ADVERTISEMENT

ಉದ್ಯೋಗವಾರ್ತೆ; ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಧ್ಯಾಪಕರ ಹುದ್ದೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 21:30 IST
Last Updated 20 ಅಕ್ಟೋಬರ್ 2021, 21:30 IST
   

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ

ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಧ್ಯಾಪಕರ ಹುದ್ದೆಗಳ ಭರ್ತಿಗೆ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆ ಇರಲಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ: ಸಹಾಯಕ ಪ್ರಾಧ್ಯಾಪಕ

ADVERTISEMENT

ಹುದ್ದೆಗಳ ಸಂಖ್ಯೆ: 1242

ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಎನ್‌ಇಟಿ, ಕೆಎಸ್‌ಇಟಿ ಹಾಗೂ ಪಿಎಚ್‌ಡಿ ಮುಗಿಸಿರಬೇಕು.

ವಯೋಮಿತಿ: ಕನಿಷ್ಠ 22 ವರ್ಷ ಹಾಗೂ ಗರಿಷ್ಠ 40 ವರ್ಷ. 2ಎ, 2ಬಿ, ಹಾಗೂ 3ಎ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಇತರ ಪ್ರವರ್ಗಗಳಿಗೆ
₹ 2000, ಎಸ್‌ಸಿ/ ಎಸ್‌ಟಿ ಹಾಗೂ ಪ್ರವರ್ಗ –1 ರ ಅಭ್ಯರ್ಥಿಗಳಿಗೆ ₹ 1000.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್‌ 31, 2021

ಹೆಚ್ಚಿನ ಮಾಹಿತಿಗೆ: https://kea.kar.nic.in

ಒಎನ್‌ಜಿಸಿಯಲ್ಲಿ ವಿವಿಧ ಹುದ್ದೆಗಳು

ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: ಮೆಟೀರಿಯಲ್ ಮ್ಯಾನೇಜ್‌ಮೆಂಟ್‌ ಆಫೀಸರ್‌, ಅಸೋಸಿಯೇಷನ್‌ ಆಫ್ ಎನರ್ಜಿ ಎಂಜಿನಿಯರ್‌, ಜಿಯಾಲಜಿಸ್ಟ್‌, ಕೆಮಿಸ್ಟ್‌, ಟ್ರಾನ್ಸ್‌ಫೋರ್ಟ್ ಆಫೀಸರ್‌

ಹುದ್ದೆಗಳ ಸಂಖ್ಯೆ: 309

ಸ್ಥಳ: ಭಾರತದೆಲ್ಲೆಡೆ

ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಬಿಇ, ಬಿಟೆಕ್‌ ಹಾಗೂ ಎಂಡಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಸೋಸಿಯೇಶನ್‌ ಆಫ್ ಎನರ್ಜಿ ಎಂಜಿನಿಯರ್‌ ಹುದ್ದೆಗೆ ಗರಿಷ್ಠ 28 ವರ್ಷ ಹಾಗೂ ಇತರ ಹುದ್ದೆಗಳಿಗೆ ಗರಿಷ್ಠ 30 ವರ್ಷ.

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹ 300. ಎಸ್‌ಸಿ/ ಎಸ್‌ಟಿ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 1, 2021

ಹೆಚ್ಚಿನ ಮಾಹಿತಿಗೆ: www.ongcindia.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.