ADVERTISEMENT

ಮದ್ಯ ವ್ಯಸನದಿಂದ ಮುಕ್ತಿ ಹೊಂದಿದ 45 ಶಿಬಿರಾರ್ಥಿಗಳಿಗೆ ಮರು ವಿವಾಹ

ಮದ್ಯವರ್ಜನ ಶಿಬಿರ: ಹೊಸ ಬದುಕಿನ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 5:55 IST
Last Updated 18 ನವೆಂಬರ್ 2022, 5:55 IST
ಕುಂದಗೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದ್ಯಪಾನದಿಂದ ಮುಕ್ತರಾದ ಶಿಬಿರಾರ್ಥಿಗಳಿಗೆ ಮರು ವಿವಾಹ ಮಾಡಲಾಯಿತು
ಕುಂದಗೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದ್ಯಪಾನದಿಂದ ಮುಕ್ತರಾದ ಶಿಬಿರಾರ್ಥಿಗಳಿಗೆ ಮರು ವಿವಾಹ ಮಾಡಲಾಯಿತು   

ಕುಂದಗೋಳ: ಮದ್ಯ ವ್ಯಸನದಿಂದ ಮುಕ್ತಿ ಹೊಂದಿದ 45 ಶಿಬಿರಾರ್ಥಿಗಳಿಗೆ ಇಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮರು ವಿವಾಹ ಮಾಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್‌ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಪಟ್ಟಣ ಪಂಚಾಯಿತಿ ಕುಂದಗೋಳ ಇವರ ಸಂಯುಕ್ತ ಆಶ್ರಯದಲ್ಲಿ 7 ದಿನಗಳ ಕಾಲ ಶಿಬಿರ ಆಯೋಜಿಸಲಾಗಿತ್ತು.

ಮದ್ಯ ವ್ಯಸನದಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ ಹಾಗೂ ನೆಮ್ಮದಿಯೂ ಹಾಳಾಗುತ್ತದೆ. ಕುಡಿತದ ಚಟಬಿಟ್ಟು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳಿ ಎಂದು ಜನಜಾಗೃತಿ ವೇದಿಕೆಯ ಕೊಪ್ಪಳದ ಶ್ರೀ ಮಾಧವ ನಾಯಕ್ ಹೇಳಿದರು.

ADVERTISEMENT

ಕುಂದಗೋಳ ಪೊಲೀಸ್‌ ಠಾಣೆಯ ಪಿಎಸ್‌ಐ ಎನ್.ಎಸ್. ಜಕ್ಕಲಿ ಮಾತನಾಡಿ, ಮದ್ಯಪಾನದ ಚಟ ಹೆಂಡತಿ-ಮಕ್ಕಳಿಂದ ದೂರ ಆಗುವಂತೆ ಮಾಡುತ್ತದೆ. ವ್ಯಸನಮುಕ್ತರಾಗಿ ಒಳ್ಳೆಯ ಜೀವನ ನಡೆಸಿ ಎಂದರು. ಮರು ವಿವಾಹವಾದ ಶಿಬಿರಾರ್ಥಿಗಳಿಗೆ ಕಲ್ಯಾಣ ಪುರದ ಬಸವಣ್ಣಜ್ಜನವರು ಶುಭ ಹಾರೈಸಿದರು. ಶಿಬಿರದ ಅಧ್ಯಕ್ಷ ಬಸವರಾಜ ಶಿರಸಂಗಿ ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕ ಯೋಗಿಶ್ .ಎ, ದೇವೇಂದ್ರಪ್ಪ ಕಾಗೆನವರ, ರಾಜಣ್ಣ ಕೊರವಿ, ಗಣೇಶ ಬಿ ವಿಠ್ಠಲ ಚವ್ಹಾಣ, ಜಯಂತ, ರಾಜಶ್ರೀ, ಸುರೇಶ ಮೆಣಸಗಿ, ಮಂಜುನಾಥ ಶಿಂಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.