ADVERTISEMENT

ಹಳೆತಾಲ್ಲೂಕಿನ ಭಗವತಿ ದೇವಾಲಯ| ಭಗವತಿ ದೇವರ ವಾರ್ಷಿಕ ಹಬ್ಬದ ವಿಜೃಂಭಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 7:00 IST
Last Updated 20 ಮಾರ್ಚ್ 2023, 7:00 IST
ನಾಪೋಕ್ಲು ಸಮೀಪದ ಹಳೆತಾಲ್ಲೂಕಿನ ಭಗವತಿ ದೇವಾಲಯದಲ್ಲಿ ಉತ್ಸವದ ಅಂಗವಾಗಿ ದೇವರ ನೃತ್ಯಬಲಿ ಜರುಗಿತು
ನಾಪೋಕ್ಲು ಸಮೀಪದ ಹಳೆತಾಲ್ಲೂಕಿನ ಭಗವತಿ ದೇವಾಲಯದಲ್ಲಿ ಉತ್ಸವದ ಅಂಗವಾಗಿ ದೇವರ ನೃತ್ಯಬಲಿ ಜರುಗಿತು   

ನಾಪೋಕ್ಲು: ಇಲ್ಲಿಗೆ ಸಮೀಪದ ಹಳೆತಾಲ್ಲೂಕಿನ ಭಗವತಿ ದೇವಾಲಯದಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ಜರುಗಿತು. ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಮಸ್ಥರು, ಭಕ್ತರು ದೇವಾಲಯದಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸಿದರು. ಮಧ್ಯಾಹ್ನ 12 ಗಂಟೆಗೆ ಎತ್ತು ಪೋರಾಟದೊಂದಿಗೆ ದೇವಾಲಯದ ಪ್ರದಕ್ಷಿಣೆ ಬರಲಾಯಿತು. ಉತ್ಸವ ವೀಕ್ಷಣೆಗೆ ಬಂದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವಾಲಯದಲ್ಲಿ ದೇವರ ಮೂರ್ತಿಯನ್ನು ಹೊತ್ತು ನೃತ್ಯ ಬಲಿ ಕಾರ್ಯಕ್ರಮ ನಡೆಯಿತು. ದೇವರ ನೃತ್ಯವನ್ನು ಅಧಿಕ ಸಂಖ್ಯೆಯ ಭಕ್ತರು ವೀಕ್ಷಿಸಿದರು.

ಸೋಮವಾರ ಸಂಜೆ ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ಮತ್ತು ಪಟ್ಟಣದಲ್ಲಿ ದೇವರ ಮೂರ್ತಿಯ ಮೆರವಣಿಗೆ ನಡೆಯಲಿದೆ.

ADVERTISEMENT

ಪೂಜಾ ವಿಧಿವಿಧಾನಗಳನ್ನು ದೇವಾಲಯದ ಅರ್ಚಕ ಹರೀಶ್ ಕೇಕುಣ್ಣಾಯ ನೆರವೇರಿಸಿದರು. ತಂತ್ರಿಗಳಾಗಿ ಪೇರೂರಿನ ಹರೀಶ್ ಭಟ್ ಕಾರ್ಯನಿರ್ವಹಿಸಿದರು. ದೇವಾಲಯದ ಆಡಳಿತ ಮಂಡಳಿ ಸದಸ್ಯರು, ತಕ್ಕ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಹಲವು ವರ್ಷಗಳಿಂದ ನಿರಂತರ ವಾಗಿ ಆಚರಿಸಿಕೊಂಡು ಬರುತ್ತಿರುವ ಭದ್ರಕಾಳಿ, ಭಗವತಿ ದೇವರ ವಾರ್ಷಿಕ ಉತ್ಸವದಲ್ಲಿ ರಾತ್ರಿ ವಿವಿಧ ದೇವರ ಕೋಲ, ನುಚ್ಚುಟೆ, ನರಿಪೂದ, ಅಂಜಿ ಕೂಟ್ ಮೂರ್ತಿಯಡ ಕೋಲ, ಕಲಿಯಾಟ ಅಜ್ಜಪ್ಪ ದೇವರ ಕೋಲ, ವಿಷ್ಣುಮೂರ್ತಿ ದೇವರ ಕೋಲ ಗಳೊಂದಿಗೆ ಹಬ್ಬಕ್ಕೆ ತೆರೆಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.