ADVERTISEMENT

ತುಮಕೂರು ಹೈವೆಲಿ ಕಾಂಡೋಮ್‌ಗಳ ರಾಶಿ ಪತ್ತೆಯಾಗಿದ್ದರ ಅಸಲಿಯತ್ತು ಬಯಲು...

ಕ್ಸಾತ್ಸಂದ್ರ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ಅಡಗುದಾಣ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 6:07 IST
Last Updated 21 ಸೆಪ್ಟೆಂಬರ್ 2021, 6:07 IST
ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್‌ಗಳ ರಾಶಿ ಚೆಲ್ಲಾಡಿದ್ದು ಪತ್ತೆಯಾಗಿತ್ತು
ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್‌ಗಳ ರಾಶಿ ಚೆಲ್ಲಾಡಿದ್ದು ಪತ್ತೆಯಾಗಿತ್ತು   

ತುಮಕೂರು: ನಗರದ ಕ್ಸಾತ್ಸಂದ್ರ ವಸತಿ ಗೃಹವೊಂದರ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದು, ಐವರು ಪುರುಷರನ್ನು ಬಂಧಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್‌ಗಳ ರಾಶಿ ಚೆಲ್ಲಾಡಿದ್ದರ ಹಿಂದೆ ಈ ವಸತಿಗೃಹದ ಕೈವಾಡ ಇದೆ ಎಂದು ತಿಳಿದು ಬಂದಿದೆ.

ಈ ಸಮಯದಲ್ಲಿ ಒಬ್ಬ ಮಹಿಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ವಸತಿ ಗೃಹದಲ್ಲಿ ಸುರಂಗ ಕೊರೆದು ಮಹಿಳೆಯರನ್ನು ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ದಾಳಿ ಮಾಡಲು ತೆರಳಿದ ಸಮಯದಲ್ಲಿ ಸೂಚನೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ಸೂಚನೆ ಬರುತ್ತಿದ್ದಂತೆ ಮಹಿಳೆಯರು ಹಾಗೂ ಪುರುಷರನ್ನು ಗುಹೆಯಲ್ಲಿ ಬಚ್ಚಿಡಲಾಗುತಿತ್ತು. ಸುರಂಗ ಮಾರ್ಗ ಇರುವುದು ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು.

ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಅವರು ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರು. ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ವೇಶ್ಯಾವಾಟಿಕೆ ನಡೆಯುತ್ತಿದ್ದು, ಖಚಿತಪಟ್ಟಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್‌ಗಳ ರಾಶಿ ಚೆಲ್ಲಾಡಿದ್ದು ಪತ್ತೆಯಾಗಿತ್ತು. ಈ ಮಾಹಿತಿಯ ಜಾಡು ಹಿಡಿದು ವಿವರ ಸಂಗ್ರಹಿಸಿದಾಗ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಾಯಿತು. ಈ ವಿಚಾರವನ್ನು ಎಸ್‌ಪಿ ಗಮನಕ್ಕೆ ತಂದ ನಂತರ ದಾಳಿ ನಡೆದಿದೆ ಎಂದು ಸ್ಟ್ಯಾನ್ಲಿ ತಿಳಿಸಿದರು.‌

‘ಅಡಗುದಾಣಗಳನ್ನು ನಿರ್ಮಿಸಿ ವೇಶ್ಯಾವಾಟಿಕೆ ನಡೆಸುವ ವಸತಿಗೃಹ, ಇತರ ಕಟ್ಟಡಗಳನ್ನು ಪೊಲೀಸರು ವಶಕ್ಕೆ ಪಡೆದು ನೆಲಸಮ ಮಾಡುವಂತೆ ಕೋರ್ಟ್ ಆದೇಶವಿದೆ. ಹಾಗಾಗಿ ಈ ವಸತಿ ಗೃಹವನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಬೇಕು. ತನಿಖೆ ನಂತರ ನೆಲಸಮ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.