ADVERTISEMENT

ಕಚುವಿನಹಳ್ಳಿ ಅರಣ್ಯ ಪ್ರದೇಶ: 12 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಹುಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಕಂಡ ಶವ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 2:07 IST
Last Updated 18 ಸೆಪ್ಟೆಂಬರ್ 2021, 2:07 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಚುವಿನಹಳ್ಳಿ ಅರಣ್ಯ ಪ್ರದೇಶದ ಕಲ್ಲಾರ ಕೆರೆ ಹಿಂಭಾಗದಲ್ಲಿ ಗಂಡು ಹುಲಿ ಕಳೇಬರ ಪತ್ತೆಯಾಗಿದೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಚುವಿನಹಳ್ಳಿ ಅರಣ್ಯ ಪ್ರದೇಶದ ಕಲ್ಲಾರ ಕೆರೆ ಹಿಂಭಾಗದಲ್ಲಿ ಗಂಡು ಹುಲಿ ಕಳೇಬರ ಪತ್ತೆಯಾಗಿದೆ   

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಚುವಿನಹಳ್ಳಿ ಅರಣ್ಯ ಪ್ರದೇಶದ ಕಲ್ಲಾರ ಕೆರೆ ಹಿಂಭಾಗದಲ್ಲಿ 10ರಿಂದ 12 ವರ್ಷದ ಗಂಡು ಹುಲಿ ಕಳೇಬರ ಪತ್ತೆಯಾಗಿದೆ.

ಅರಣ್ಯ ಇಲಾಖೆಯ ಕಚುವಿನಹಳ್ಳಿ ಶಾಖೆ ಸಿಬ್ಬಂದಿ ಶುಕ್ರವಾರ ಸಾಕಾನೆಗಳ ಸಹಾಯದಿಂದ ಹುಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಇದು ಪತ್ತೆಯಾಗಿದೆ.

ಪಶು ವೈದ್ಯಾಧಿಕಾರಿಗಳಾದ ವಾಸಿಂ ಮಿರ್ಜಾ ಮತ್ತು ರಮೇಶ್ ಕುಮಾರ್ ಹುಲಿ ಮರಣೋತ್ತರ ಪರೀಕ್ಷೆ ನಡೆಸಿದರು. ದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ADVERTISEMENT

ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ವಲಯ ಅರಣ್ಯಾಧಿಕಾರಿ ಹನುಮಂತರಾಜು, ವೆಂಕಟನಾಯ್ಡು ಮತ್ತು ಕೃತಿಕಾ ಆಲನಹಳ್ಳಿ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.