ADVERTISEMENT

ಪೊನ್ನಂಪೇಟೆ: ತೂಚಮಕೇರಿಯಲ್ಲಿ 10 ಅಡಿ ಕಾಳಿಂಗ ಸರ್ಪ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 5:41 IST
Last Updated 21 ಜುಲೈ 2021, 5:41 IST
ಗೋಣಿಕೊಪ್ಪಲು ಬಳಿಯ ತೂಚಮಕೇರಿಯಲ್ಲಿ ಕಂಡುಬಂದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಭಾವೆ ಸೆರೆ ಹಿಡಿದರು
ಗೋಣಿಕೊಪ್ಪಲು ಬಳಿಯ ತೂಚಮಕೇರಿಯಲ್ಲಿ ಕಂಡುಬಂದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಭಾವೆ ಸೆರೆ ಹಿಡಿದರು   

ಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ತೂಚಮಕೇರಿಯ ಮುಂಡುಮಾಡ ಬಿ. ಪ್ರವೀಣ್ ಅವರ ಮನೆ ಆವರಣದಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಭಾವೆ ಹಿಡಿದು ಮಾಕುಟ್ಟ ಅರಣ್ಯಕ್ಕೆ ಬಿಟ್ಟರು.

ಮುಂಡುಮಾಡ ಬಿ. ಪ್ರವೀಣ್ ಅವರ ಮನೆಯ ಸಮೀಪದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಗ್ರಾಮಸ್ಥರು ಸ್ನೇಕ್‌ ಭಾವೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಭಾವೆ ಅವರು, ಕಾಳಿಂಗ ಸರ್ಪವನ್ನು ಅತ್ಯಂತ ಜಾಣ್ಮೆಯಿಂದ ಸೆರೆ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.