ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 17:01 IST
Last Updated 4 ಆಗಸ್ಟ್ 2021, 17:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ– 36

481. ‘ಹುಳುಕಡ್ಡಿ’ ರೋಗ ಯಾವುದರಿಂದ ಉಂಟಾಗುತ್ತದೆ?

ಎ) ಬ್ಯಾಕ್ಟೀರಿಯಾ

ADVERTISEMENT

ಬಿ) ವೈರಸ್

ಸಿ) ಹುಳು

ಡಿ) ಶಿಲೀಂಧ್ರ

482. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶದ ನಡುವಿನ ಭಿನ್ನತೆಯನ್ನು ಕೆಳಕಂಡದ್ದರ ಇರುವಿಕೆಯಿಂದ ಗುರುತಿಸಲಾಗುತ್ತದೆ

ಎ) ಕೋಶಭಿತ್ತಿ

ಬಿ) ಕ್ಲೋರೋಪ್ಲಾಸ್ಟ್‌ಗಳು

ಸಿ) ಕೋಶಪೊರೆ

ಡಿ) ನ್ಯೂಕ್ಲಿಯಸ್

483. ‘ಪೊಲೀಸ್ ಧ್ವಜ ದಿನಾಚರಣೆ’ಯನ್ನು ಯಾವಾಗ ಆಚರಿಸುತ್ತಾರೆ?

ಎ) ಜೂನ್ 5

ಬಿ) ಏಪ್ರಿಲ್ 2

ಸಿ) ಆಗಸ್ಟ್ 15

ಡಿ) ಜನವರಿ 26

484. ಗೊಮ್ಮಟೇಶ್ವರ ಮೂರ್ತಿ ಈ ಕೆಳಗಿನ ಯಾವ ಸ್ಥಳದಲ್ಲಿದೆ?

ಎ) ಕುಂದಾಪುರ

ಬಿ) ಬಾದಾಮಿ

ಸಿ) ಬೇಲೂರು

ಡಿ) ಧರ್ಮಸ್ಥಳ

485. ‘ನಕ್ಸಲೀಯ ಚಳವಳಿ’ಯು ಈ ಕೆಳಕಂಡ ರಾಜ್ಯದ ‘ನಕ್ಸಲ್ ಬಾರಿ’ ಜಿಲ್ಲೆಯಲ್ಲಿ ಪ್ರಾರಂಭವಾಯಿತು

ಎ) ಆಂಧ್ರಪ್ರದೇಶ

ಬಿ) ಕೇರಳ

ಸಿ) ಜಾರ್ಖಂಡ್

ಡಿ) ಪಶ್ಚಿಮ ಬಂಗಾಳ

486. ‘PAN’ ಎಂಬ ಸಂಕ್ಷೇಪಾಕ್ಷರಗಳ ವಿಸ್ತೃತ ರೂಪ

ಎ) Permanent Account Number

ಬಿ) Peroxyacetyl Nitrate

ಸಿ) Personal Area Network

ಡಿ) ಮೇಲಿನ ಎಲ್ಲವೂ

487. ಭೂಕಂಪನದ ತೀವ್ರತೆಯ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ

ಎ) ರಿಕ್ಟರ್‌

ಬಿ) ಕೆಲ್ವಿನ್

ಸಿ) ಪಾಸ್ಕಲ್‌

ಡಿ) ನ್ಯೂಟನ್

488. ಕರ್ನಾಟಕದಲ್ಲಿ ಪೊಲೀಸ್ ಶ್ರೇಣಿಗಳ ಸರಿಯಾದ ಕ್ರಮವನ್ನು ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಯವರೆಗೆ ಜೋಡಿಸಿ.

ಎ) ಎಸ್ಪಿ-> ಐಜಿ-> ಡಿಐಜಿ-> ಎಡಿಜಿ

ಬಿ) ಎಸ್ಪಿ-> ಡಿಐಜಿ-> ಐಜಿ-> ಎಡಿಜಿ

ಸಿ) ಡಿಐಜಿ-> ಎಸ್ಪಿ-> ಐಜಿ-> ಎಡಿಜಿ

ಡಿ) ಎಸ್ಪಿ-> ಡಿಐಜಿ-> ಎಡಿಜಿ-> ಐಜಿ

489. ‘ಫೆನ್ನಿ’ ಎಂಬ ಮದ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ?

ಎ) ದ್ರಾಕ್ಷಿ

ಬಿ) ಸೇಬುಹಣ್ಣು

ಸಿ) ಗೇರುಹಣ್ಣು

ಡಿ) ಖರ್ಜೂರ

490. ಈ ಕೆಳಗಿನ ಯಾವ ರೈಲು ನಿಲ್ದಾಣವು ‘ಕೊಂಕಣ ರೈಲ್ವೆ’ಗೆ ಸೇರಿದೆ?

ಎ) ಮಂಗಳೂರು

ಬಿ) ಬೆಳಗಾವಿ

ಸಿ) ಲೋಂಡಾ

ಡಿ) ಕ್ಯಾಸಲ್‌ ರಾಕ್

ಭಾಗ 35ರ ಉತ್ತರ: 466. ಡಿ, 467. ಡಿ, 468. ಬಿ, 469. ಡಿ, 470. ಬಿ, 471. ಎ, 472. ಎ, 473. ಎ, 474. ಎ, 475. ಬಿ, 476. ಡಿ, 477. ಬಿ, 478. ಬಿ, 479. ಎ, 480. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.