ADVERTISEMENT

ಗುರುವಿನ ಸ್ಮರಣೆ; ನೆನಪಿನ ಸರಮಾಲೆ

ಹಾಲಪ್ಪ ಪ್ರತಿಷ್ಠಾನ, ಸರ್ವೋದಯ ಪ್ರೌಢಶಾಲೆಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 3:17 IST
Last Updated 12 ಸೆಪ್ಟೆಂಬರ್ 2021, 3:17 IST
ತುಮಕೂರಿನಲ್ಲಿ ಸರ್ವೋದಯ ಕಾಲೇಜು ಪ್ರಾಂಶುಪಾಲ ಸೀತಾರಾಮು, ಆಡಳಿತಾಧಿಕಾರಿ ಸುಬ್ಬರಾವ್, ಉಪಪ್ರಾಂಶುಪಾಲ ದಿವಾಕರ್ ಅವರನ್ನು ಅಭಿನಂದಿಸಲಾಯಿತು. ಮುಖಂಡರಾದ ಮುರಳೀಧರ ಹಾಲಪ್ಪ, ಪ್ರಮುಖರಾದ ಅಶೋಕ್, ದೇವರಾಜ್, ಜ್ಞಾನೇಶ್, ಟಿ.ಜಿ.ಗಿರೀಶ್, ವೆಂಕಟೇಶ ಬಾಬು, ಸಿ.ವಿ.ಗಿರೀಶ್, ಸೋಮಶೇಖರ್, ಶ್ರೀಕಾಂತ್, ಎನ್.ಉಮೇಶ್ ಇತರರು ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ಸರ್ವೋದಯ ಕಾಲೇಜು ಪ್ರಾಂಶುಪಾಲ ಸೀತಾರಾಮು, ಆಡಳಿತಾಧಿಕಾರಿ ಸುಬ್ಬರಾವ್, ಉಪಪ್ರಾಂಶುಪಾಲ ದಿವಾಕರ್ ಅವರನ್ನು ಅಭಿನಂದಿಸಲಾಯಿತು. ಮುಖಂಡರಾದ ಮುರಳೀಧರ ಹಾಲಪ್ಪ, ಪ್ರಮುಖರಾದ ಅಶೋಕ್, ದೇವರಾಜ್, ಜ್ಞಾನೇಶ್, ಟಿ.ಜಿ.ಗಿರೀಶ್, ವೆಂಕಟೇಶ ಬಾಬು, ಸಿ.ವಿ.ಗಿರೀಶ್, ಸೋಮಶೇಖರ್, ಶ್ರೀಕಾಂತ್, ಎನ್.ಉಮೇಶ್ ಇತರರು ಪಾಲ್ಗೊಂಡಿದ್ದರು   

ತುಮಕೂರು: ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಹಾಲಪ್ಪ ಪ್ರತಿಷ್ಠಾನ, ಸರ್ವೋದಯ ಪ್ರೌಢಶಾಲೆ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಶನಿವಾರ ಸಿದ್ಧಿವಿನಾಯಕ ಸೇವಾ ಮಂಡಳಿಯಲ್ಲಿ ನೆರವೇರಿತು.

ಗುರುವಂದನೆ ಸ್ವೀಕರಿಸಿ ಮಾತ
ನಾಡಿದ ಸರ್ವೋದಯ ಕಾಲೇಜು ಪ್ರಾಂಶುಪಾಲ ಸೀತಾರಾಮು, ‘ಹಳೆಯ
ವಿದ್ಯಾರ್ಥಿಗಳನ್ನು ಕಂಡು ಸಂತೋಷ
ವಾಯಿತು. ನನ್ನ ವಿದ್ಯಾರ್ಥಿಗಳಾಗಿದ್ದವರು ದೇಶದ ವಿವಿಧೆಡೆ ಕೆಲಸ ನಿರ್ವಹಿಸುತ್ತಿ
ದ್ದಾರೆ. ಜತೆಗೆ ದೇಶ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಪಡುವ
ವಿಚಾರ.ಒಬ್ಬ ಉಪಾಧ್ಯಾಯನಿಗೆ ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಇಂತಹ ಅವ
ಕಾಶ ಎಲ್ಲರಿಗೂ ಸಿಗುವುದಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಸರ ಕೊಡುವುದು ಗುರುವಿನ ಆದ್ಯತೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ ಶ್ರಮವಿದೆ. ಬದುಕು ಕಟ್ಟಿಕೊಂಡ ಮೇಲೆ ಅದನ್ನು ಸ್ವಂತಕ್ಕೂ ಸಮಾಜಕ್ಕೂ ಸದುಪಯೋಗ ಪಡಿಸಬೇಕು. ಸ್ವಾರ್ಥಕ್ಕಿಂತ ನಿಸ್ವಾರ್ಥ ಸೇವೆಗೆ ಹೆಚ್ಚು ಬೆಲೆ ಇದೆ. ಗುರುವನ್ನು ಗೌರವಿಸುವುದಕ್ಕಿಂತ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳುವುದೇ ದೊಡ್ಡ ಗೌರವ’ ಎಂದು ಸಲಹೆ ನೀಡಿದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಹಳೆಯ ವಿದ್ಯಾರ್ಥಿಯೂ ಆದ ಮುರಳೀಧರ ಹಾಲಪ್ಪ, ‘ಗುರು- ಶಿಷ್ಯರ ಬಾಂಧವ್ಯ ಸ್ಥಿರವಾಗಿ ಮುಂದುವರೆಯಬೇಕು. ಶಿಕ್ಷಣ ವ್ಯವಸ್ಥೆಗಳು ಬದಲಾದಂತೆ ವಿದ್ಯಾರ್ಥಿಗಳು ಹಾಗೂ ಗುರುಗಳ ಮಧ್ಯೆ ಅಂತರ ಹೆಚ್ಚುತ್ತಿದೆ. ಗುರುಗಳಿಗೆ ಗೌರವ ನೀಡಲಾಗುತ್ತದೆ. ಪೂಜ್ಯ ಭಾವನೆ ಇದೆ. ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸಬೇಕು’ ಎಂದು ಅಭಿಪ್ರಾಯಪಟ್ಟರು.

ಸರ್ವೋದಯ ಕಾಲೇಜು
ಪ್ರಾಂಶುಪಾಲ ಸೀತಾರಾಮು, ಆಡಳಿತಾ
ಧಿಕಾರಿ ಸುಬ್ಬರಾವ್, ಉಪಪ್ರಾಂಶುಪಾಲ ದಿವಾಕರ್ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಅಶೋಕ್, ದೇವರಾಜ್, ಜ್ಞಾನೇಶ್, ಟಿ.ಜಿ.ಗಿರೀಶ್, ವೆಂಕಟೇಶಬಾಬು, ಸಿ.ವಿ.ಗಿರೀಶ್, ಸೋಮಶೇಖರ್, ಶ್ರೀಕಾಂತ್, ಎನ್.ಉಮೇಶ್, ಹಿರೋಹೊಂಡಾ ರವಿ, ಶಿವಪ್ರಸಾದ್, ದಿನೇಶ್, ವೀಣಾ, ಪ್ರತಿಭಾ, ರಮೇಶ್‍ಬಾಬು, ತ್ಯಾಗರಾಜ್, ಎನ್.ಸಿ.ಸುರೇಶ್, ಬಿ.ಎನ್.ಸತೀಶ್, ಮುಖಂಡರಾದ ನಾಗರಾಜು, ರೇವಣಸಿದ್ದಯ್ಯ, ಮಂಜುನಾಥ್, ವೇಣುಗೋಪಾಲ್, ಪ್ರಕಾಶ್, ನಟರಾಜು, ಗೀತಾ, ಪ್ರಸನ್ನಕುಮಾರ್, ಅನಸೂಯಮ್ಮ, ಮಹೇಶ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.