ADVERTISEMENT

ಮಳೆ ಬಿಡುವು: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 5:12 IST
Last Updated 28 ಜೂನ್ 2021, 5:12 IST
ಶನಿವಾರಸಂತೆ ಸಮೀಪದ ಕ್ಯಾತನಳ್ಳಿ ಗದ್ದೆಯಲ್ಲಿ ಭತ್ತ ನಾಟಿಗಾಗಿ ಉಳುಮೆ ಮಾಡುತ್ತಿರುವ ರೈತ
ಶನಿವಾರಸಂತೆ ಸಮೀಪದ ಕ್ಯಾತನಳ್ಳಿ ಗದ್ದೆಯಲ್ಲಿ ಭತ್ತ ನಾಟಿಗಾಗಿ ಉಳುಮೆ ಮಾಡುತ್ತಿರುವ ರೈತ   

ಶನಿವಾರಸಂತೆ: ಹೋಬಳಿಯಾದ್ಯಂತ ವಾರದಿಂದ ಬಿಸಿಲಿನ ವಾತಾವರ ಣವಿದ್ದು, ಕೃಷಿ ಚಟುವಟಿಕೆ ಚುರುಕಾಗಿದೆ. ಮಳೆ ಬಿಡುವು ನೀಡಿರುವುದರಿಂದ ರೈತರು ಭತ್ತದ ಕೃಷಿ ಮಾಡಲು ಅನುಕೂಲವಾಗಿದೆ.

ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಮತ್ತಿತರ ಗ್ರಾಮಗಳ ಗದ್ದೆಗಳಲ್ಲಿ ರೈತರು ನಾಟಿಗಾಗಿ ತುಂಗಾ, ರಾಜಮುಡಿ, ಚಿಪ್ಪಿಗ ಭತ್ತದ ಅಗೆ ಹಾಕಿದ್ದು, ಸಸಿ ಮಡಿ ಬೆಳೆದು ನಿಂತಿದೆ. ಇದು ಐದುವರೆ ತಿಂಗಳ ಬೆಳೆಯಾಗಿದ್ದು, ಕಟಾವಿಗೆ ಬರುತ್ತದೆ. ತಗ್ಗಿನ ಅಥವಾ ಹಳ್ಳ ಗದ್ದೆಗಳಿಗೆ ಉತ್ತಮವಾಗಿದೆ ಎನ್ನುತ್ತಾರೆ ರೈತರು.

‘ಮಕ್ಕಿ ಗದ್ದೆಗಳಿಗೆ 4 ತಿಂಗಳಿಗೆ ಕಟಾವಿಗೆ ಬರುವ ಹೈಬ್ರೀಡ್ ತಳಿಗಳು ಉತ್ತಮವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ನೀರು ಕಡಿಮೆಯಾಗುತ್ತದೆ. ರೈತರು ಈಗಾಗಲೇ ದೀರ್ಘಾವಧಿ ಭತ್ತದ ತಳಿಗಳನ್ನು ಬಿತ್ತನೆ ಮಾಡಿದ್ದಾರೆ. ಜುಲೈ ತಿಂಗಳ ಕೊನೆ ವಾರದೊಳಗೆ ನಾಟಿ ಮಾಡಬೇಕು. ಇಲ್ಲವಾದಲ್ಲಿ ಕಟಾವಿಗೆ ಬರುವುದು ತಡವಾಗಿ ನವೆಂಬರ್ ಚಳಿಗೆ ಸಿಲುಕಿ ಭತ್ತ ಜೊಳ್ಳು ಆಗುವ ಸಾಧ್ಯತೆ ಹೆಚ್ಚು’ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ಎಸ್.ಎಂ.ಉಮಾಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.