ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 19:30 IST
Last Updated 22 ಸೆಪ್ಟೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಾಗ– 64

871. ‘ಕನಿಷ್ಠ ಅಗತ್ಯ ಕಾರ್ಯಕ್ರಮ’ ರೂಪಿಸಿದ ಯೋಜನೆ

ಎ) ನಾಲ್ಕನೇ ಪಂಚವಾರ್ಷಿಕ ಯೋಜನೆ
ಬಿ) ಐದನೆಯ ಪಂಚವಾರ್ಷಿಕ ಯೋಜನೆ
ಸಿ) ಆರನೆಯ ಪಂಚವಾರ್ಷಿಕ ಯೋಜನೆ
ಡಿ) ಏಳನೆಯ ಪಂಚವಾರ್ಷಿಕ ಯೋಜನೆ

ADVERTISEMENT

872. ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್‌ ನಿರ್ವಹಣಾ ಅಧಿನಿಯಮವು ಕೆಳಗಿನ ಈ ಯಾವುದಕ್ಕೆ ಸಂಬಂಧಿಸಿದೆ?

ಎ) ವಿತ್ತೀಯ ಕೊರತೆ
ಬಿ) ಕಂದಾಯ ಕೊರತೆ
ಸಿ) ಎ ಮತ್ತು ಬಿ
ಡಿ) ವಿತ್ತೀಯ ಅಥವಾ ಕಂದಾಯ ಕೊರತೆಗಳು ಅಲ್ಲ

873. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆಯು ಭಾರತದ ಸಂದರ್ಭದಲ್ಲಿ ಸತತವಾಗಿ ಕುಸಿಯುತ್ತಿದೆ.
2. ಜಿಡಿಪಿಗೆ ಸೇವೆಗಳ ಕ್ಷೇತ್ರದ ಕೊಡುಗೆಯು ಸತತವಾಗಿ ಏರುತ್ತಿದೆ.
ಎ) ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1 ಮತ್ತು 2 ಸರಿ
ಡಿ) 1 ಮತ್ತು 2 ತಪ್ಪು

874. ಭಾರತದಲ್ಲಿ ರಾಷ್ಟ್ರೀಯ ವರಮಾನದ ಅಂದಾಜುಗಳನ್ನು ಕ್ರೋಢೀಕರಿಸುವವರು ಯಾರು?

ಎ) ರಾಷ್ಟ್ರೀಯ ಸಾಂಖ್ಯಿಕ ಕಚೇರಿ
ಬಿ) ಕೇಂದ್ರೀಯ ಸಾಂಖ್ಯಿಕ ಕಚೇರಿ
ಸಿ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಡಿ) ನೀತಿ ಆಯೋಗ

875. ಆರ್ಥಿಕ ಅಭಿವೃದ್ಧಿಯೊಂದಿಗೆ ಸಗಟು ದೇಶಿಯ ಉತ್ಪನ್ನದಲ್ಲಿನ ಸೇವಾ ಕ್ಷೇತ್ರದ ಪಾಲು
ಎ) ಹೆಚ್ಚಾಗುತ್ತದೆ
ಬಿ) ಕಡಿಮೆಯಾಗುತ್ತದೆ
ಸಿ) ಏರಿಳಿತವಾಗುತ್ತದೆ
ಡಿ) ಸ್ಥಿರವಾಗುತ್ತದೆ

876. ಸಾರ್ವಜನಿಕ ಸಾಲ ಎಂದರೆ

ಎ) ಸಾರ್ವಜನಿಕರು ಎತ್ತುವ ಸಾಲ
ಬಿ) ಭಾರತೀಯ ರಿಸರ್ವ್‌ ಬ್ಯಾಂಕ್‌ ಎತ್ತುವ ಸಾಲ
ಸಿ) ರಾಷ್ಟ್ರೀಕೃತ ಬ್ಯಾಂಕುಗಳು ಎತ್ತುವ ಸಾಲ
ಡಿ) ಸರ್ಕಾರ ಎತ್ತುವ ಸಾಲ

877. ಭಾರತದ ಪ್ರಪ್ರಥಮ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘ ಇರುವ ಜಾಗ
ಎ) ಕಣಗಿಹಾಳ-ಗದಗ
ಬಿ) ಆನಂದ-ಗುಜರಾತ್‌
ಸಿ) 24 ಪರಗಣ-ಪಶ್ಚಿಮ ಬಂಗಾಳ
ಡಿ) ಗೋಕಾಕ್‌-ಬೆಳಗಾವಿ

878. ಬ್ಯಾಂಕಿಂಗ್‌ ಉದ್ಯಮಕ್ಕೆ ಸಂಬಂಧಪಟ್ಟಂತೆ Non-performing Assets ಎಂದರೆ
ಎ) ಹೆಚ್ಚುವರಿ ಸಿಬ್ಬಂದಿ
ಬಿ) 20 ವರ್ಷಕ್ಕಿಂತ ಹಳೆಯ ಬ್ಯಾಂಕಿನ ವಾಹನಗಳು
ಸಿ) ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕಿನ ಕಟ್ಟಡಗಳು
ಡಿ) ವಸೂಲಿ ಆಗದಿರುವ ಬ್ಯಾಂಕಿನ ಸಾಲಗಳು

879. ಒಂದು ಗೊತ್ತಾದ ವರ್ಷದಲ್ಲಿ ಒಂದು ರಾಷ್ಟ್ರದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯ ಈ ಕೆಳಗಿನ ಯಾವುದರ ವ್ಯಾಖ್ಯಾನವಾಗಿದೆ
ಎ) ರಾಷ್ಟ್ರೀಯ ಆದಾಯ
ಬಿ) ಒಟ್ಟು ದೇಶಿಯ ಉತ್ಪಾದನೆ
ಸಿ) ಒಟ್ಟು ರಾಷ್ಟ್ರೀಯ ಉತ್ಪಾದನೆ
ಡಿ) ಒಟ್ಟು ರಾಷ್ಟ್ರೀಯ ತಲಾ ಆದಾಯ

880. ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಉದ್ದೇಶಗಳಲ್ಲಿ ಈ ಕೆಳಗಿನ ಯಾವ ಉದ್ದೇಶಗಳನ್ನು ಒಳಗೊಂಡಿದೆ?
1. ಜನರ ಅನುಭೋಗದ ಅವಶ್ಯಕತೆಗಳನ್ನು ಪೂರೈಸುವುದು
2. ಬೆಲೆಗಳಲ್ಲಿ ಸ್ಥಿರತೆ ಕಾಪಾಡುವುದು
3. ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ರೂಢಿಸುವುದು

ಸರಿಯಾದ ಹೇಳಿಕೆ ಆಯ್ಕೆಮಾಡಿ
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3

881. ಮಾನವ ಅಭಿವೃದ್ಧಿ ಸೂಚ್ಯಂಕ ಈ ಕೆಳಕಂಡ ಸೂಚಕಗಳನ್ನು ಒಳಗೊಂಡಿರುತ್ತದೆ.
1. ರಾಷ್ಟ್ರೀಯ ಆದಾಯ
2. ನಿರೀಕ್ಷಿತ ಆಯುಷ್ಯಾವಧಿ
3. ಶಿಕ್ಷಣದ ಮಟ್ಟ
4. ಬಡತನ ರೇಖೆ

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1 ಮತ್ತು 2
ಬಿ) 2 ಮತ್ತು 3
ಸಿ) 3 ಮತ್ತು 4
ಡಿ) 1, 2, 3 ಮತ್ತು 4

882. ಈ ಕೆಳಗಿನವುಗಳಲ್ಲಿ ಯಾವವು ನೇರ ತೆರಿಗೆಗಳಾಗಿವೆ?

1. ಆದಾಯ ತೆರಿಗೆ
2. ಕಂಪನಿ ತೆರಿಗೆ
3. ಬಡ್ಡಿ ತೆರಿಗೆ
4. ಸಂಪತ್ತು ತೆರಿಗೆ

ಸರಿಯಾದ ಉತ್ತರ ಆಯ್ಕೆಮಾಡಿ
ಎ) 1, 2 ಮತ್ತು 3
ಬಿ) 2, 3 ಮತ್ತು 4
ಸಿ) 1, 3 ಮತ್ತು 4
ಡಿ) 1, 2, 3 ಮತ್ತು 4

883. ಹಣಕಾಸು ಆಯೋಗದ ಶಿಫಾರಸುಗಳು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತದೆ.
1. ತೆರಿಗೆ ಹಂಚಿಕೆ
2. ಅನುದಾನ ನೀಡಿಕೆ
3. ರಾಜ್ಯಗಳಿಗೆ ಕೇಂದ್ರದಿಂದ ಸಾಲ

ಸರಿಯಾದ ಉತ್ತರ ಆಯ್ಕೆಮಾಡಿ
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3

884. ಈ ಕೆಳಗಿನ ಯಾವ ತೆರಿಗೆಯನ್ನು ರಾಜ್ಯ ಸರ್ಕಾರಗಳು ವಿಧಿಸುತ್ತವೆ?
ಎ) ಆದಾಯ ತೆರಿಗೆ
ಬಿ) ಸಂಪತ್ತಿನ ತೆರಿಗೆ
ಸಿ) ಸೇವಾ ತೆರಿಗೆ
ಡಿ) ವೃತ್ತಿ ತೆರಿಗೆ

885. ವಿಶೇಷ ಆರ್ಥಿಕ ವಲಯ ಕಾಯ್ದೆ ಜಾರಿಗೆ ಬಂದದ್ದು?
ಎ) 2000
ಬಿ) 2005
ಸಿ) 2007
ಡಿ) 1991

ಭಾಗ 63ರ ಉತ್ತರಗಳು: 856. ಎ, 857. ಡಿ, 858. ಬಿ, 859. ಎ, 860. ಬಿ, 861. ಡಿ, 862. ಡಿ, 863. ಡಿ, 864. ಎ, 865. ಎ, 866. ಡಿ, 867. ಡಿ, 868. ಸಿ, 869. ಎ, 870. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.