ADVERTISEMENT

ಕೂಡ್ಲಿಗಿ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳ ಜನನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:10 IST
Last Updated 21 ಸೆಪ್ಟೆಂಬರ್ 2021, 4:10 IST
ಕೂಡ್ಲಿಗಿ: ಆಂಬುಲೆನ್ಸ್‌ನಲ್ಲಿ ಅವಳಿ ಹೆಣ್ಣುಮಕ್ಕಳ ಜನನ
ಕೂಡ್ಲಿಗಿ: ಆಂಬುಲೆನ್ಸ್‌ನಲ್ಲಿ ಅವಳಿ ಹೆಣ್ಣುಮಕ್ಕಳ ಜನನ   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಪಾಲಯ್ಯನಕೋಟೆ ಗ್ರಾಮದ ಹಂಪಮ್ಮ ಅವರಿಗೆ ಸೋಮವಾರ ರಾತ್ರಿ ಅಂಬುಲೆನ್ಸ್‌ನಲ್ಲಿಯೇ ಅವಳಿ ಹೆಣ್ಣು ಮಕ್ಕಳು ಜನಿಸಿದ್ದಾರೆ.

ರಾತ್ರಿ 11.40ರ ಸುಮಾರಿಗೆಹಂಪಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು,108ಕ್ಕೆ ಕರೆ ಮಾಡಿದ್ದಾರೆ. ನಂತರ ಉಜ್ಜಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಸಿಬ್ಬಂದಿ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.

12 ಗಂಟೆಗೆ ಮೊದಲ ಮಗು, 12.20ಕ್ಕೆ ಎರಡನೇ ಮಗುವಿನ ಜನನವಾಗಿದೆ. ಶುಶ್ರೂಷಕಿ ನಾಗವೇಣಿ, ಚಾಲಕ ಕೊಟೇಶ್ ಉಜ್ಜಿನಿ ಹೆರಿಗೆ ಮಾಡಿಸಿದ್ದಾರೆ. ಬಳಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.