ADVERTISEMENT

ತರಕಾರಿ ಕೃಷಿಗೆ ಮಾದರಿ ಕುಟುಂಬ

ಮಹಾಂತೇಶ ಸಿ.ಹೊಗರಿ
Published 19 ಸೆಪ್ಟೆಂಬರ್ 2021, 4:49 IST
Last Updated 19 ಸೆಪ್ಟೆಂಬರ್ 2021, 4:49 IST
ಕಕ್ಕೇರಾ ಪಟ್ಟಣದ ದುರಗಪ್ಪ ವೀರಘೋಟ ಐದಭಾವಿ ಅವರ ತೋಟದಲ್ಲಿ ಹುಲಸಾಗಿ ಬೆಳೆದ ಹಾಗಲಕಾಯಿ
ಕಕ್ಕೇರಾ ಪಟ್ಟಣದ ದುರಗಪ್ಪ ವೀರಘೋಟ ಐದಭಾವಿ ಅವರ ತೋಟದಲ್ಲಿ ಹುಲಸಾಗಿ ಬೆಳೆದ ಹಾಗಲಕಾಯಿ   

ಕಕ್ಕೇರಾ: ಪಟ್ಟಣದ ಬಂದೇನವಾಜ ದರ್ಗಾದ ಬಳಿ ದುರಗಪ್ಪ ವೀರಘೋಟ ಐದಭಾವಿ ಕುಟುಂಬವು ಹುಲುಸಾಗಿ ಬೆಳೆಸಿರುವ ತರಕಾರಿಗಳಾದ ಹಾಗಲಕಾಯಿ, ಬದನೆಕಾಯಿ, ಮುಳ್ಳು ಬದನೆಕಾಯಿ, ಕೆತ್ತಿಹೀರೆಕಾಯಿ ನೋಡುಗರ ಕಣ್ಣು ಸೆಳೆಯುತ್ತವೆ.

ಈಚೆಗೆ ಕೃಷಿಯ ಕಡೆಗೆ ಬಿಟ್ಟು ದೂರದ ಮಹಾನಗರಗಳಿಗೆ 10- 15 ಎಕರೆ ಜಮೀನು ಇದ್ದವರು ಕೂಲಿ ಕೆಲಸಗಳಿಗೆ ಹೋಗುವರ ಮಧ್ಯೆ ದುರಗಪ್ಪ ವೀರಘೋಟ ಐದಭಾವಿ ಕುಟುಂಬ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ. ಬೇರೆಯವರ ಜಮೀನಿನಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ಲಕ್ಷಾಂತರ ಹಣ ಗಳಿಸುವುದರಲ್ಲಿ ನಿಪುಣರಾಗಿದ್ದಾರೆ.

ಮೂಲತಃ ದುರಗಪ್ಪ ವೀರಘೋಟ ಐದಭಾವಿಯವರು ಸುಮಾರು 10 ವರ್ಷಗಳ ಹಿಂದೆ ಸ್ವಂತ ಜಮೀನಿನಲ್ಲಿ ತರಕಾರಿಗಳನ್ನು ಬೆಳೆದು ಯಶಸ್ವಿಯಾಗಿದ್ದರು. ಅವರಿಗೆ ಪತ್ನಿ ದೇವಮ್ಮ, ಪುತ್ರರಾದ ಮೌನೇಶ, ಮಂಜುನಾಥ ಅವರ ಜೊತೆ ನಿರಂತವಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಈ ತರಕಾರಿ ಮುಗಿದ ಮೇಲೆ ಕಲ್ಲಂಗಡಿಯನ್ನು ಬೆಳೆಯಬೇಕೆಂಬ ಯೋಜನೆಯಿದೆ. ಆದರೆ ನಾವು ಕಷ್ಟಪಟ್ಟಕ್ಕೂ ತರಕಾರಿ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ದರ ಸಿಕ್ಕರೆ ಉತ್ತಮ ಎಂದು ದೇವಮ್ಮ ಐದಭಾವಿ ತಿಳಿಸಿದರು.

ADVERTISEMENT

ಜಮೀನು ಮಸಾರೆ ಭೂಮಿ ಉತ್ತಮವಾಗಿದ್ದು, ಜಮೀನು ಎಷ್ಟೇ ನೀರುಣಿಸಿದರೂ ಬೇಗ ಆರಿಬಿಡುತ್ತದೆ. 2 ಪಂಪಸೆಟ್, ಚಿಕ್ಕ ಕಾಲುವೆ ಹೀಗಾಗಿ ನೀರಿನ ಕೊರತೆಯಿಲ್ಲ. ಸುತ್ತಲೂ 15 ಸಾವಿರ ಖರ್ಚು ಮಾಡಿ ಸೋಲಾರ ತಂತಿಯ ಬೇಲಿ ಹಾಕಲಾಗಿದೆ ಎಂದು ಮೌನೇಶ ತಿಳಿಸಿದರು.

ರೈತ ಸಂಪರ್ಕ ಅಧಿಕಾರಿಗಳು ಅಥವಾ ಯಾವ ಅಧಿಕಾರಿಗಳೂ ಇತ್ತ ಸುಳಿದಿಲ್ಲ, ಅವರಿಗೆ ಬಂದ ಯೋಜನೆಯಲ್ಲಿ ತರಕಾರಿ ಬೆಳೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಉತ್ತಮ ಯೋಜನೆಯಲ್ಲಿ ತರಕಾರಿಗಳನ್ನು ಹೀಗೆ ಬೆಳೆಯಬೇಕೆಂದು ತಿಳಿಸಿದರೆ ಉತ್ತಮ ಎಂದು ಮೌನೇಶ ದೊರೆ ತಿಳಿಸಿದರು.

ವೀರಘೋಟ ಕುಟುಂಬದ ವರೆಲ್ಲರೂ ಅನಕ್ಷರಸ್ಥರು, ಆದರೆ ಅವರು ಮಾಡುವ ಕಾಯಕವನ್ನು ನೋಡಿದರೆ ದೊಡ್ಡ ದೊಡ್ಡ ಎಂಜಿನಿಯರ್ ಅವರಂತೆ ಯೋಜಿತ ರೀತಿಯಲ್ಲಿ ಮಾಡಿರುವುದು ಕಂಡು ಬರುತ್ತದೆ. ನಾವು ಓದಿ ನೌಕರಿ ಮಾಡುವ ಬದಲು, ಜಮೀನಿನಲ್ಲಿ ಅದೇ ಕೆಲಸ ಮಾಡಿದರೆ ನೌಕರಿ ಮಾಡುವವರಿಗಿಂತ ಹೆಚ್ಚು ಹಣ ಬರುತ್ತದೆ ಎಂದು ಮಂಜುನಾಥ ತಿಳಿಸಿದರು.

*ಇನ್ನೊಬ್ಬರ ಬಳಿ ದುಡಿಯುವುದಕ್ಕಿಂತ ಜಮೀನಿನಲ್ಲಿ ದುಡಿದರೆ ಹತ್ತು ಪಟ್ಟು ಹಣ ಗಳಿಸಬಹುದೆಂದು ತರಕಾರಿ ಬೆಳೆಯಲು ಪ್ರಾರಂಭಿಸಿದ್ದೇವೆ
-ದುರಗಪ್ಪ ವೀರಘೋಟ ಐದಭಾವಿ, ಕೃಷಿಕ

*ವಿವಿಧ ತರಕಾರಿಗಳನ್ನು ಬೆಳೆದ ದುರಗಪ್ಪ ವೀರಘೋಟ ಐದಭಾವಿ ಕುಟುಂಬದ ಶ್ರಮ ತುಂಬಾನೇ ಇದೆ. ರೈತ ಸಂಪರ್ಕ ಅಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು
-ವೆಂಕಟೇಶ ದೊರೆ, ಸ್ಥಳೀಯ

*ಸರ್ಕಾರವು ತರಕಾರಿ ಬೆಳೆಯುವ ಪ್ರತಿಯೊಬ್ಬ ರೈತರಿಗೆ ಸಹಾಯ ನೀಡಬೇಕು. ಉತ್ತಮ ಬೆಲೆಯನ್ನೂ ನಿಗದಿಪಡಿಸಬೇಕು
-ಬುಚ್ಚಪ್ಪನಾಯಕ, ಸ್ಥಳೀಯ ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.