ADVERTISEMENT

ಗಣೇಶ ಪ್ರತಿಷ್ಠಾಪನೆ; ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 3:38 IST
Last Updated 12 ಸೆಪ್ಟೆಂಬರ್ 2021, 3:38 IST
ತುಮಕೂರಿನಲ್ಲಿ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಮಿತಿ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ಪದಾಧಿಕಾರಿಗಳಾದ ನಾಗೇಶ್, ರಾಘವೇಂದ್ರರಾವ್, ಜಗಜ್ಯೋತಿ ಸಿದ್ದರಾಮಯ್ಯ, ಪ್ರಭು, ನಿಂಗಪ್ಪ, ಮಹದೇವಪ್ಪ, ಪ್ರಸನ್ನಕುಮಾರ್, ಸಿದ್ದರಾಜು ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಮಿತಿ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ಪದಾಧಿಕಾರಿಗಳಾದ ನಾಗೇಶ್, ರಾಘವೇಂದ್ರರಾವ್, ಜಗಜ್ಯೋತಿ ಸಿದ್ದರಾಮಯ್ಯ, ಪ್ರಭು, ನಿಂಗಪ್ಪ, ಮಹದೇವಪ್ಪ, ಪ್ರಸನ್ನಕುಮಾರ್, ಸಿದ್ದರಾಜು ಇತರರು ಉಪಸ್ಥಿತರಿದ್ದರು   

ತುಮಕೂರು: ಪ್ರತಿ ವರ್ಷವೂ ವಿಜೃಂಭಣೆಯಿಂದ ಆಚರಿಸುತ್ತಿದ್ದ ಗಣೇಶೋತ್ಸವವನ್ನು ಈ ಸಲ ಸರಳವಾಗಿ ಆಚರಣೆ ಮಾಡಲಾಯಿತು.

ಕೋವಿಡ್‌ನಿಂದಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಐದು ದಿನಗಳಿಗೆ ಸೀಮಿತಗೊಳಿಸಿ ಜಿಲ್ಲಾ ಆಡಳಿತ ಆದೇಶಿಸಿದ್ದು, ಸಾಕಷ್ಟು ಕಡೆಗಳಲ್ಲಿ ಮೂರ್ತಿಪ್ರತಿಷ್ಠಾಪಿಸಿ, ಪೂಜಿಸಿ ವಿಸರ್ಜಿಸಲಾಯಿತು.

ವಿನಾಯಕ ನಗರದಲ್ಲಿ ಸಿದ್ಧಿ ವಿನಾಯಕ ಸೇವಾ ಮಂಡಳಿ ವತಿಯಿಂದ 46ನೇ ವರ್ಷದ ಗಣೇಶೋತ್ಸವಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ನೀಡಲಾಯಿತು. ಪ್ರತಿ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ತಿಂಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತಿತ್ತು. ಪ್ರತಿ ದಿನವೂ ಸಾವಿರಾರು ಜನರು ಭೇಟಿನೀಡಿ, ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದರು. ಆದರೆ ಈ ಸಲ ಐದು ದಿನಗಳಿಗೆ ಸೀಮಿತಗೊಳಿಸಲಾಗಿದೆ.

ADVERTISEMENT

ಗಣೇಶೋತ್ಸವಕ್ಕೆ ಮಂಡಳಿ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ ಚಾಲನೆ ನೀಡಿ
ದರು. ನಂತರ ಮಾತನಾಡಿ, ‘ಕಳೆದ 45 ವರ್ಷಗಳಿಂದ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ಅದ್ದೂರಿ
ಯಾಗಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗಿತ್ತು. 40ಕ್ಕೂ ಅಧಿಕ ದಿನ ವಿವಿಧ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಕಳೆದ 2 ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗಿ ಜನರ ಆರೋಗ್ಯ ದೃಷ್ಟಿಯಿಂದ ಕೋವಿಡ್‌ಮಾರ್ಗಸೂಚಿಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಅದ್ದೂರಿ,ಆಡಂಬರ ಇಲ್ಲದೆ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಮಾತ್ರ ಸೀಮಿತಗೊಳಿಸಿ ಆಚರಿಸಲಾಗುತ್ತಿದೆ’ ಎಂದರು.

ಬುಧವಾರದವರೆಗೆ ಪ್ರತಿದಿನ ಗಣೇಶಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ. ಸಾರ್ವಜನಿಕರಿಗೆ ಬೆಳಿಗ್ಗೆ 11ರಿಂದ ರಾತ್ರಿ 8 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿಗೆ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಬೆಳಿಗ್ಗೆ 9 ಗಂಟೆಗೆ ವಿದ್ಯಾನಗರದ ನೀರಿನ ತೊಟ್ಟಿಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಗುವುದು. ಯಾವುದೇ ಮೆರವಣಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಂಡಳಿ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಾಘವೇಂದ್ರರಾವ್, ಸಹ
ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ,ಖಜಾಂಚಿ ಪ್ರಭು, ನಿರ್ದೇ
ಶಕರಾದ ನಿಂಗಪ್ಪ, ಮಹದೇವಪ್ಪ, ಪ್ರಸನ್ನಕುಮಾರ್, ಸಿದ್ದರಾಜು, ನರಸಿಂಹ
ಮೂರ್ತಿ, ನಾಗರಾಜು, ನಟರಾಜು, ಮಹೇಶ್, ವಿರೂಪಾಕ್ಷ, ವೆಂಕಟೇಶ್, ಹೇಮರಾಜು ಸಿಂಚ, ವಿಜಯಕುಮಾರ್, ವೆಂಕಟೇಶಬಾಬು, ಪದ್ಮರಾಜು, ಉಮಾಶಂಕರ್, ರಮೇಶ್‍ಬಾಬು, ಅನುಸೂಯ, ರೇಣುಕಾ ಪರಮೇಶ್, ಇಂದ್ರಾಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.