ADVERTISEMENT

ಗಾಂಜಾ ಮಾರಾಟ: 5 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 2:54 IST
Last Updated 20 ಆಗಸ್ಟ್ 2021, 2:54 IST

ವಿರಾಜಪೇಟೆ: ಅಕ್ರಮವಾಗಿ ಗಾಂಜಾ ಮಾರಿದ್ದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ.

ಸಮೀಪದ ಕಲ್ಲುಬಾಣೆಯಲ್ಲಿ ವಾಸಿ, ಕೇರಳ ಮೂಲದ ಮಹಮ್ಮದ್ ಆಲಿ ಶಿಕ್ಷೆಗೆ ಒಳಗಾದವರು.

2015ರ ಜುಲೈ 24 ರಂದು ಸಮೀಪದ ಕಲ್ಲುಬಾಣೆಯ ತೋಟವೊಂದರ ಲೈನ್‌ಮನೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಮನೆಯಲ್ಲಿ ಸುಮಾರು ₹50 ಸಾವಿರ ಮೌಲ್ಯದ 1,250 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ADVERTISEMENT

ತನಿಖಾಧಿಕಾರಿ ಜಿ.ಕೆ. ಸುಬ್ರಹ್ಮಣ್ಯ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮ್ಮದ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.