ADVERTISEMENT

ಮಾಗಡಿ: ಪುರಸಭೆ ಹೊರಗುತ್ತಿಗೆ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:45 IST
Last Updated 22 ಸೆಪ್ಟೆಂಬರ್ 2021, 4:45 IST
ಮಾಗಡಿ ಪುರಸಭೆ ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಉಮಾಶಂಕರ್‌, ಉಪಾಧ್ಯಕ್ಷ ಇನಾಯತ್‌ ಖಾನ್‌, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರೆಹಮತ್‌ ಉಲ್ಲಾಖಾನ್‌, ಸದಸ್ಯರಾದ ಜಯರಾಮು, ವಿಜಯರೂಪೇಶ್‌ ಇದ್ದರು
ಮಾಗಡಿ ಪುರಸಭೆ ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಸಂಘದ ಅಧ್ಯಕ್ಷ ಉಮಾಶಂಕರ್‌, ಉಪಾಧ್ಯಕ್ಷ ಇನಾಯತ್‌ ಖಾನ್‌, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರೆಹಮತ್‌ ಉಲ್ಲಾಖಾನ್‌, ಸದಸ್ಯರಾದ ಜಯರಾಮು, ವಿಜಯರೂಪೇಶ್‌ ಇದ್ದರು   

ಮಾಗಡಿ: ಪುರಸಭೆಯಲ್ಲಿ ಹೊರಗುತ್ತಿಗೆ ವಾಹನ ಚಾಲಕರು, ವಾಟರ್‌ಮ್ಯಾನ್, ಡೇಟಾ ಆಪರೇಟರ್‌ಗಳನ್ನು ಗುತ್ತಿಗೆ ಪದ್ಧತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಪೌರಸೇವಾ ಹೊರಗುತ್ತಿಗೆ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಉಪಾಧ್ಯಕ್ಷ ರೆಹಮತ್ ಉಲ್ಲಾ ಖಾನ್ ಮಾತನಾಡಿ, 'ಸರ್ಕಾರಿ ಹೊರಗುತ್ತಿಗೆಯನ್ನು ರದ್ದುಪಡಿಸಿ, ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವವರನ್ನು ಕಾಯಂಗೊಳಿಸಬೇಕು’ ಎಂದರು.

ಪುರಸಭೆ ಅಧ್ಯಕ್ಷ ಭಾಗ್ಯಮ್ಮ ಮಾತನಾಡಿ, ‘ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಬಿಜೆಪಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಅವರೊಂದಿಗೆ ಮಾತನಾಡಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತೇವೆ’ ಎಂದರು.

ADVERTISEMENT

ಪುರಸಭೆ ಸದಸ್ಯರಾದ ಜಯರಾಮು, ವಿಜಯಲಕ್ಷ್ಮೀ ರೂಪೇಶ್ ಹೊರಗುತ್ತಿಗೆ ನೌಕರರ ನ್ಯಾಯೋಚಿತ ಬೇಡಿಕೆಗಳನ್ನು ಸರ್ಕಾರ ಕೂಡಲೆ ಈಡೇರಿಸಬೇಕು ಎಂದರು.

ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಉಮಾಶಂಕರ್, ಉಪಾಧ್ಯಕ್ಷ ಇನಾಯತ್ ಖಾನ್, ಕಾರ್ಯದರ್ಶಿ ಚಿಕ್ಕನರಸಯ್ಯ, ಸದಸ್ಯರಾದ ಶ್ರೀನಿವಾಸ್, ಮಹಲಿಂಗರಾಜು, ದೊಡ್ಡಯ್ಯ, ಗೋವಿಂದ ಬೇಡಿಕೆಗಳನ್ನು ಕುರಿತು ಮಾತನಾಡಿ ಬೆಂಗಳೂರಿನಲ್ಲಿ ನಡೆಯತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಲಿದ್ದೇವೆ ಎಂದರು.

ಸಂಘದ ಸದಸ್ಯರಾದ ನಟರಾಜ, ಅಮ್ಮಯಮ್ಮ, ರೇವಣ್ಣ, ವಿಜಾ, ರಮೇಶ್, ಲತಾ, ಸ್ವಾಮಿ, ವಾಟರ್‌ಮ್ಯಾನ್‌ ಸಿದ್ದರಾಜು, ರಾಜಣ್ಣ, ಲೋಕ, ಕುಮಾರ್, ಮಂಜುನಾಥ್ ಹಾಗೂ ಸದಸ್ಯೆಲ್ಲರೂ ಸಾಂಕೇತಿಕ ಧರಣಿ ನಡೆಸಿ ಬೆಂಗಳೂರಿನತ್ತ ತೆರಳಿದರು. ಪೌರಸೇವಾ ನೌಕರರ ಹೊರಗುತ್ತಿಗೆ ನೌಕರರ ಧರಣಿಗೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.