ADVERTISEMENT

ಕೊಡಗಿನಲ್ಲಿ ಮಳೆಯ ಅಬ್ಬರ: ಹಾರಂಗಿಯಿಂದ 6,000 ಕ್ಯುಸೆಕ್ ನೀರು‌ ಬಿಡುಗಡೆ

ಕೊಡಗಿನಲ್ಲಿ ಗಾಳಿ, ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 16:38 IST
Last Updated 14 ಜುಲೈ 2021, 16:38 IST
 ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಿರುವುದು
ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಿರುವುದು   

ಮಡಿಕೇರಿ: ಕೊಡಗಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಾರಂಗಿ ಜಲಾಶಯದ ಒಳಹರಿವು ಏರುತ್ತಲೇ ಇದೆ. ಬುಧವಾರ ರಾತ್ರಿ ನದಿಗೆ 6,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.

ಜಲಾಶಯದ ಒಳಹರಿವು 19,000 ಕ್ಯುಸೆಕ್‌ಗೆ ಏರಿಕೆಯಾಗಿದೆ. ಬುಧವಾರ ಸಂಜೆ ವೇಳೆಗೆ 12,000 ಕ್ಯುಸೆಕ್ ಒಳಹರಿವು ಇತ್ತು.

ನಾಲ್ಕು ಕ್ರೆಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಗರಿಷ್ಠಮಟ್ಟವು 2,859 ಅಡಿಯಾಗಿದ್ದು ರಾತ್ರಿ ವೇಳೆಗೆ ಬಹುತೇಕ ಭರ್ತಿಯಾಗುವ ಹಂತ ತಲುಪಿತ್ತು. ಭದ್ರತಾ ದೃಷ್ಟಿಯಿಂದ ರಾತ್ರಿಯೇ ನೀರು ಬಿಡುಗಡೆ ಮಾಡಲಾಗಿದೆ.‌

ADVERTISEMENT

ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಕೋರಲಾಗಿದೆ. ಕುಶಾಲನಗರದ ಹಲವು ಬಡಾವಣೆಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.