ADVERTISEMENT

ಕಾವೇರಿ ನದಿ ತೀರ್ಥ ಮಾರಾಟಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 5:12 IST
Last Updated 16 ಮಾರ್ಚ್ 2023, 5:12 IST

ಮಡಿಕೇರಿ: ಕಾವೇರಿ ನದಿಯ ತೀರ್ಥವನ್ನು ‘ಇ–ಪ್ರಸಾದ’ ಯೋಜನೆಯಡಿ ಅಂಚೆ ಮೂಲಕ ವಿತರಿಸುವುದಕ್ಕೆ ತಲಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

‘ತಲಕಾವೇರಿ ಕ್ಷೇತ್ರ ಬೇರೆ ಕ್ಷೇತ್ರಗಳಂತೆ ಅಲ್ಲ. ತೀರ್ಥರೂಪಿಣಿಯಾದ ಕಾವೇರಿಯನ್ನು ಹಣಕ್ಕೆ ಮಾರಾಟ ಮಾಡುವುದು ಸರಿಯಲ್ಲ. ಕೂಡಲೇ ಅಂಚೆ ಕಚೇರಿಯಿಂದ ಮಾರಾಟ ಮಾಡುವ ಈ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ವೇದಿಕೆಯ ಸಂಚಾಲಕ ಉಳ್ಳಿಯಡ ಎಂ.ಪೂವಯ್ಯ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕೃತಿಯ ನಡುವೆ ಇರುವ ತಲಕಾವೇರಿಗೆ ತೆರಳಿ ಪೂಜ್ಯಭಾವನೆಯಿಂದ ತೀರ್ಥ ಸ್ವೀಕರಿಸುವುದು ಕ್ರಮ. ಇಂತಹ ತೀರ್ಥವನ್ನು ಮಾರಾಟ ಮಾಡಲು ಅನುಮತಿ ನೀಡಿದವರು ಯಾರು ಎಂದೂ ಅವರು ಪ್ರಶ್ನಿಸಿದರು.

ADVERTISEMENT

ವೇದಿಕೆಯ ಕಾನೂನು ಸಲಹೆಗಾರ ರತನ್ ತಮ್ಮಯ್ಯ, ಸದಸ್ಯೆ ಉಳ್ಳಿಯಡ ಡಾಟಿ ಪೂವಯ್ಯ, ಪುಡಿಯಂಡ ಕೆ ಮುತ್ತಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.