ADVERTISEMENT

ಕಬಡ್ಡಿ ಆಟಗಾರ ಮನೋಜ ನಾಯ್ಕ ನಿಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:30 IST
Last Updated 21 ಸೆಪ್ಟೆಂಬರ್ 2021, 22:30 IST
ಮನೋಜ ನಾಯ್ಕ
ಮನೋಜ ನಾಯ್ಕ   

ಭಟ್ಕಳ (ಉತ್ತರ ಕನ್ನಡ): ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ, ಪಟ್ಟಣದ ಮನೋಜ ನಾಯ್ಕ (34) ಮಂಗಳವಾರ ಹೃದಯಾಘಾತದಿಂದ ಕುಂದಾಪುರದಲ್ಲಿ ನಿಧನರಾದರು.

ಅವರಿಗೆ ತಾಯಿ, ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ.

ಭಟ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್‌ ಸದಸ್ಯರಾಗಿದ್ದ ಅವರು, ಪಟ್ಟಣದ ಹೈಡಕಿಯಲ್ಲಿ ವಾಸವಿದ್ದರು. ಅವರು ರಾಜ್ಯಮಟ್ಟದ ಅನೇಕ ಆಟಗಳಲ್ಲಿ ತಂಡಕ್ಕೆ ವಿಜಯ ತಂದುಕೊಟ್ಟಿದ್ದರು. 2009 ಹಾಗೂ 2015ರಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಅವರ ಕ್ರೀಡಾಸಾಧನೆಗೆ ತಾಲ್ಲೂಕು ಗಣರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದ್ದವು.

ADVERTISEMENT

ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಂಗಳವಾರ ರಾತ್ರಿ ಭಟ್ಕಳದಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.