ADVERTISEMENT

ಗುಣಮಟ್ಟದ ಕಾಮಗಾರಿ ಮಾಡಿ: ಜಿ.ಪಂ. ಸಿಇಒ ಬಿ.ಫೌಜಿಯಾ ತರನ್ನುಮ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:46 IST
Last Updated 22 ಸೆಪ್ಟೆಂಬರ್ 2021, 3:46 IST
ಕೊಪ್ಪಳ ತಾಲ್ಲೂಕಿನ ಇರಕಲ್ಲಗಡಾ ಸಮೀಪದ ರೇಷ್ಮೆ ತೋಟಕ್ಕೆ ಜಿ. ಪಂ. ಸಿಇಒ ಫೌಜೀಯಾ ತರುನ್ನುಮ್ ಭೇಟಿ ನೀಡಿ ವೀಕ್ಷಿಸಿದರು
ಕೊಪ್ಪಳ ತಾಲ್ಲೂಕಿನ ಇರಕಲ್ಲಗಡಾ ಸಮೀಪದ ರೇಷ್ಮೆ ತೋಟಕ್ಕೆ ಜಿ. ಪಂ. ಸಿಇಒ ಫೌಜೀಯಾ ತರುನ್ನುಮ್ ಭೇಟಿ ನೀಡಿ ವೀಕ್ಷಿಸಿದರು   

ಕೊಪ್ಪಳ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಅವರುಮಂಗಳವಾರ ಭೇಟಿ ನೀಡಿ, ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆಯಿಂದ ಅನುಷ್ಠಾನಗೊಂಡ ಕಾಮಗಾರಿ ವೀಕ್ಷಣೆ ಮಾಡಿದರು.

ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆಯಿಂದ ತಾಲ್ಲೂಕಿನ ಕಾಮನೂರು, ಹಟ್ಟಿ, ಇರಕಲ್ಲಗಡಾ ಹಾಗೂ ಕೊಡದಾಳ ಗ್ರಾಮಗಳಲ್ಲಿ ಅನುಷ್ಠಾನಗೊಂಡ ವಿವಿಧ ಕಾಮಗಾರಿ ಸ್ಥಳಕ್ಕೆಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.

ಇರಕಲ್ಲಗಡಾ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ಘಟಕ ವೀಕ್ಷಿಸಿದರು.ಕಾಮಗಾರಿ ಅನುಷ್ಠಾನದಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಇದರ ಸದ್ಭಳಕೆ ಯಾಗುವಂತೆ ಕ್ರಮ ವಹಿಸಲು ನಿರ್ದೇಶನ ನೀಡಿದರು.

ADVERTISEMENT

ನಂತರ ಕೊಡದಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಶಿಕ್ಷಕರು ಮಕ್ಕಳ ಕಲಿಕೆಯ ಕುರಿತು ವಿಚಾರ ವಿನಿಮಯನಡೆಸಿ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಅಲ್ಲದೆ ಶಾಲೆಯ ಪೌಷ್ಟಿಕ ತೋಟ ಪರಿಶೀಲಿಸಿ, ಮಕ್ಕಳ ಜೊತೆ ಚರ್ಚಿಸಿ, 'ಚೆನ್ನಾಗಿ ಓದಿ ಮುಂದೆ ಉನ್ನತ ಸ್ಥಾನದಲ್ಲಿ ಹೋಗಿ ನಿಮ್ಮ ಮನೆಗೆ, ಶಾಲೆ, ಗ್ರಾಮ, ಜಿಲ್ಲೆ ಹಾಗೂ ಈ ರಾಜ್ಯಕ್ಕೆ ಕೀರ್ತಿ ತರಬೇಕು‘ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ.ಎಚ್.ನಾಗರಾಜ್ ಸೇರಿದಂತೆ ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ), ತಾಲ್ಲೂಕು ಐಇಸಿ ಸಂಯೋಜಕರು, ಹೋಬಳಿ ಮಟ್ಟದ ಅಧಿಕಾರಿಗಳು, ಇರಕಲ್ಲಗಡಾ ಗ್ರಾಪಂ ಪಿಡಿಒ, ತಾಂತ್ರಿಕ ಸಹಾಯಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.