ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 19:30 IST
Last Updated 14 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ -24

321. ಈ ಹುಳುಗಳಲ್ಲಿ ಯಾವುದು ಪರಾವಲಂಬಿಯಲ್ಲ?

ಎ) ಎರೆಹುಳು

ADVERTISEMENT

ಬಿ) ದುಂಡುಹುಳು

ಸಿ) ಕೊಕ್ಕೆಹುಳು

ಡಿ) ಲಾಡಿಹುಳು

322. ಬಾಹ್ಯ ರೇಖೆ ಕೃಷಿ ಪದ್ಧತಿಯಲ್ಲಿ ಇಳಿಜಾರು ಪ್ರದೇಶಕ್ಕೆ ಅಡ್ಡಲಾಗಿ ಉಳುಮೆ ಮಾಡಲಾಗುತ್ತದೆ. ಏಕೆಂದರೆ

ಎ) ನೀರನ್ನು ಹಿಡಿದಿಟ್ಟುಕೊಳ್ಳಲು

ಬಿ) ಮಳೆ ನೀರಿನಿಂದ ಮಣ್ಣು ಕೊಚ್ಚಿ ಹೋಗದಂತೆ ತಡೆಯಲು

ಸಿ) ಮೇಲಿನ ಎರಡೂ ಕಾರಣಗಳಿಂದ

ಡಿ) ಮೇಲಿನ ಯಾವುದೂ ಅಲ್ಲ

323. ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿ ಯಾರು?

ಎ) ನೀಲ್ ಆರ್ಮ್‌ಸ್ಟ್ರಾಂಗ್

ಬಿ) ಯೂರಿ ಗಗಾರಿನ್

ಸಿ) ಎಡ್ವಿನ್ ಆಲ್ಡ್ರಿನ್‌

ಡಿ) ರಾಕೇಶ ಶರ್ಮಾ

324. ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಸ್ಥಳ

ಎ) ಆಗುಂಬೆ ಬಿ) ಹುಲಿಕಲ್

ಸಿ) ಮಡಿಕೇರಿ ಡಿ) ಸಾಗರ

325. ಒಂದೇ ಸಮಾನ ಉಷ್ಣಾಂಶ ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆಗಳನ್ನು _____ ಎಂದು ಕರೆಯುತ್ತಾರೆ.

ಎ) ಐಸೋಥರ್ಮ್ಸ್

ಬಿ) ಐಸೋಹೇಲ್ಸ್

ಸಿ) ಐಸೋಬಾರ್ಸ್

ಡಿ) ಐಸೋಟ್ರೋಪಿಕ್

326. ಹೊಸ ₹ 500 ನೋಟಿನ ಮೇಲೆ ______ ರವರ ಸಹಿ ಇದೆ.

ಎ) ಪ್ರಧಾನಮಂತ್ರಿಗಳು

ಬಿ) ರಿಸರ್ವ್ ಬ್ಯಾಂಕ್ ಗವರ್ನರ್

ಸಿ) ರಾಷ್ಟ್ರಪತಿ

ಡಿ) ಮಹಾತ್ಮಾಗಾಂಧಿ

327. ಹೊಸ ₹ 2,000 ಕರೆನ್ಸಿ ನೋಟಿನ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ?

ಎ) 17ಬಿ) 15ಸಿ) 09ಡಿ) 10

328. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಕಾಯ್ದೆಯಲ್ಲಿ ಇರುವಂತೆ, ಬಾಲಕ ಅಥವಾ ಬಾಲಕಿ ಎಂದರೆ

ಎ) 18 ವರ್ಷ ವಯಸ್ಸಿನೊಳಗಿನ ಮಗು

ಬಿ) 16 ವರ್ಷ ವಯಸ್ಸಿನೊಳಗಿನ ಮಗು

ಸಿ) 14 ವರ್ಷ ವಯಸ್ಸಿನೊಳಗಿನ ಮಗು

ಡಿ) 12 ವರ್ಷ ವಯಸ್ಸಿನೊಳಗಿನ ಮಗು

329. ಮನುಷ್ಯನ ದೇಹದಲ್ಲಿ ಒಟ್ಟು ಎಷ್ಟು ಮೂಳೆಗಳಿವೆ?

ಎ) 216ಬಿ) 226

ಸಿ) 256ಡಿ) 206

330. ಸೂರ್ಯನ ಕಿರಣಗಳಿಂದ ನಮಗೆ ಈ ಜೀವಸತ್ವ ಸಿಗುತ್ತದೆ

ಎ) ಜೀವಸತ್ವ B

ಬಿ) ಜೀವಸತ್ವ A

ಸಿ) ಜೀವಸತ್ವ D

ಡಿ) ಜೀವಸತ್ವ C

331. ಒಂದು ಕೆಲಸವನ್ನು 8 ಜನ ಸೇರಿ ದಿನಕ್ಕೆ 8 ಗಂಟೆಯಂತೆ ಕೆಲಸ ಮಾಡಿ 36 ದಿನಗಳಲ್ಲಿ ಮುಗಿಸಬಲ್ಲರು. ಅದೇ ಕೆಲಸವನ್ನು ಅಷ್ಟೇ ಜನರು ಸೇರಿ ದಿನಕ್ಕೆ 6 ಗಂಟೆ ಕೆಲಸ ಮಾಡಿ ಎಷ್ಟು ದಿನಗಳಲ್ಲಿ ಮುಗಿಸುತ್ತಾರೆ?

ಎ) 48 ದಿನಗಳು

ಬಿ) 42 ದಿನಗಳು

ಸಿ) 52 ದಿನಗಳು

ಡಿ) 46 ದಿನಗಳು

332. ತಂದೆ ಮತ್ತು ಮಗನ ವಯಸ್ಸಿನ ಒಟ್ಟು ಮೊತ್ತ 68 ಆಗಿದೆ. ಈಗ ಮಗನಿಗೆ 21 ವರ್ಷ ವಯಸ್ಸಾದರೆ, ಮಗ ಹುಟ್ಟಿದಾಗ ತಂದೆಗೆ ಎಷ್ಟು ವಯಸ್ಸಾಗಿತ್ತು?

ಎ) 26ಬಿ) 30ಸಿ) 28ಡಿ) 24

333. ಸರಣಿ ಪೂರ್ಣಗೊಳಿಸಿ.

3, 6, 30, 870, ____?

ಎ) 26100ಬಿ) 2610

ಸಿ) 1740ಡಿ) 756030

334. ಈ ಕೆಳಗಿನವುಗಳಲ್ಲಿ ಸಮತೂಗಿಸಿದ ಸಮೀಕರಣವನ್ನು ಗುರುತಿಸಿರಿ

ಎ) SiO2+Mg->Si+MgO

ಬಿ) SiO2+2Mg->Si+2MgO

ಸಿ) SiO+Mg->Si+MgO2

ಡಿ) SiO2+Mg->SiO+2MgO

335. ಗಿಡದಿಂದ ಉದುರಿದ ಹಸಿರೆಲೆಯನ್ನು ತೆಗೆದಿಟ್ಟು ಕೆಲಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದು ಅದನ್ನು ಸ್ಪಿರಿಟ್ ಹಾಗೂ ಅಯೋಡಿನ್ ದ್ರಾವಣದಲ್ಲಿ ಅದ್ದಿದಾಗ ಎಲೆ ಕಡು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದು ಯಾವುದರ ಇರುವಿಕೆಯನ್ನು ಸೂಚಿಸುತ್ತದೆ?

ಎ) ಪಿಷ್ಟಬಿ) ತೈಲ

ಸಿ) ಪ್ರೊಟೀನ್ ಡಿ) ನಾರು

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.