ADVERTISEMENT

ಅಂತು ಬಾಲಕಿಗೆ ಸಿಕ್ಕಿತು ‘ಅಮ್ಮನ ನೆನಪು’ಗಳಿದ್ದ ಮೊಬೈಲ್‌ ಫೋನ್‌

‘ಅಮ್ಮನ ನೆನಪು ಮೊಬೈಲ್‌ನಲ್ಲಿವೆ, ಹುಡುಕಿ ಕೊಡಿ’ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಬಾಲಕಿ ಹೃತಿಕ್ಷಾ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 1:51 IST
Last Updated 20 ಆಗಸ್ಟ್ 2021, 1:51 IST
 ಹೃತಿಕ್ಷಾಗೆ ಫೋನ್‌ ಹಸ್ತಾಂತರಿಸುತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ
ಹೃತಿಕ್ಷಾಗೆ ಫೋನ್‌ ಹಸ್ತಾಂತರಿಸುತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ   

ಕುಶಾಲನಗರ: ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಬಸಪ್ಪ ಬಡಾವಣೆಯ ನಿವಾಸಿ ಪ್ರಭಾ ಅವರ ಕಳುವಾಗಿದ್ದ ಮೊಬೈಲ್‌ ಫೋನ್‌ ಮೂರು ತಿಂಗಳ ಬಳಿಕ ಪತ್ತೆಯಾಗಿದೆ. ತಾಯಿಯ ಮೊಬೈಲ್‌ ಫೋನ್ ಪಡೆದ ಮಗಳು ಹೃತಿಕ್ಷಾ ಸಂತೋಷಗೊಂಡಿದ್ದಾಳೆ.

‘ಆಸ್ಪತ್ರೆಯ ಗೋಡಾನ್‌ನಲ್ಲಿ ಫೋನ್‌ ಪತ್ತೆಯಾಗಿದ್ದು, ಮೊಬೈಲ್ ಕವರ್ ಬದಲಾಗಿದೆ. ಆದರೆ, ಡೇಟಾ ಸುರಕ್ಷಿತವಾಗಿದೆ. ಮಗಳಿಗೆ ಮೊಬೈಲ್ ಫೋನ್‌ಅನ್ನು ಹಸ್ತಾಂತರಿಸಿದ್ದೇವೆ. ಗೋಡಾನ್‌ಗೆ ಯಾರು ತಂದು ಹಾಕಿದ್ದಾರೆ ಎಂಬುದನ್ನು ತನಿಖೆ ಮಾಡುತ್ತೇವೆ’ ಎಂದುಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.

ADVERTISEMENT

‘ಅಮ್ಮನ ನೆನಪುಗಳಿರುವ ಮೊಬೈಲ್ ಫೋನ್‌ ಸಿಕ್ಕಿರುವುದು ಅಮ್ಮನೇ ಮರಳಿ ಬಂದಷ್ಟೇ ಸಂತಸವಾಗಿದೆ’ ಎಂದು ಹೃತಿಕ್ಷಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಳು.

ಮೂರು ತಿಂಗಳ ಹಿಂದೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿಪ್ರಭಾ ಕೋವಿಡ್‌ನಿಂದ ಮೃತಪಟ್ಟಿದ್ದರು. ಅವರ ಹತ್ತಿರವಿದ್ದ ಮೊಬೈಲ್ ಕಾಣೆಯಾಗಿತ್ತು. ‘ಮೊಬೈಲ್‌ನಲ್ಲಿ ತಾಯಿಯೊಂದಿಗಿನ ಒಡನಾಟದ ಚಿತ್ರಗಳು ಹಾಗೂ ವಿಡಿಯೊಗಳಿವೆ. ಮೊಬೈಲ್ ಹುಡುಕಿಕೊಡಿ...’ ಎಂದು ಮಗಳು ಹೃತಿಕ್ಷಾ, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.