ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 20:45 IST
Last Updated 23 ಆಗಸ್ಟ್ 2021, 20:45 IST
   

ಭಾಗ -46

616. ಮೌರ್ಯರ ರಾಜಧಾನಿ ಯಾವುದಾಗಿತ್ತು?

ಎ) ಪಾಟಲೀಪುತ್ರ

ADVERTISEMENT

ಬಿ) ಕಪಿಲವಸ್ತು

ಸಿ) ಬನಾರಸ್

ಡಿ) ಇಂದೋರ್

617. ‘ಶಕ್ತಿ ವಿಶಿಷ್ಟಾದ್ವೈತ’ ಸಿದ್ಧಾಂತ ಪ್ರತಿಪಾದಿಸಿದವರು ಯಾರು?

ಎ) ಶಂಕರಾಚಾರ್ಯ

ಬಿ) ರಾಮಾನುಜಾಚಾರ್ಯ

ಸಿ) ಮಧ್ವಾಚಾರ್ಯ

ಡಿ) ಬಸವೇಶ್ವರ

618. ಸೌರಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ ಯಾವುದು?

ಎ) ಸೌರಕೋಶ

ಬಿ) ಬ್ಯಾಟರಿ

ಸಿ) ಡೈನಮೊ

ಡಿ) ಯುಎಸ್‌ಬಿ

619. ಆಮ್ಲಮಳೆ ಯಾವುದರಿಂದಾಗುತ್ತದೆ?

ಎ) ಹೈಡ್ರೋಕ್ಲೋರಿಕ್ ಆಮ್ಲ

ಬಿ) ಪೊಟ್ಯಾಶಿಯಂ ಕ್ಲೋರೈಡ್

ಸಿ) ನೈಟ್ರಿಕ್ ಆಮ್ಲ

ಡಿ) ಸಲ್ಫ್ಯೂರಿಕ್ ಆಮ್ಲ

620. ಯಾವಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು?

ಎ) ನವೆಂಬರ್ 1, 1956

ಬಿ) ನವೆಂಬರ್ 1, 1958

ಸಿ) ನವೆಂಬರ್ 1, 1960

ಡಿ) ನವೆಂಬರ್ 1, 1973

621. ವಿಟಮಿನ್‌ ಬಿ1 ಕೊರತೆಯಿಂದ ಯಾವ ರೋಗ ಉಂಟಾಗುತ್ತದೆ?

ಎ) ರಿಕೆಟ್ಸ್

ಬಿ) ಬೆರಿಬೆರಿ

ಸಿ) ಗಾಯಿಟರ್‌

ಡಿ) ಸ್ಕರ್ವಿ

622. ಕುಷ್ಠರೋಗ ಯಾವುದರಿಂದ ಉಂಟಾಗುತ್ತದೆ?

ಎ) ಬ್ಯಾಕ್ಟೀರಿಯಾ

ಬಿ) ವೈರಾಣು

ಸಿ) ಫಂಗಸ್

ಡಿ) ಪ್ರೊಟೊಝೋವಾ

623. ಲೋಕಸಭೆಯ ಈಗಿನ ಸಭಾಪತಿ ಯಾರು?

ಎ) ಮೀರಾ ಕುಮಾರ್

ಬಿ) ಸುಮಿತ್ರಾ ಮಹಾಜನ್

ಸಿ) ಓಂ ಬಿರ್ಲಾ

ಡಿ) ಮೇಲಿನ ಯಾರೂ ಅಲ್ಲ

624. ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ ಯಾವುದು?

ಎ) ಜನವರಿ 26, 1950

ಬಿ) ಜನವರಿ 26, 1949

ಸಿ) ನವೆಂಬರ್ 26, 1949

ಡಿ) ಆಗಸ್ಟ್‌ 15, 1947

625. ಭಾರತದ ಸಂವಿಧಾನದ ಯಾವ ವಿಧಿಯನ್ವಯ ಬಿರುದು / ಶಿರೋನಾಮೆಗಳನ್ನು ತೆಗೆದುಹಾಕಲಾಗಿದೆ?

ಎ) 18→ಬಿ) 19

ಸಿ) 21→ಡಿ) 22

626. ಭಾರತ ದೇಶದ ಮುಖ್ಯಸ್ಥರು ಯಾರು?

ಎ) ರಾಷ್ಟ್ರಪತಿ

ಬಿ) ಪ್ರಧಾನಮಂತ್ರಿ

ಸಿ) (ಎ) ಮತ್ತು (ಬಿ) ಎರಡೂ

ಡಿ) ಮೇಲಿನ ಯಾರೂ ಅಲ್ಲ

627. ‘ಲಿಗ್ನೈಟ್’ ಯಾವುದರ ಪ್ರತಿರೂಪ?

ಎ) ಕಬ್ಬಿಣ→ಬಿ) ಕಲ್ಲಿದ್ದಲು

ಸಿ) ವಜ್ರ→ಡಿ) ಕಟ್ಟಿಗೆ

628. ಬಯೋಗ್ಯಾಸ್‌ನ ಮುಖ್ಯ ಅಂಶ ಯಾವುದು?

ಎ) ಮಿಥೇನ್

ಬಿ) ಇಥೇನ್

ಸಿ) ಪ್ರೊಪೇನ್

ಡಿ) ಬ್ಯುಟೇನ್

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.