ADVERTISEMENT

ಜಯಂತ ಕಾಯ್ಕಿಣಿ ಭಾಷಾಂತರ ಕೃತಿಗೆ ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:04 IST
Last Updated 18 ಅಕ್ಟೋಬರ್ 2021, 14:04 IST
‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ಸಾಹಿತಿ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್’ ಕೃತಿ. ಜಯಂತ ಕಾಯ್ಕಿಣಿ ಮತ್ತು ಸಾಹಿತಿ ತೇಜಸ್ವಿನಿ ನಿರಂಜನ ಚಿತ್ರದಲ್ಲಿದ್ದಾರೆ.
‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ಸಾಹಿತಿ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್’ ಕೃತಿ. ಜಯಂತ ಕಾಯ್ಕಿಣಿ ಮತ್ತು ಸಾಹಿತಿ ತೇಜಸ್ವಿನಿ ನಿರಂಜನ ಚಿತ್ರದಲ್ಲಿದ್ದಾರೆ.   

ಗೋಕರ್ಣ: ಅಮೆರಿಕ ಸಾಹಿತ್ಯ ಭಾಷಾಂತರಕಾರರ ಸಂಸ್ಥೆಯ (ಎ.ಎಲ್.ಟಿ.ಎ) ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್’ ಕೃತಿಯು ಆಯ್ಕೆಯಾಗಿದೆ. ಕನ್ನಡದ ಈ ಕೃತಿಯನ್ನು ಸಾಹಿತಿ ತೇಜಸ್ವಿನಿ ನಿರಂಜನ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.

ಎ.ಎಲ್.ಟಿ.ಎ ಈ ಬಗ್ಗೆ ಭಾನುವಾರ ಪ್ರಕಟಿಸಿದೆ. 2021ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ನವೆಂಬರ್‌ನಲ್ಲಿ ನಡೆಯುವ ಸಂಸ್ಥೆಯ 44ನೇ ಅಧಿವೇಶನದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ನಗದು ಪುರಸ್ಕಾರವನ್ನು ಒಳಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಹಿತಿ ಜಯಂತ ಕಾಯ್ಕಿಣಿ, ‘ಪ್ರಶಸ್ತಿ ಪ್ರಕಟವಾಗಿರುವುದು ತುಂಬ ಸಂತೋಷದ ವಿಷಯ. ಕನ್ನಡದ ಸಾಹಿತ್ಯದ ಭಾಷಾಂತರ ಕೃತಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಾಡಿಗೆ ಹೆಮ್ಮೆಯ ವಿಷಯ. ಇದರಿಂದ ಇನ್ನೂ ಹೆಚ್ಚಿನ ಜನ ಈ ಪುಸ್ತಕ ಓದುವಂತಾಗುತ್ತದೆ. ಇಂಗ್ಲಿಷ್‌ಗೆ ಭಾಷಾಂತರಿಸಿದ ತೇಜಸ್ವಿನಿಯವರಿಗೆ ಅಭಿನಂದನೆ ಸಲ್ಲುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.