ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
   

ಭಾಗ– 49

661) ಯಾವ ಜಿಲ್ಲೆಯನ್ನು ಕಾಫಿ ನಾಡು ಎನ್ನುತ್ತಾರೆ?
ಎ) ಚಿಕ್ಕಮಗಳೂರು
ಬಿ) ಕೊಡಗು
ಸಿ) ಶಿವಮೊಗ್ಗ
ಡಿ) ಚಿಕ್ಕಬಳ್ಳಾಪುರ

662) ಭಾರತದ ನಯಾಗರ ಎಂದು ಯಾವ ಜಲಪಾತವನ್ನು ಕರೆಯುತ್ತಾರೆ?
ಎ) ಉಂಚಳ್ಳಿ
ಬಿ) ಗೋಕಾಕ
ಸಿ) ಗೇರುಸೊಪ್ಪ
ಡಿ) ಮಾಗೋಡು

ADVERTISEMENT

663) ಜಂಬಿಟ್ಟಿಗೆ ಮಣ್ಣಿನಲ್ಲಿ ಹೆಚ್ಚಾಗಿ ಯಾವ ಬೆಳೆಗಳನ್ನು ಬೆಳೆಯಲಾಗುತ್ತದೆ?
ಎ) ಕಾಫಿ, ಗೋಡಂಬಿ, ಚಹಾ, ಏಲಕ್ಕಿ
ಬಿ) ಮೆಣಸಿನಕಾಯಿ, ಹತ್ತಿ, ಜೋಳ
ಸಿ) ತಂಬಾಕು, ಕಬ್ಬು, ದ್ರಾಕ್ಷಿ
ಡಿ) ದಾಳಿಂಬೆ, ತೆಂಗು, ನಿಂಬೆ, ಪಪ್ಪಾಯ

664) ಪೆನ್ನಾರ ‍& ಪಾಲಾರ ನದಿಗಳು ಕೆಳಗಿನ ಯಾವ ಜಿಲ್ಲೆಯಲ್ಲಿ ಹರಿಯುತ್ತವೆ?
ಎ) ತುಮಕೂರು
ಬಿ) ಮೈಸೂರು
ಸಿ) ಶಿವಮೊಗ್ಗ
ಡಿ) ದಾವಣಗೆರೆ

665) ಕೆಳಗಿನ ಯಾವ ಜಿಲ್ಲೆ ಅತೀ ಕಡಿಮೆ ನೀರಾವರಿ ಪ್ರದೇಶ ಹೊಂದಿದೆ?
ಎ) ಮೈಸೂರು
ಬಿ) ಚಾಮರಾಜನಗರ
ಸಿ) ಕೊಡಗು
ಡಿ) ಗದಗ

666) ಹೊಂದಿಸಿ ಬರೆಯಿರಿ:ಜಾಗತಿಕ ವಿಶೇಷತೆ ಪಡೆದ ಬೆಳೆ ಹಾಗೂ ಸ್ಥಳ
ಅ) ಚಕ್ಕೋತ 1. ದೇವನಹಳ್ಳಿ
ಆ) ಬದನೆಕಾಯಿ 2. ಈರನಗೆರೆ
ಇ) ಮೆಣಸಿನಕಾಯಿ 3. ಬ್ಯಾಡಗಿ
ಈ) ರಸಬಾಳೆ 4. ನಂಜನಗೂಡು

ಅ ಆ ಇ ಈ
ಎ) 3 4 1 2
ಬಿ) 3 4 2 1
ಸಿ) 1 2 4 3
ಡಿ) 1 2 3 4

667) ಕೆಳಗಿನ ಯಾವ ಜಿಲ್ಲೆಯಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದಿಲ್ಲ?
ಎ) ಬೆಳಗಾವಿ
ಬಿ) ವಿಜಯಪುರ
ಸಿ) ಕೊಡಗು
ಡಿ) ಚಾಮರಾಜನಗರ

668) ಕಲಾದಗಿ, ಶಹಬಾದ, ವಾಡಿ, ಅಮ್ಮಸಂದ್ರ ಇವು ಯಾವ ಉತ್ಪಾದನೆಗೆ ಪ್ರಸಿದ್ಧಿ ಹೊಂದಿವೆ?
ಎ) ಸಿಮೆಂಟ್‌
ಬಿ) ಸೆಣಬು
ಸಿ) ಭತ್ತ
ಡಿ) ಗೋಧಿ

669) ಕೆಳಗಿನ ಯಾವ ಲೋಹವನ್ನು ‘ಬಡವರ ಬೆಳ್ಳಿ’ ಎಂದು ಕರೆಯುತ್ತಾರೆ?
ಎ) ಕಬ್ಬಿಣ
ಬಿ) ಅಲ್ಯುಮಿನಿಯಂ
ಸಿ) ತಾಮ್ರ
ಡಿ) ಸತು

670) ಕೆಳಗಿನ ಯಾವುದು ಕೃಷ್ಣಾ ನದಿಯ ಉಪನದಿ ಅಲ್ಲ?
ಎ) ತುಂಗಭದ್ರಾ
ಬಿ) ಘಟಪ್ರಭಾ
ಸಿ) ಮಲಪ್ರಭಾ
ಡಿ) ಅರ್ಕಾವತಿ

671) ಕಾಶ್ಮೀರ-ಕಣಿವೆ ಕೆಳಗಿನ ಯಾವ ಶ್ರೇಣಿಗಳ ಮಧ್ಯೆ ಕಂಡು ಬರುತ್ತದೆ?
ಎ) ಪೀರ್ ಪಂಜಾಲ್‌ ಮತ್ತು ಜಾಸ್ಕರ್‌ ಶ್ರೇಣಿ
ಬಿ) ಜಾಸ್ಕರ್ ಶ್ರೇಣಿ ಮತ್ತು ಕಾರಾಕೊರಂ ಶ್ರೇಣಿ
ಸಿ) ಶಿವಾಲಿಕ್‌ ಶ್ರೇಣಿ ಮತ್ತು ಅರಾವಳಿ ಶ್ರೇಣಿ
ಡಿ) ಹಿಮಾದಿ ಮತ್ತು ಪೂರ್ವಾಂಚಲ ಶ್ರೇಣಿ

672) ಕೆಳಗಿನ ಹೇಳಿಕೆಗಳನ್ನು ಗಮನಿಸಿ.
ಅ) ಮೌಂಟ್‌ ಎವರೆಸ್ಟ್‌ ಅನ್ನು ನೇಪಾಳದಲ್ಲಿ ಗೌರಿ-ಶಂಕರ ಎಂದು ಕರೆಯುತ್ತಾರೆ.
ಆ) ಮೌಂಟ್‌ ಎವರೆಸ್ಟ್‌ನ್ನು ಭಾರತದಲ್ಲಿ ಸಾಗರ ಮಾಲಾ ಎಂದು ಕರೆಯುತ್ತಾರೆ.

ಎ) ‘ಅ’ ಮಾತ್ರ ಸರಿ ಬಿ) ‘ಆ’ ಮಾತ್ರ ಸರಿ
ಸಿ) ಎರಡೂ ಸರಿ ಡಿ) ಎರಡೂ ತಪ್ಪು

673) ಹೊಂದಿಸಿ ಬರೆಯಿರಿ:ವನ್ಯಜೀವಿ ಧಾಮಹಾಗೂ ರಾಜ್ಯ
ಎ) ಸುಂದರ್‌ ಬನ್ಸ್‌ 1. ಸಿಕ್ಕಿಂ
ಬಿ) ಮಾನಸ 2. ಮಧ್ಯಪ್ರದೇಶ
ಸಿ) ಕಾಂಚನಜುಂಗಾ 3. ಪಶ್ಚಿಮಬಂಗಾಳ
ಡಿ)ಪನ್ನಾ 4. ಅಸ್ಸಾಂ

ಅ ಆ ಇ ಈ
ಎ) 1 2 3 4
ಬಿ) 1 2 4 3
ಸಿ) 3 4 1 2
ಡಿ) 3 4 2 1

674) ಈ ಕೆಳಗಿನ ಯಾವ ಮಣ್ಣಿನಲ್ಲಿ ಅತಿ ಹೆಚ್ಚು ಪೊಟ್ಯಾಸಿಯಂ ಇರುತ್ತದೆ?
ಎ) ಕಪ್ಪು ಮಣ್ಣು
ಬಿ) ಕೆಂಪು ಮಣ್ಣು
ಸಿ) ಜಂಬಿಟ್ಟಿಗೆ ಮಣ್ಣು
ಡಿ) ಮೆಕ್ಕಲು ಮಣ್ಣು

675) ಮಂಜ್ರಾ, ಇಂದ್ರಾವತಿ, ಸಬರಿ ಇವು ಯಾವ ನದಿಯ ಉಪನದಿಗಳು?
ಎ) ಗೋದಾವರಿ
ಬಿ) ಕೃಷ್ಣಾ
ಸಿ) ಮಹಾನದಿ
ಡಿ) ತುಂಗಭದ್ರಾ

ಭಾಗ 48ರ ಉತ್ತರಗಳು: 646. ಬಿ, 647. ಸಿ, 648. ಸಿ, 649. ಡಿ, 650. ಡಿ, 651. ಡಿ, 652. ಬಿ, 653. ಸಿ, 654. ಡಿ, 655. ಎ, 656. ಎ, 657. ಎ, 658. ಬಿ, 659. ಬಿ, 660. ಎ

***

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.