ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು: ಭಾಗ -38

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 19:30 IST
Last Updated 9 ಆಗಸ್ಟ್ 2021, 19:30 IST

501. ಉಪವಿಭಾಗದ ಪೊಲೀಸ್ ಅಧಿಕಾರಿ ಯಾರಾಗಿರುತ್ತಾರೆ?

ಎ) ಪಿ.ಎಸ್.ಐ ಬಿ) ಸಿ.ಪಿ.ಐ

ಸಿ) ಡಿ.ಎಸ್.ಪಿ ಡಿ) ಎ.ಎಸ್.ಐ

ADVERTISEMENT

502. ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕ ರಾಜ್ಯ ಪೊಲೀಸ್‌ ಘಟಕವಲ್ಲ?

ಎ) ಸಿ.ಐ.ಡಿ ಬಿ) ಎ.ಸಿ.ಬಿ

ಸಿ) ರಾಜ್ಯ ಗುಪ್ತಚರ ವಾರ್ತೆ ಡಿ) ಸಿ.ಬಿ.ಐ

503. ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ವಾರದ ಕವಾಯತ್‌ ಅನ್ನು ಯಾವ ದಿನದಂದು ನಡೆಸಲಾಗುತ್ತದೆ?

ಎ) ಮಂಗಳವಾರ ಬಿ) ಭಾನುವಾರ

ಸಿ) ಶುಕ್ರವಾರ ಡಿ) ಗುರುವಾರ

504. ಈಚೆಗೆ ವಿಶ್ವ ಪಾರಂಪರಿಕ ತಾಣಗಳಿಗೆ ಸೇರ್ಪಡೆಯಾದ ಪ್ರಾಚೀನ ಭಾರತದ ನಗರ ಯಾವುದು?

ಎ) ಧೋಲವೀರಾ ಬಿ) ಹರಪ್ಪ

ಸಿ) ಮೊಹೆಂಜೊದಾರೊ ಡಿ) ಕಾಲಿಂಗ್‌ಬಂಗನ್

505. ಚೋಳರ ರಾಜಧಾನಿ ಯಾವುದು?

ಎ) ವಂಜಿ ಬಿ) ಉರೈಯೂರು

ಸಿ) ಕಂಚಿ ಡಿ) ಮಧುರೈ

506. ಮೊದಲನೇ ಪಾಣಿಪತ್‌ ಕದನ ಯಾವಾಗ ನಡೆಯಿತು?

ಎ) 1592 ಬಿ) 1562

ಸಿ) 1526 ಡಿ) 1620

507. ಬಕ್ಸಾರ್ ಕದನ ಯಾವಾಗ ನಡೆಯಿತು?

ಎ) 1766 ಬಿ) 1764

ಸಿ) 1757 ಡಿ) 1799

508. ಚಂಪಾರಣ್ಯ ಸತ್ಯಾಗ್ರಹ ನಡೆದ ವರ್ಷ

ಎ) 1915 ಬಿ) 1917

ಸಿ) 1918 ಡಿ) 1920

509. ಇರುಳು ಕುರುಡು ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ?

ಎ) ಜೀವಸತ್ವ-ಎ ಬಿ) ಜೀವಸತ್ವ-ಬಿ

ಸಿ) ಜೀವಸತ್ವ-ಡಿ ಡಿ) ಜೀವಸತ್ವ-ಇ

510. ರಕ್ತವನ್ನು 4 ಗುಂಪುಗಳಾಗಿ ವಿಂಗಡಿಸಿದವರು ಯಾರು?

ಎ) ಮೆಂಡಲ್

ಬಿ) ಕಾರ್ಲ್ ಲಾಂಡ್‍ಸ್ಪೈನರ್

ಸಿ) ಮೇಡಂ ಕ್ಯೂರಿ

ಡಿ) ಹರ್ಬರ್ಟ್‌ ಸ್ಪೆನ್ಸರ್‌

511. ರ‍್ಯಾಡ್ ಕ್ಲಿಫ್ ರೇಖೆಯು ಯಾವ ದೇಶದೊಂದಿಗೆ ಭಾರತದ ಗಡಿಯನ್ನು ನಿರ್ಧರಿಸುತ್ತದೆ?

ಎ) ಚೀನಾ ಬಿ) ನೇಪಾಳ

ಸಿ) ಪಾಕಿಸ್ತಾನ ಡಿ) ಅಫ್ಗಾನಿಸ್ತಾನ

512. ‘ಅಂತರರಾಷ್ಟ್ರೀಯ ಸೌರ ಮೈತ್ರಿ’ ವಿಚಾರವನ್ನು ಪ್ರಸ್ತಾಪಿಸಿದ ದೇಶ ಯಾವುದು?

ಎ) ಭಾರತ ಬಿ) ಮಾಲ್ಡೀವ್ಸ್

ಸಿ) ಜಪಾನ್ ಡಿ) ಆಸ್ಟ್ರೇಲಿಯಾ

513. ಭಾರತದ ಸಂವಿಧಾನದಡಿಯಲ್ಲಿ ಶೇಷಾಧಿಕಾರಗಳು ಯಾವ ಪಟ್ಟಿಯಲ್ಲಿವೆ?

ಎ) ಕೇಂದ್ರಪಟ್ಟಿ

ಬಿ) ರಾಜ್ಯಪಟ್ಟಿ

ಸಿ) ಸಮವರ್ತಿಪಟ್ಟಿ

ಡಿ) ಮೇಲಿನ ಯಾವುದೂ ಅಲ್ಲ

514. ಕೆಳಗಿನವರಲ್ಲಿ ಯಾರು ಹಿಂದೂಸ್ತಾನ ಸೋಶಿಯಲಿಸ್ಟ್ ರಿಪಬ್ಲಿಕ್ ಯೂನಿಯನ್ ಸದಸ್ಯರಾಗಿದ್ದರು?

ಎ) ಭಗತ್ ಸಿಂಗ್ ಬಿ) ಬಿಪಿನ್ ಚಂದ್ರಪಾಲ್

ಸಿ) ಸೂರ‍್ಯಸೇನ್

ಡಿ) ಮೇಲಿನ ಯಾರೂ ಅಲ್ಲ

515. ಮಹಾತ್ಮಗಾಂಧಿಯವರ ಪುಣ್ಯತಿಥಿಯನ್ನು ಏನೆಂದು ಆಚರಿಸಲಾಗುತ್ತದೆ?

ಎ) ಹುತಾತ್ಮರ ದಿನ

ಬಿ) ವಿಶ್ವಶಾಂತಿ ದಿನ

ಸಿ) ಕೋಮು ಸೌಹಾರ್ದ ದಿನ

ಡಿ) ಮೇಲಿನ ಯಾವುದೂ ಅಲ್ಲ

ಭಾಗ – 37ರ ಉತ್ತರ: 491. ಎ, 492. ಎ, 493. ಡಿ, 494. ಎ, 495. ಬಿ, 496. ಎ, 497. ಡಿ, 498. ಬಿ, 499. ಬಿ, 500. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.