಟ್ ಆಫ್ ಥಿಂಗ್ಸ್‌ನ ಒಂದು ಭಾಗವಾಗಿರುವ ಈ ತಂತ್ರಜ್ಞಾನದ ಅನೇಕ ಅನ್ವೇಷಣೆಗಳು ನಮಗೆ ಜೀವನ ಸೌಕರ್ಯಗಳನ್ನು ಒದಗಿಸುವ ಮೂಲಕ, ದಿನನಿತ್ಯದ ಜೀವನವನ್ನು ಸಾಕಷ್ಟು ಸರಳ ಮಾಡುವುದರಲ್ಲಿ ಯಶಸ್ವಿಯಾಗಿವೆ. ತಾಂತ್ರಿಕ ಶಿಕ್ಷಣದಲ್ಲಿ ಎಂಬೆಡೆಡ್ ಸಿಸ್ಟಮ್ಸ್‌ ವಿಷಯದ ಕಲಿಕೆ ತನ್ನದೇ ಆದ ಮಹತ್ವ ಪಡೆದಿದೆ. ಹಾಗಾಗಿ ವಿದ್ಯಾರ್ಥಿಗಳನ್ನು ಈ ದಿಸೆಯಲ್ಲಿ ಸೆಳೆಯುವುದಕ್ಕೆ ಈ ತರಹದ ಕಾರ್ಯಾಗಾರ ಅಗತ್ಯವಿದೆ’ ಎಂದರು.

ADVERTISEMENT

ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶಶಿಧರ ಕಲಶೆಟ್ಟಿ ಮಾತನಾಡಿ, ‘ಈಗ ಹೊಸದಾಗಿ ಜಾರಿಯಾಗಲಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಈ ತರಹದ ತರಬೇತಿ ಕಾರ್ಯಕ್ರಮಗಳು ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತವೆ’ ಎಂದರು.

‘ಎಂಬೆಡೆಡ್ ಸಿಸ್ಟಮ್ಸ್‌ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹೇರಳವಾಗಿವೆ. ಆರ್ಥಿಕ ಲಾಭವೂ ಸೇರಿದಂತೆ, ಜೀವನ ಸೌಕರ್ಯಗಳನ್ನು ಒದಗಿಸುವ ಈ ತಂತ್ರಜ್ಞಾನದ ಕಲಿಕೆಯಿಂದ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಕಾಲೇಜಿನ ಡೀನ್ ಅಕಾಡೆಮಿಕ್ ಡಾ.ಸಿದ್ದರಾಮ ಪಾಟೀಲ್‌ ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್ ಹೆಬ್ಬಾಳಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್. ಬಿರಾದಾರ ಅತಿಥಿಗಳನ್ನು ಸ್ವಾಗತಿಸಿದರು. ಸ್ವಾತಿ ಪ್ರಾರ್ಥಿಸಿದರು. ಪ್ರೊ.ಎಸ್.ಕೆ. ಔರಾದ್ ವಂದಿಸಿದರು. ಡಾ.ಗೀತಾ ಪಾಟೀಲ ನಿರೂಪಿಸಿದರು.

ಕಾರ್ಯಕ್ರಮದ ಸಂಯೋಜಕ ಡಾ.ರಾಕೇಶ ಹುಡೇದ ಸೇರಿದಂತೆ ವಿಭಾಗದ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.