ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 16:12 IST
Last Updated 1 ಆಗಸ್ಟ್ 2021, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ– 33

441.ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ನಡೆಯಿತು?

ಎ) 1857

ADVERTISEMENT

ಬಿ) 1919

ಸಿ) 1942

ಡಿ)1905

442.ಶಿಕ್ಷಣವು ಮೂಲಭೂತ ಹಕ್ಕು ಎಂದು ತಿಳಿಸಿದ ಸಂವಿಧಾನದ ತಿದ್ದುಪಡಿ

ಎ) 42

ಬಿ) 86

ಸಿ) 73

ಡಿ) 74

443.ವ್ಯಕ್ತಿಯೊಬ್ಬನು ಭವಿಷ್ಯದಲ್ಲಿ ಕಾರು ಖರೀದಿಸಲು ಪ್ರತೀ ತಿಂಗಳು ನಿಯಮಿತವಾಗಿ ಉಳಿತಾಯ ಮಾಡಲು ಈ ಬ್ಯಾಂಕ್ ಖಾತೆಯನ್ನು ತೆರೆಯಬೇಕು

ಎ)ಚಾಲ್ತಿ ಖಾತೆ

ಬಿ)ಉಳಿತಾಯ ಖಾತೆ

ಸಿ)ಆವರ್ತ ಠೇವಣಿ ಖಾತೆ

ಡಿ)ನಿಶ್ಚಿತ ಠೇವಣಿ ಖಾತೆ

444. 1935ರ ಭಾರತ ಸರ್ಕಾರದ ಕಾಯ್ದೆಯು ಒಂದು ಮುಖ್ಯ ದಾಖಲೆಯಾಗಿದೆ.ಏಕೆಂದರೆ ಅದು

ಎ)ಪ್ರಾಂತ್ಯಗಳಲ್ಲಿ ದ್ವಿ ಸರ್ಕಾರವನ್ನು ಜಾರಿಗೆ ತಂದಿತು

ಬಿ)ನಿಯಂತ್ರಣ ಮಂಡಳಿಯನ್ನು ನೇಮಿಸಿತು

ಸಿ)ಮತೀಯ ಆಧಾರದ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಸ್ಥಾಪಿಸಿತು

ಡಿ)ಅಖಿಲ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು

445.ಪೋರ್ಚುಗೀಸರಿಂದ ಗೋವಾ ವಿಮೋಚನೆಗೊಂಡ ವರ್ಷ

ಎ) 1954

ಬಿ) 1963

ಸಿ) 1961

ಸಿ) 1971

446.ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ?

ಎ)ಬೆಂಗಳೂರು

ಬಿ)ಚನ್ನಪಟ್ಟಣ

ಸಿ)ಕಲಬುರ್ಗಿ

ಡಿ)ಮೈಸೂರು

447.ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆಯ ಆಡಳಿತ ಕಚೇರಿ ಎಲ್ಲಿದೆ?

ಎ)ಬ್ಯಾಂಕಾಕ್

ಬಿ)ಕಠ್ಮಂಡು

ಸಿ)ಕೊಲೊಂಬೊ

ಡಿ)ದೆಹಲಿ

448. ‘ಬೋನ್ಸಾಯ್’ ಎಂಬ ಶಬ್ದ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

ಎ)ಭತ್ತದ ಕೃಷಿ

ಬಿ)ತೋಟಗಾರಿಕೆ

ಸಿ)ಜಾಗತಿಕ ತಾಪಮಾನ ಏರಿಕೆ

ಡಿ)ಮಣ್ಣಿನ ಸವಕಳಿ

449.ಪ್ರಸಿದ್ಧ ನಾಟಕ ‘ತುಘಲಕ್’ ಕರ್ತೃ

ಎ)ಗಿರೀಶ್ ಕಾರ್ನಾಡ್

ಬಿ)ಯು.ಆರ್.ಅನಂತಮೂರ್ತಿ

ಸಿ)ಎಸ್.ಎಲ್.ಭೈರಪ್ಪ

ಡಿ)ಪೂರ್ಣಚಂದ್ರ ತೇಜಸ್ವಿ

450.ಚಿಟ್ಟಾಣಿ ರಾಮಚಂದ್ರ ಹೆಗಡೆ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?

ಎ)ತಬಲಾ

ಬಿ)ಭರತನಾಟ್ಯ

ಸಿ)ಶಾಸ್ತ್ರೀಯ ಗಾಯನ

ಡಿ)ಯಕ್ಷಗಾನ

ಭಾಗ 32ರ ಉತ್ತರ: 426. ಸಿ, 427. ಎ, 428. ಬಿ, 429. ಬಿ, 430. ಡಿ, 431. ಸಿ, 432. ಸಿ, 433. ಡಿ, 434. ಎ, 435. ಸಿ, 436. ಎ, 437. ಡಿ, 438. ಸಿ, 439. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.