ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು 

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ– 31

411. ಈ ಕೆಳಗಿನ ಯಾವ ಬಂದರು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತದೆ?

ಎ) ಭಟ್ಕಳ ಬಂದರು

ADVERTISEMENT

ಬಿ) ಮಲ್ಪೆ ಬಂದರು

ಸಿ) ನವಮಂಗಳೂರು ಬಂದರು

ಡಿ) ಬೇಲಿಕೇರಿ ಬಂದರು

412. ‘ಕಪಿಲಾ’ ನದಿಯ ಇನ್ನೊಂದು ಹೆಸರು?

ಎ) ಕಬಿನಿ ಬಿ) ಹಾರಂಗಿ

ಸಿ) ಕಾವೇರಿ ಡಿ) ಹೇಮಾವತಿ

413. ಭೀಮಾ ನದಿಯ ಉಗಮ ಸ್ಥಾನ ಯಾವುದು?

ಎ) ನಂದಿ ದುರ್ಗ ಬಿ) ಅಂಬು ತೀರ್ಥ

ಸಿ) ಭೀಮಾ ಶಂಕರ ಡಿ) ಜಾಂಬೋಟಿ

414. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಎ) ಕನಕದಾಸ

ಬಿ) ವಿಜಯದಾಸ

ಸಿ) ಪುರಂದರದಾಸ

ಡಿ) ವಿಠಲದಾಸ

415. ಖೋಟಾ ದಾಖಲಾತಿಗಳನ್ನು ಪತ್ತೆಮಾಡಲು ಬಳಸುವ ಕಿರಣ

ಎ) ಬೀಟಾ ಕಿರಣಗಳು

ಬಿ) ಇನ್‌ಫ್ರಾ-ರೆಡ್ ಕಿರಣಗಳು

ಸಿ) ನೇರಳಾತೀತ ಕಿರಣಗಳು

ಡಿ) ಗಾಮಾ ಕಿರಣಗಳು

416. ವಿಶ್ವದ ಅತೀ ದೊಡ್ಡ ಸಾಗರ ಯಾವುದು?

ಎ) ಪೆಸಿಫಿಕ್ ಸರೋವರ

ಬಿ) ಇಂಡಿಯನ್ ಸರೋವರ

ಸಿ) ಅಟ್ಲಾಂಟಿಕ್ ಸರೋವರ

ಡಿ) ಆರ್ಕ್ಟಿಕ್ ಸರೋವರ

417. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ?

ಎ) ಅಂತರ

ಬಿ) ತಾಪಮಾನ

ಸಿ) ವಾತಾವರಣದ ಒತ್ತಡ

ಡಿ) ವಾಯು ಮಾಲಿನ್ಯಕಾರಕಗಳು

418. INTERPOL ಕೇಂದ್ರ ಸ್ಥಾನ ಯಾವುದು?

ಎ) ಲಂಡನ್

ಬಿ) ನ್ಯೂಯಾರ್ಕ್

ಸಿ) ಲಿಯಾನ್

ಡಿ) ಪ್ಯಾರಿಸ್

419. 1. ಶಬ್ದ ತರಂಗಗಳು ಯಾಂತ್ರಿಕ ತರಂಗಗಳು

2. ಶಬ್ದವನ್ನು ಅಳೆಯುವ ಮಾನಕ್ಕೆ ಡೆಸಿಬಲ್ ಎಂದು ಹೆಸರು.

ಎ) 1 ಸರಿ, 2 ತಪ್ಪು

ಬಿ) 2 ಸರಿ, 1 ತಪ್ಪು

ಸಿ) 1 ಮತ್ತು 2 ಸರಿ

ಡಿ) 1 ಮತ್ತು 2 ತಪ್ಪು

420. ಚಾಲುಕ್ಯರ ಕಾಲದ ಗುಹಾದೇವಾಲಯಗಳು ಇಲ್ಲಿವೆ

ಎ) ಬೇಲೂರು

ಬಿ) ಐಹೊಳೆ

ಸಿ) ಬಾದಾಮಿ

ಡಿ) ಪಟ್ಟದಕಲ್ಲು

421) ‘ವಿಶ್ವ ಅಧಿಕ ರಕ್ತದೊತ್ತಡ ದಿನ’ ವನ್ನು ಯಾವಾಗ ಆಚರಿಸಲಾಗುತ್ತದೆ?

ಎ) 15 ಮೇ

ಬಿ) 17 ಮೇ

ಸಿ) 16 ಮೇ

ಡಿ) ಇವುಗಳಲ್ಲಿ ಯಾವುದೂ ಇಲ್ಲ

422) ಇತ್ತೀಚೆಗೆ ಡಿಸಿಜಿಐ 2-18 ವರ್ಷ ವಯಸ್ಸಿನವರಿಗೆ ಯಾವ ಕೋವಿಡ್ ಲಸಿಕೆ ಪ್ರಯೋಗಕ್ಕೆ ಅನುಮೋದನೆ ನೀಡಿದೆ?

ಎ) ಕೋವ್ಯಾಕ್ಸಿನ್

ಬಿ) ಕೋವಿಶೀಲ್ಡ್

ಸಿ) ಸ್ಪುಟ್ನಿಕ್ ವಿ

ಡಿ) ಇವುಗಳಲ್ಲಿ ಯಾವುದೂ ಇಲ್ಲ

423) ಯಾವ ವರ್ಣಚಿತ್ರಕಾರನ ಇತ್ತೀಚಿನ ವರ್ಣಚಿತ್ರವನ್ನು ನ್ಯೂಯಾರ್ಕ್‌ನಲ್ಲಿ 103.4 ದಶಲಕ್ಷ ಡಾಲರ್‌ಗೆ ಮಾರಾಟ ಮಾಡಲಾಗಿದೆ?

ಎ) ಕ್ಲೌಡ್ ಮೊನೆಟ್

ಬಿ) ಪ್ಯಾಬ್ಲೊ ಪಿಕಾಸೊ

ಸಿ) ರೆಂಬ್ರಾಂಡ್

ಡಿ) ಇವುಗಳಲ್ಲಿ ಯಾವುದೂ ಇಲ್ಲ

424) ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ಅಡ್ವಟೈಸಿಂಗ್‌ ಸ್ವಯಂ ನಿಯಂತ್ರಣದ ಉಪಾಧ್ಯಕ್ಷರಾಗಿ ನೇಮಕಗೊಂಡವರು ಯಾರು?

ಎ) ರೋಶ್ನಿ ನಾಡರ್

ಬಿ) ರಿದ್ಧಿ ಗರ್ಗ್

ಸಿ) ಮನೀಶಾ ಕಪೂರ್

ಡಿ) ಇವರಲ್ಲಿ ಯಾರೂ ಅಲ್ಲ

425) ಇತ್ತೀಚೆಗೆ ನಿಧನರಾದ ‘ಎಂ.ಎಸ್.ನರಸಿಂಹನ್’ ಏನಾಗಿ ಪ್ರಸಿದ್ಧರಾಗಿದ್ದರು?

ಎ) ಗಾಯಕ

ಬಿ) ಗಣಿತತಜ್ಞ

ಸಿ) ಪತ್ರಕರ್ತ

ಡಿ) ಇವುಗಳಲ್ಲಿ ಯಾವುದೂ ಇಲ್ಲ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.