ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST
   

ಭಾಗ– 50

676) ಕೆಳಗಿನ ಯಾವ ನದಿ ಪಶ್ಚಿಮಾಭಿಮುಖವಾಗಿ ಹರಿಯುವುದಿಲ್ಲ?
ಎ) ನೇತ್ರಾವತಿ
ಬಿ) ತಪತಿ
ಸಿ) ಅಘನಾಶಿನಿ
ಡಿ) ದಾಮೋದರ

677) ಹೊಂದಿಸಿ ಬರೆಯಿರಿ:ಗ್ರಹ ಹಾಗೂ ಬಣ್ಣ
ಅ. ಬುಧ 1. ಕೆಂಪು
ಆ. ಶುಕ್ರ 2. ಕಂದು
ಇ. ಭೂಮಿ 3. ಹಳದಿ
ಈ. ಮಂಗಳ 4. ನೀಲಿ

ADVERTISEMENT

ಅ ಆ ಇ ಈ
ಎ) 2 3 4 1
ಬಿ) 2 3 1 4
ಸಿ) 1 2 3 4
ಡಿ) 2 1 3 4

678) SIAL ಮತ್ತು SIMA ಪದಗಳು ಯಾವುದಕ್ಕೆ ಸಂಬಂಧಿಸಿವೆ?
ಎ) ಶಿಲಾಗೋಳ
ಬಿ) ಮಿಶ್ರಗೋಳ
ಸಿ) ಕೇಂದ್ರಗೋಳ
ಡಿ) ವಾಯುಗೋಳ

679) ಗ್ಯಾಬ್ರೊ, ಬಾಸಾಲ್ಟ್ ಶಿಲೆಗಳು ಯಾವುದಕ್ಕೆ ಉದಾಹರಣೆ?
ಎ) ಅಗ್ನಿಶಿಲೆ
ಬಿ) ಪದರು ಶಿಲೆ
ಸಿ) ರೂಪಾಂತರ ಶಿಲೆ
ಡಿ) ಮರಳು ಶಿಲೆ

680) ಸಾಗರದ ಆಳವನ್ನು ಯಾವ ಉಪಕರಣದಿಂದ ಅಳೆಯುತ್ತಾರೆ?
ಎ) ಪ್ಯಾಥೋ ಮೀಟರ್‌
ಬಿ) ಪೆರಿ ಮೀಟರ್‌
ಸಿ) ಹೈಡ್ರೋ ಮೀಟರ್‌
ಡಿ) ಹೈಗ್ರೊ ಮೀಟರ್‌

681) ಭಾರತ ಸರ್ಕಾರದ ಅತ್ಯುಚ್ಛ ಕಾನೂನು ಅಧಿಕಾರಿ ಯಾರು?
ಎ) ಭಾರತ ಸರ್ಕಾರದ ಕಾನೂನು ಸಚಿವರು
ಬಿ) ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
ಸಿ) ಭಾರತದ ಸಾಲಿಸಿಟರ್‌ ಜನರಲ್‌
ಡಿ) ಭಾರತದ ಅಟಾರ್ನಿ ಜನರಲ್‌

682) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1. ಭಾರತದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಚುನಾವಣಾ ಆಯೋಗದ ಕಾಯ್ದೆ ಅನ್ವಯ ಸ್ಥಾಪಿಸಲಾಗಿದೆ.
2. ಸಮುದಾಯದ ಕೆಲಸಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಬಲವಂತರಾಯ್‌ ಸಮಿತಿಯ ಪ್ರಮುಖ ಕಾಳಜಿಯಾಗಿತ್ತು.
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1 ಮತ್ತು 2 ಸರಿ
ಡಿ) 1 ಮತ್ತು 2 ತಪ್ಪು

683) ಭಾರತದ ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನಗಳ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ) ಬ್ರಿಟಿಷ್‌ ಸಂವಿಧಾನ
ಬಿ) ರಷ್ಯಾ ಸಂವಿಧಾನ
ಸಿ) ಐರಿಷ್‌ ಸಂವಿಧಾನ
ಡಿ) ಅಮೆರಿಕ ಸಂವಿಧಾನ

684) ರಾಜ್ಯವೊಂದರಲ್ಲಿ ವಿಧಾನ ಪರಿಷತ್ತನ್ನು ಸೃಷ್ಟಿಸುವ ಅಥವಾ ವಿಸರ್ಜಿಸುವ ಕೆಲಸವನ್ನು ಯಾರು ಮಾಡಬಹುದು?
ಎ) ರಾಜ್ಯ ವಿಧಾನ ಸಭೆಯ ಶಿಫಾರಸಿನ ಮೇರೆಗೆ ಸಂಸತ್ತು ಮಾಡಬಹುದು
ಬಿ) ಸಂಸತ್ತು ಮಾತ್ರ ಮಾಡಬಹುದು
ಸಿ) ರಾಜ್ಯ ವಿಧಾನಸಭೆ ಮಾತ್ರ ಮಾಡಬಹುದು
ಡಿ) ರಾಜ್ಯದ ರಾಜ್ಯಪಾಲರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಮಾಡಬಹುದು

685) ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನು ಬಾಹಿರವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್‌
ಎ) ಹೇಬಿಯಸ್‌ ಕಾರ್ಪಸ್‌
ಬಿ) ಮ್ಯಾಂಡ ಮಸ್‌
ಸಿ) ಕೂ ವಾರಂಟೊ
ಡಿ) ಸರ್ಟಿಯೋರರಿ

686) ಭಾರತ ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸೇರಿಸಿದ ತಿದ್ದುಪಡಿ ಶಾಸನ
ಎ) 41ನೇ ತಿದ್ದುಪಡಿ ಶಾಸನ
ಬಿ) 42ನೇ ತಿದ್ದುಪಡಿ ಶಾಸನ
ಸಿ) 43ನೇ ತಿದ್ದುಪಡಿ ಶಾಸನ
ಡಿ) 44ನೇ ತಿದ್ದುಪಡಿ ಶಾಸನ

687) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಹಣಕಾಸಿನ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಾಗಲಿ ಮಂಡಿಸಬಹುದು.
2. ಹಣಕಾಸಿನ ಮಸೂದೆಯ ಮಂಡನೆಯ ಮುನ್ನ ಲೋಕಸಭಾಪತಿಯವರ ಒಪ್ಪಿಗೆ ಪಡೆಯುವ ಅಗತ್ಯವಿದೆ.

-ಸರಿಯಾದ ಹೇಳಿಕೆ ಆಯ್ಕೆಮಾಡಿ
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1 ಮತ್ತು 2 ಸರಿ
ಡಿ) 1 ಮತ್ತು 2 ತಪ್ಪು

688) ‘Psephology’ ಎಂಬ ಪದ ಯಾವುದಕ್ಕೆ ಸಂಬಂಧಿಸಿದೆ?
ಎ) ಚುನಾವಣೆಗಳು
ಬಿ) ಒತ್ತಡ ಗುಂಪುಗಳು
ಸಿ) ರಾಜಕೀಯ ಪಕ್ಷಗಳು
ಡಿ) ಸಾರ್ವಜನಿಕ ಅಭಿಪ್ರಾಯ

689) ಭಾರತೀಯ ಸಂವಿಧಾನದ ಅನ್ವಯ ಉಚ್ಛ ನ್ಯಾಯಾಲಯಗಳಿಗೆ ಕೆಲವೊಂದು ರಿಟ್‌ಗಳನ್ನು ಹೊರಡಿಸಲು ಅವಕಾಶ ಮಾಡಿಕೊಡುವ ಅನುಚ್ಛೇದ ಯಾವುದು?
ಎ) ಅನುಚ್ಛೇದ 225
ಬಿ) ಅನುಚ್ಛೇದ 226
ಸಿ) ಅನುಚ್ಛೇದ 227
ಡಿ) ಅನುಚ್ಛೇದ 228

690) ಕೆಳಕಂಡ ಯಾವ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ ಆದರೆ ನ್ಯಾಯಾಲಯಗಳ ಅನೇಕ ತೀರ್ಪುಗಳಲ್ಲಿ ಇದನ್ನು ಹಾಗೆಂದು ಎತ್ತಿ ಹಿಡಿಯಲಾಗಿದೆ.
ಎ) ಕಾನೂನಿನ ಮುಂದೆ ಸಮಾನತೆ
ಬಿ) ಸಾರ್ವಜನಿಕ ಉದ್ಯೋಗದಲ್ಲಿ ತಾರತಮ್ಯ ಮಾಡದಿರುವ ಹಕ್ಕು
ಸಿ) ಪತ್ರಿಕಾ ಸ್ವಾತಂತ್ರ್ಯದ ಹಕ್ಕು
ಡಿ) ಸಂಘ ಅಥವಾ ಒಕ್ಕೂಟಗಳನ್ನು ರಚಿಸುವ ಹಕ್ಕು

ಭಾಗ 49ರ ಉತ್ತರಗಳು: 661. ಎ, 662. ಬಿ, 663. ಎ, 664. ಎ, 665. ಸಿ, 666. ಡಿ, 667. ಸಿ, 668. ಎ, 669. ಬಿ, 670. ಡಿ, 671. ಎ, 672. ಡಿ, 673. ಸಿ, 674. ಬಿ, 675. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.