ADVERTISEMENT

ಸುಂಟಿಕೊಪ್ಪ: ಗ್ರಾಮ ದೇವರ ವಾರ್ಷಿಕ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 4:22 IST
Last Updated 11 ಮಾರ್ಚ್ 2023, 4:22 IST
ಸುಂಟಿಕೊಪ್ಪದ ಗ್ರಾಮ ದೇವರ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು
ಸುಂಟಿಕೊಪ್ಪದ ಗ್ರಾಮ ದೇವರ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು   

ಸುಂಟಿಕೊಪ್ಪ: ಇಲ್ಲಿನ ಗ್ರಾಮ ದೇವರ ನಾಲ್ಕನೇ ವರ್ಷದ ವಾರ್ಷಿಕ ಪೂಜೋತ್ಸವವು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ, ರಾಮ ಸೇವಾ ಸಮಿತಿ, ಅಯ್ಯಪ್ಪ ದೇವಾಲಯ, ಗೌರಿ ಗಣೇಶೋತ್ಸವ, ಮಸಣಕಮ್ಮ‌ ದೇವಸ್ಥಾನ, ವೃಕ್ಷೋದ್ಭವ ಗಣಪತಿ ದೇವಾಲಯ, ಟಿಸಿಎಲ್ ಚಾಮುಂಡೇಶ್ವರಿ ದೇವಸ್ಥಾನ, ಶ್ರೀದೇವಿ ಅಣ್ಣಪ್ಪ ದೇವಾಲಯ, ಬಾಳೆಕಾಡು ಮುತ್ತಪ್ಪ ದೇವಸ್ಥಾನ ಸಮಿತಿ ಸಹಭಾಗಿತ್ವದಲ್ಲಿ ಶುಕ್ರವಾರದಂದು ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಅರ್ಚಕ ಗಣೇಶ್ ಭಟ್ ಅವರಿಂದ ಸ್ಥಳ ಶುದ್ಧಿ ಕಳಸದೊಂದಿಗೆ ಪೂಜಾ ವಿಧಿವಿಧಾನಗಳು ನಡೆದವು.

ಕುಂಕುಮ ಪೂಜೆ, ಅಲಂಕಾರ ಪೂಜೆಯ ನಂತರ 10.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನಂತರ ಗ್ರಾಮ ದೇವರಿಗೆ ಹರಕೆ ಸಮರ್ಪಣೆ ನಡೆಯಿತು‌. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮ ದೇವತೆಗೆ ಹರಕೆ ಒಪ್ಪಿಸಿ ಸಂತೃಪ್ತರಾದರು.

ADVERTISEMENT

ದಿನು ದೇವಯ್ಯ, ಎ.ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಪಟ್ಟೆ ಮನೆ ಉದಯಕುಮಾರ್, ಪಟ್ಟೆಮನೆ ಲೋಕೇಶ್, ಪಟ್ಟೆಮನೆ ಅನಿಲ್ ಕುಮಾರ್, ಬಿ.ಕೆ.ಪ್ರಶಾಂತ್, ಶ್ರೀಧರನ್, ಶಿವಕುಮಾರ್, ಎ.ಲೋಕೇಶ್ ಕುಮಾರ್, ಬಿ.ಬಿ.ಭಾರತೀಶ್, ಮನು ರೈ, ಶಾಂತರಾಮ್ ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.