ADVERTISEMENT

‘ವಿಜ್ಞಾನ ಕೇಂದ್ರ ಸ್ಥಾಪನೆ ತ್ವರಿತವಾಗಲಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:26 IST
Last Updated 21 ಸೆಪ್ಟೆಂಬರ್ 2021, 16:26 IST
ಡಾ. ರಾಗಪ್ರಿಯಾ ಆರ್.
ಡಾ. ರಾಗಪ್ರಿಯಾ ಆರ್.   

ಯಾದಗಿರಿ: ನಗರದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಯು ಬಹುಮುಖ್ಯವಾದ ಯೋಜನೆಯಾಗಿದ್ದು, ಅದರ ಕಾರ್ಯ ಸಾಧ್ಯತೆಯಲ್ಲಿ ಯಶಸ್ವಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿವಿಧ ಯೋಜನೆಗಳಿಗೆ ಭೂ ಮಂಜೂರಾತಿ ಸಭೆಯಲ್ಲಿ ಮಾತನಾಡಿದರು.

ಅಭಿವೃದ್ಧಿ ಯಾವಾಗಲೂ ಉನ್ನತ ಮಟ್ಟದಲ್ಲಿ ಇರಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು. ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯೂ ಗಿರಿಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ವಿಜ್ಞಾನ ಕೇಂದ್ರದ ಸ್ಥಾಪನೆಯ ಕಾಮಗಾರಿಯ ಕುರಿತು 15 ದಿನಕ್ಕೊಮ್ಮೆ ಸಮೀಕ್ಷೆ ನಡೆಸಿ ಸಭೆಯಲ್ಲಿ ಚರ್ಚಿಸ ಬೇಕು ಎಂದು ಸೂಚಿಸಿ ದರು.

ADVERTISEMENT

ಮೌಲಾನಾ ಆಜಾದ್ ಮಾದರಿ ಶಾಲೆಗಳ ದುರಸ್ತಿ ಹಾಗೂ ಕಟ್ಟಡ ಕಾಮಗಾರಿಗಾಗಿ ಭೂನಕ್ಷೆ ತಯಾರಿ ಸೇರಿದಂತೆ ಇತರೆ ಕಾರ್ಯಗಳು ತ್ವರಿತವಾಗಿ ಮುಗಿಯಬೇಕು. ಜಿಲ್ಲೆಯಲ್ಲಿ ಇರುವ 35 ಕೆರೆಗಳ ಪೈಕಿ ಬಾಕಿಯಿರುವ ಕೆರೆಗಳ ಭರ್ತಿ ಕಾರ್ಯ ಪೂರ್ಣವಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಭೂ ಸ್ವಾಧೀನದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪನೆಗೆ ಹಾಗೂ ಗೋಶಾಲೆ ನಿರ್ಮಾಣಕ್ಕೂ ಅಗತ್ಯವಾದ ಜಮೀನಿನ ಪ್ರಮಾಣ ಗುರುತಿಸಿ. ಈಗಾ ಗಲೇ ಜಿಲ್ಲೆಯಲ್ಲಿರುವ ಖಾಸಗಿ ಗೋಶಾ ಞಲೆಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮೀಕ್ಷೆ ಕಾರ್ಯ ಪ್ರಗತಿಯ ಕುರಿತು ಮಾಹಿತಿ ನೀಡಬೇಕು. ಬಾಕಿ ಇರುವ ರೈತರ ಆತ್ಮಹತ್ಯೆ ಸಹಾಯಧನ ಹಾಗೂ ಬೆಳೆ ಹಾನಿ ಮತ್ತು ಮನೆಹಾನಿಗೊಳಗಾದವರಿಗೆ ಪರಿಹಾರ ಧನವನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಮೊತ್ತವನ್ನು ನೀಡುವಂತೆ ತಿಳಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ತಹಸೀಲ್ದಾರ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.