ADVERTISEMENT

ಮಡಿಕೇರಿ: ಲಂಚ ಪಡೆಯುವಾಗ ಕಾರ್ಯಪಾಲಕ ಎಂಜಿನಿಯರ್‌ ಸೇರಿ ಐವರು ಎಸಿಬಿ ಬಲೆಗೆ 

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:54 IST
Last Updated 18 ಸೆಪ್ಟೆಂಬರ್ 2021, 12:54 IST
ಇಇ ಶ್ರೀಕಂಠಯ್ಯ
ಇಇ ಶ್ರೀಕಂಠಯ್ಯ   

ಮಡಿಕೇರಿ: ರಸ್ತೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯ ಟೆಂಡರ್‌ ನೀಡಲು ಗುತ್ತಿದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕೊಡಗುಜಿಲ್ಲಾ ಪಂಚಾಯಿತಿಯ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸೇರಿ ಐವರು ಶನಿವಾರ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್‌ ಶ್ರೀಕಂಠಯ್ಯ, ಸಹಾಯಕ ಎಂಜಿನಿರ್‌ ತೌಸಿಫಿ, ಎಸ್‌ಡಿಎ ರಮೇಶ್‌, ಕವನ್‌ ಹಾಗೂ ಸಂತೋಷ್‌ ಅವರು ಎಸಿಬಿ ಬಲೆಗೆ ಬಿದ್ದವರು.

ಇವರಿಂದ ಒಟ್ಟು ₹ 4.10 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಎಸ್‌ಪಿ ಅರುಣಾಂಶು ಗಿರಿ ಮಾಹಿತಿ ನೀಡಿದ್ದಾರೆ.

ADVERTISEMENT

ಎಸಿಬಿ ಅಧಿಕಾರಿಗಳು ಕಚೇರಿಯ ಮೇಲೆ ದಾಳಿ ನಡೆಯುತ್ತಿದ್ದಂತೆ ಗುತ್ತಿಗೆದಾರರಿಂದ ಪಡೆದಿದ್ದ ಹಣವನ್ನು ಕಿಟಕಿಯ ಮೂಲಕ ಪಕ್ಕದ ಕಾಡಿಗೆ ಎಸೆದಿದ್ದರು. ಅದನ್ನು ಅಧಿಕಾರಿಗಳು ಹುಡುಕಿ ವಶ ಪಡಿಸಿಕೊಂಡರು. ಶ್ರೀಕಂಠಯ್ಯ ಅವರ ಮನೆಯ ಮೇಲೂ ದಾಳಿ ನಡೆದಿದೆ. ಗುತ್ತಿಗೆದಾರ ಬಡ್ಡೀರ ನಂದ ಎಂಬುವರು ಎಸಿಬಿಗೆ ಲಂಚ ಬೇಡಿಕೆಯಿಟ್ಟಿದ್ದ ದಾಖಲೆ ಸಹಿತ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.