ADVERTISEMENT

ಆಂಬುಲೆನ್ಸ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:34 IST
Last Updated 19 ಸೆಪ್ಟೆಂಬರ್ 2021, 4:34 IST
ಲಿಂಗಸುಗೂರಿನಲ್ಲಿ ಆಂಬುಲೆನ್ಸ್‌ ಸೇವೆಗೆ ಶಾಸಕ ಡಿ.ಎಸ್‌.ಹೂಲಗೇರಿ ಅವರು ಚಾಲನೆ ನೀಡಿದರು
ಲಿಂಗಸುಗೂರಿನಲ್ಲಿ ಆಂಬುಲೆನ್ಸ್‌ ಸೇವೆಗೆ ಶಾಸಕ ಡಿ.ಎಸ್‌.ಹೂಲಗೇರಿ ಅವರು ಚಾಲನೆ ನೀಡಿದರು   

ಲಿಂಗಸುಗೂರು: ‘ಜಿಲ್ಲೆಗೆ ಬಂದಿರುವ 10 ಆಂಬುಲೆನ್ಸ್‌ಗಳ ಪೈಕಿ ಮೂರನ್ನು ತಾಲ್ಲೂಕಿಗೆ ನೀಡಿದ್ದಾರೆ. ಆರೋಗ್ಯ ಇಲಾಖೆ ಇವುಗಳನ್ನು ಸಮರ್ಪಕವಾಗಿ ಬಳಸಬೇಕು’ ಎಂದು ಶಾಸಕ ಡಿ.ಎಸ್‍ ಹೂಲಗೇರಿ ಮನವಿ ಮಾಡಿದರು.

ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು,‘ಅವುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಆನೆಹೊಸೂರು ಆಸ್ಪತ್ರೆಗಳಿಗೆ ನೀಡಲಾಗಿದೆ. ವೈದ್ಯ ಸಮೂಹ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ ಮಾತನಾಡಿ,‘ಸಿಎಸ್‍ಆರ್ ನಿಧಿಯಡಿ ಭಾರತ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಜಿಲ್ಲೆಗೆ 10 ಆಂಬುಲೆನ್ಸ್‌ಗಳನ್ನು ಪೂರೈಸಿದೆ. ಶಾಸಕ ಹೂಲಗೇರಿ ಅವರ ಪ್ರಯತ್ನದಿಂದ ತಾಲ್ಲೂಕಿಗೆ ಮೂರು ಆಂಬುಲೆನ್ಸ್‌ ದೊರಕಿವೆ’ ಎಂದು ಹೇಳಿದರು.

ADVERTISEMENT

ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ, ಸದಸ್ಯರಾದ ರವೂಫ್‍ ಗ್ಯಾರಂಟಿ, ಪಿಕಾರ್ಡ್‌ ಬ್ಯಾಂಕ್‍ ಅಧ್ಯಕ್ಷ ಮಹಾಂತೇಶ ಪಾಟೀಲ ಮುದಗಲ್‌, ಮುಖಂಡರಾದ ಶರಣಪ್ಪ ಮೇಟಿ, ಪಾಮಯ್ಯ ಮುರಾರಿ, ಮಲ್ಲಣ್ಣ ವಾರದ, ವಾಹಿದ್‍ ಖಾದ್ರಿ, ಅಮರೇಶ ನಾಡಗೌಡ್ರ, ಶಿವಾನಂದ ಐದನಾಳ, ರುದ್ರಗೌಡ ಮಾವಿನಭಾವಿ ಹಾಗೂ ಸಂಗಪ್ಪ ಹೊಸಮನಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.