ADVERTISEMENT

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 7:35 IST
Last Updated 4 ಆಗಸ್ಟ್ 2021, 7:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಹುದ್ದೆಗಳು ತಾತ್ಕಾಲಿಕ ಹುದ್ದೆಗಳಾಗಿವೆ. ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಹುದ್ದೆಗಳ ಸಂಖ್ಯೆ: 23

ADVERTISEMENT

ಹುದ್ದೆಗಳ ವಿವರ: ಇಂಗ್ಲಿಷ್,ಹಿಂದಿ,ಸಂಸ್ಕೃತ,ತೆಲುಗು,ಉರ್ದು,ಇತಿಹಾಸ,ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ,ಶಿಕ್ಷಣಶಾಸ್ತ್ರ,ಭೌತಶಾಸ್ತ್ರಸೂಕ್ಷ್ಮಜೀವಾಣುಶಾಸ್ತ್ರ, ಬಯೋಟೆಕ್ನಾಲಜಿ, ಪ್ರಾಣಿಶಾಸ್ತ್ರ,ಗಣಿತಶಾಸ್ತ್ರ,ಸಸ್ಯಶಾಸ್ತ್ರ ಸೇರಿದಂತೆ 23 ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯಬಹುದು.

ವಿದ್ಯಾರ್ಹತೆ : ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎನ್‌ಇಟಿ / ಕೆಎಸ್‌ಇಟಿ / ಪಿಹೆಚ್‌ಡಿ ಯಾವುದಾದರೊಂದು ಅರ್ಹತೆ ಪಡೆದಿರಬೇಕು. ಯುಜಿಸಿ-2018 ರ ಮಾರ್ಗಸೂಚಿ ಅನುಸಾರ ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.

ಸಂದರ್ಶನ: 10-08-2021 ರಿಂದ 13-08-2021 ರವರೆಗೆ ಸಂದರ್ಶನ ಇರಲಿದೆ.ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅದರ 5 ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗೆಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವೆಬ್‌ಸೈಟ್‌ ನೋಡುವುದು.

ವೆಬ್‌ಸೈಟ್‌:https://ksoumysuru.ac.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.