ADVERTISEMENT

ಅರಮೇರಿ: ಸ್ಕೂಟರ್‌ ಹಳ್ಳಕ್ಕೆ ಬಿದ್ದು ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 6:04 IST
Last Updated 29 ಜೂನ್ 2021, 6:04 IST
ವಿರಾಜಪೇಟೆ ಸಮೀಪದ ಅರಮೇರಿ ಯಲ್ಲಿ ಅಪಘಾತಕ್ಕೀಡಾದ ಸ್ಕೂಟರ್‌
ವಿರಾಜಪೇಟೆ ಸಮೀಪದ ಅರಮೇರಿ ಯಲ್ಲಿ ಅಪಘಾತಕ್ಕೀಡಾದ ಸ್ಕೂಟರ್‌   

ವಿರಾಜಪೇಟೆ:ಸಮೀಪದ ಅರಮೇರಿ ಗ್ರಾಮದಲ್ಲಿ ಸೋಮವಾರ ನಿಯಂತ್ರಣ ತಪ್ಪಿ ಸ್ಕೂಟರ್‌ ಹಳ್ಳಕ್ಕೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ
ಮೃತಪಟ್ಟಿದ್ದಾರೆ.

ಹಾಕತ್ತೂರು ಸಮೀಪದ ಹುಲಿತಾಳ ಗ್ರಾಮದ ನಿವಾಸಿ ಓಡಿಯಂಡ ಚಂಗಪ್ಪ (60) ಮೃತರು.

ಸೋಮವಾರ ಬೆಳಿಗ್ಗೆ ಚಂಗಪ್ಪ ಅವರು ವಿರಾಜಪೇಟೆ ಸಮೀಪದ ಕಂಡಂಗಾಲ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ತೆರಳುವಾಗ ಮಡಿಕೇರಿ-ವಿರಾಜಪೇಟೆ ಮುಖ್ಯರಸ್ತೆ ಬದಿಯ ಹಳ್ಳಕ್ಕೆ ಸ್ಕೂಟರ್‌ ಬಿದ್ದಿದೆ. ಸ್ಥಳದಲ್ಲೇ ಚಂಗಪ್ಪ ಅವರು
ಮೃತಪಟ್ಟಿದ್ದಾರೆ.

ADVERTISEMENT

ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಮೃತದೇಹ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.