ADVERTISEMENT

ವಿಜಯನಗರ: ಎರಡನೇ ದಿನವೂ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 13:12 IST
Last Updated 22 ಸೆಪ್ಟೆಂಬರ್ 2021, 13:12 IST
ಬುಧವಾರ ಸಂಜೆ ಮಳೆ ನಿಂತ ಬಳಿಕ ಹೊಸಪೇಟೆಯಲ್ಲಿ ಕಾಮನಬಿಲ್ಲು ಕಂಡಿದ್ದುಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.
ಬುಧವಾರ ಸಂಜೆ ಮಳೆ ನಿಂತ ಬಳಿಕ ಹೊಸಪೇಟೆಯಲ್ಲಿ ಕಾಮನಬಿಲ್ಲು ಕಂಡಿದ್ದುಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.   

ಹೊಸಪೇಟೆ (ವಿಜಯನಗರ): ಎರಡನೇ ದಿನವೂ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.

ಮಂಗಳವಾರ ದಿನವಿಡೀ ಸುರಿದಿದ್ದ ಮಳೆ ಬುಧವಾರವೂ ಮುಂದುವರೆಯಿತು. ಬುಧವಾರ ಬೆಳಿಗ್ಗೆ ಕೆಲಕಾಲ ಬಿಸಿಲು ಕಾಣಿಸಿಕೊಂಡಿತು. ಇಂದಾದರೂ ಬಿಸಿಲಿನಿಂದ ಮುಕ್ತಿ ಸಿಕ್ಕಿತು ಎಂದು ಜನ ಅಂದುಕೊಳ್ಳುತ್ತಿರುವಾಗಲೇ ದಟ್ಟ ಕಾರ್ಮೋಡ ಬಂದು, ಮಳೆ ಅಬ್ಬರಿಸಿತು.

ಹೀಗೆ ದಿನವಿಡೀ ಬಿಟ್ಟು ಬಿಟ್ಟು ಮಳೆ ಅಬ್ಬರಿಸಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿತು. ಜನಜೀವನ ಅಸ್ತವ್ಯಸ್ತಗೊಂಡಿತು. ಹಂಪಿ ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ಕಾಲೇಜು ರಸ್ತೆಯಲ್ಲಿ ಚರಂಡಿ ಉಕ್ಕಿ ಹರಿದು, ರಸ್ತೆಯ ತುಂಬೆಲ್ಲಾ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು.

ADVERTISEMENT

ಜಿಲ್ಲೆಯ ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲೂ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.