ADVERTISEMENT

ಎಂಐಟಿಯ 35 ವಿದ್ಯಾರ್ಥಿಗಳಿಗೆ ತಲಾ ₹ 44 ಲಕ್ಷ ವೇತನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 15:16 IST
Last Updated 22 ಸೆಪ್ಟೆಂಬರ್ 2021, 15:16 IST

ಉಡುಪಿ: ಈಚೆಗೆ ನಡೆದ ವರ್ಚುವಲ್‌ ಕ್ಯಾಂಪಸ್ ಸಂದರ್ಶನದಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 35 ವಿದ್ಯಾರ್ಥಿಗಳನ್ನು ಮೈಕ್ರೊಸಾಫ್ಟ್‌ ಕಂಪನಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದು, ವಾರ್ಷಿಕ ತಲಾ ₹ 44 ಲಕ್ಷ ವೇತನ ನೀಡಲು ಮುಂದೆ ಬಂದಿದೆ ಎಂದು ಎಂಐಟಿ ತಿಳಿಸಿದೆ.

ಎಂಐಟಿಯ ಕ್ಯಾಂಪಸ್ ಸಂದರ್ಶನದಲ್ಲಿ ಇದುವರೆಗಿನ ಗರಿಷ್ಠ ವೇತನದ ಪ್ಯಾಕೇಜ್ ಇದಾಗಿದೆ. ಜತೆಗೆ, ಅಡೊಬಿ, ಅಮೆಜಾನ್, ಬಜಾಜ್ ಫಿನ್‌ಸರ್ವ್‌, ಬ್ಲಾಕ್ ರಾಕ್‌, ಚಾರ್ಜ್‌ ಬಿ, ಸಿಸ್ಕೊ ಸಿಸ್ಟಮ್ಸ್‌, ಸಿಟ್ರಿಕ್ಸ್‌ ಆರ್ ಅಂಡ್ ಡಿ, ಕ್ಲೌಡೆರ, ಕೊಹೆಸಿಟಿ, ಕಾವ್‌ವಾಲ್ಟ್‌, ಡಾಶೆ ಇಂಡಿಯಾ, ಫಿಡಿಲಿಟಿ ಇನ್ವೆಸ್ಟ್‌ಮೆಂಟ್‌, ಫ್ಲಿಪ್‌ಕಾರ್ಟ್‌, ಗೋಲ್ಡ್‌ಮನ್ ಸಾಶ್‌, ಹೆವೊಡಾಟಾ, ಎಚ್‌ಪಿಇ, ಜೆಪಿ ಮಾರ್ಗನ್‌, ಕೊಂಪ್ರೈಸ್, ನಿವಿಡಿಯಾ, ಒರಾಕಲ್‌, ಸಬ್ರೆ ಟ್ರಾವೆಲ್ಸ್‌, ಸ್ಯಾಪ್ ಲ್ಯಾಬಸ್‌, ತೇಜಸ್ ನೆಟ್‌ವರ್ಕ್‌, ಯುಎಸ್‌ಬಿ ಬಿಸಿನೆಸ್, ವಿಎಂ ವೇರ್, ವೆಲ್ಸ್‌ ಫಾರ್ಗೊ, ವೆಸ್ಟರ್ನ್‌ ಡಿಜಿಟಲ್, ಕಂಪೆನಿಗಳು ಮೊದಲ ಹಂತದ ಸಂದರ್ಶನದಲ್ಲಿ ಭಾಗವಹಿಸಿದ್ದವು. 292 ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಇಂಟರ್ನ್‌ಶಿಪ್‌ ಆಫರ್ ಮಾಡಲಾಗಿದ್ದು, ಸರಾಸರಿ ವರ್ಷಕ್ಕೆ ₹18.2 ಲಕ್ಷ ವೇತನ ನೀಡುವುದಾಗಿ ತಿಳಿಸಿವೆ ಎಂದು ಎಂಐಟಿ ನಿರ್ದೇಶನಕ ಡಾ.ಅನಿಲ್ ರಾಣಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT