ADVERTISEMENT

ಭಾಗ– 51: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:31 IST
Last Updated 31 ಆಗಸ್ಟ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

691) ಭಾರತವು

ಎ) ಸಂಯುಕ್ತ ರಾಜ್ಯಗಳ ಒಕ್ಕೂಟ

ಬಿ) ರಾಜ್ಯಗಳ ಒಕ್ಕೂಟ

ಸಿ) ರಾಜ್ಯಗಳ ಸಂಯುಕ್ತ ಒಕ್ಕೂಟ

ಡಿ) ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ

692) ತೆರಿಗೆ ಹಾಗೂ ಇತರೆ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಈ ಕೆಳಗಿನ ಯಾವ ನಿಧಿಗೆ ಜಮಾ ಮಾಡಲಾಗುತ್ತದೆ?

ಎ) ಭಾರತದ ಸಾದಿಲ್ವಾರ ನಿಧಿ

ಬಿ) ಭಾರತದ ಸಂಚಿತ ನಿಧಿ

ಸಿ) ಪ್ರಧಾನ ಮಂತ್ರಿ ಪರಿಹಾರ ನಿಧಿ

ಡಿ) ಸಾರ್ವಜನಿಕ ಖಾತೆ

693) ಭಾರತದಲ್ಲಿ ಚುನಾವಣೆಗಳಲ್ಲಿ ಅನುಸರಿಸುವ ಮತದಾರ ವ್ಯವಸ್ಥೆಗಳೆಂದರೆ

1. ಬಿಡಿಯಾದ ವರ್ಗಾಯಿಸಲಾದ ಮತದ ಮಾರ್ಗದ ಮೂಲಕ ಸೂಕ್ತ ಪ್ರಮಾಣಬದ್ಧ ಪ್ರಾತಿನಿಧ್ಯ

2. ಸಾರ್ವತ್ರಿಕ ವಯಸ್ಕ ಮತದಾನ ಹಕ್ಕು ಆಧಾರಿತ ನೇರ ಚುನಾವಣೆಗಳು

3. ಪ್ರಮಾಣಬದ್ಧ ಪ್ರಾತಿನಿಧ್ಯದ ಪಟ್ಟಿ ವ್ಯವಸ್ಥೆ

4. ಅಪರೋಕ್ಷ ಚುನಾವಣೆಯ ಒಟ್ಟಾರೆ ವ್ಯವಸ್ಥೆ

ಎ) 1 ಮತ್ತು 2

ಬಿ) 2 ಮತ್ತು 3

ಸಿ) 1 ಮತ್ತು 3

ಡಿ) 1, 2, 3 ಮತ್ತು 4

694) ಅನುಚ್ಛೇದ 14ರಲ್ಲಿ ಹೇಳಿರುವ ‘ಯಾವುದೇ ವ್ಯಕ್ತಿಗೆ ಸಮಾನತೆ ಹಾಗೂ ಸಮಾನ ಕಾನೂನು ರಕ್ಷಣೆಗೆ ರಾಜ್ಯ ಬದ್ಧವಾಗಿದೆ’ ಎಂಬಲ್ಲಿ ಯಾವುದೇ ವ್ಯಕ್ತಿ ಎಂದರೆ

ಎ) ಭಾರತದಲ್ಲಿ ನೆಲೆಸಿರುವ ನಾಗರಿಕರು ಹಾಗೂ ಅನಿವಾಸಿ ನಾಗರಿಕರು

ಬಿ) ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯರು

ಸಿ) ನೈಸರ್ಗಿಕ ವ್ಯಕ್ತಿಗಳು, ಅಸ್ವಾಭಾವಿಕ ವ್ಯಕ್ತಿಗಳಲ್ಲ

ಡಿ) ನೈಸರ್ಗಿಕ ವ್ಯಕ್ತಿಗಳು ಮಾತ್ರ

695) ಈ ಕೆಳಗಿನವುಗಳಲ್ಲಿ ಯಾವ ಲಕ್ಷಣಗಳನ್ನು ಭಾರತೀಯ ಸಂಯುಕ್ತ ತತ್ವದಲ್ಲಿ ತಪ್ಪಾಗಿ ಪಟ್ಟಿ ಮಾಡಲಾಗಿದೆ?

ಎ) ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರಗಳನ್ನು ವಿಭಾಗಿಸುತ್ತದೆ

ಬಿ) ಇದು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಒದಗಿಸುವುದು

ಸಿ) ಇದು ಲಿಖಿತ ಸಂವಿಧಾನ ಹೊಂದಿದೆ

ಡಿ) ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುತ್ತದೆ

696) ‘ಗರೀಬಿ ಹಟಾವೊ’ ಕಾರ್ಯಕ್ರವನ್ನು ಪ್ರಾರಂಭಿಸಿದ ಯೋಜನೆ

ಎ) ಮೂರನೆಯ ಪಂಚವಾರ್ಷಿಕ ಯೋಜನೆ

ಬಿ) ನಾಲ್ಕನೆಯ ಪಂಚವಾರ್ಷಿಕ ಯೋಜನೆ

ಸಿ) ಐದನೆಯ ಪಂಚವಾರ್ಷಿಕ ಯೋಜನೆ

ಡಿ) ಆರನೆಯ ಪಂಚವಾರ್ಷಿಕ ಯೋಜನೆ

697) ಕೆಳಗಿನವುಗಳಲ್ಲಿ ಯಾವುವು ‘ಸ್ಟಾಗ್‌ಫ್ಲೇಷನ್‌’ ಆರ್ಥಿಕತೆಯ ಲಕ್ಷಣಗಳಲ್ಲ

1.ಉದ್ಯೋಗವಕಾಶಗಳ ಅಭಿವೃದ್ಧಿ

2.ಉತ್ಪಾದನೆಯಲ್ಲಿ ಹೆಚ್ಚಳ

3. ಕೈಗಾರಿಕಾ ಹೂಡಿಕೆಯಲ್ಲಿ ಹೆಚ್ಚಳವಿಲ್ಲ

4. ಬೆಲೆಗಳಲ್ಲಿ ಹೆಚ್ಚಳ

ಎ) 1 ಮತ್ತು 2

ಬಿ) 2 ಮತ್ತು 3

ಸಿ) 3 ಮತ್ತು 4

ಡಿ) 1 ಮತ್ತು 4

698) ಭಾರತವು ಒಂದು ಸಮ್ಮಿಶ್ರ ಅರ್ಥವ್ಯವಸ್ಥೆಯನ್ನು ಹೊಂದಿದೆ, ಏಕೆಂದರೆ

ಎ) ಕಳೆದ ಸುಮಾರು ನಾಲ್ಕು ದಶಕಗಳಲ್ಲಿ ಕೃಷಿ ಮತ್ತು ಕೈಗಾರಿಕೆಗಳೆರಡೂ ಅಭಿವೃದ್ಧಿಯಾಗಿವೆ

ಬಿ) ಇಲ್ಲಿ ಉತ್ಪಾದನೆಗೆ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದ ತಂತ್ರಜ್ಞಾನಗಳೆರಡೂ ಬಳಕೆಯಲ್ಲಿವೆ

ಸಿ) ಉತ್ಪಾದನಾ ವಿಧಾನದ ಮೇಲೆ ಸಾರ್ವಜನಿಕ ಒಡೆತನದ ಜೊತೆಗೆ ಖಾಸಗಿ ಒಡೆತನವೂ ಕೂಡ ಅಸ್ತಿತ್ವದಲ್ಲಿದೆ

ಡಿ) ಮೇಲಿನ ಎಲ್ಲವೂ

699) ‘ಆಹಾರ ಭದ್ರತೆ’ ಎಂಬ ಪದವು ಯಾವ ಅರ್ಥವನ್ನು ಧ್ವನಿಸುತ್ತದೆ?

ಎ) ಸಾಕಷ್ಟು ಪ್ರಮಾಣದ ಆಹಾರ ಸಾಮಗ್ರಿಗಳ ಒದಗಿಸುವಿಕೆಯನ್ನು ಖಚಿತಪಡಿಸುವುದು

ಬಿ) ಬಡವರು ಕೊಳ್ಳಬಹುದಾದ ಬೆಲೆಗಳಲ್ಲಿ ಆಹಾರ ಪದಾರ್ಥಗಳು ಸರಬರಾಜು ಆಗುವುದನ್ನು ಖಚಿತ ಪಡಿಸುವುದು

ಸಿ) ಉತ್ತಮ ಹಾಗೂ ಪೌಷ್ಟಿಕ ಗುಣಮಟ್ಟದ ಆಹಾರ ಪದಾರ್ಥಗಳು ಸರಬರಾಜಾಗುವುದನ್ನು ಖಚಿತ ಪಡಿಸುವುದು

ಡಿ) (ಎ) ಮತ್ತು (ಬಿ)

700) ಭಾರತದಲ್ಲಿ ವ್ಯಾಪಾರ, ಕೈಗಾರಿಕೆ, ಆರ್ಥಿಕ ಮತ್ತು ಹಣಕಾಸು ವಲಯಗಳಲ್ಲಿ ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ವರ್ಷ

ಎ) 1991

ಬಿ) 1996

ಸಿ) 1998

ಡಿ) 2001

701) ಸಬ್ಸಿಡಿಯು

ಎ) ಬಂಡವಾಳ ವೆಚ್ಚದ ಒಂದು ಭಾಗ

ಬಿ) ಕಂದಾಯ ವೆಚ್ಚದ ಒಂದು ಭಾಗ

ಸಿ) ದೀರ್ಘಾವಧಿ ವೆಚ್ಚದ ಒಂದು ಭಾಗ

ಡಿ) ಅಭಿವೃದ್ಧಿಯ ವೆಚ್ಚದ ಒಂದು ಭಾಗ

702) ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಕುರಿತು ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿರುವುದಿಲ್ಲ?

ಎ) ತಯಾರಿಕಾ ಚಟುವಟಿಕೆಗಳಲ್ಲಿ ಮಾಡಲಾದ ವಿದೇಶಿ ಹೂಡಿಕೆ

ಬಿ) ಕಂಪನಿಗಳ ಶೇರುಗಳಲ್ಲಿ ಮಾಡಲಾದ ವಿದೇಶಿ ಹೂಡಿಕೆ

ಸಿ) ಬ್ಯಾಂಕುಗಳು ಮತ್ತು ಸಮಾಲೋಚನೆ ಉದ್ದಿಮೆಗಳಲ್ಲಿ ಮಾಡಲಾದ ವಿದೇಶಿ ಹೂಡಿಕೆ

ಡಿ) ವಿದೇಶಿ ಕಂಪನಿಗಳ ಮರು-ಹೂಡಿಕೆಯ ಗಳಿಕೆಗಳು

703) ಭಾರತದಲ್ಲಿ ಪ್ರಚಲಿತವಿಲ್ಲದ ಬೆಲೆಸೂಚಿ ಸಂಖ್ಯೆ ಯಾವುದು?

ಎ) ಕೃಷಿ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚಿ ಸಂಖ್ಯೆಗಳು

ಬಿ) ನಗರ ಪ್ರದೇಶದ ಶ್ರಮಜೀವಿಗಳಲ್ಲದ ಉದ್ಯೋಗಿಗಳಿಗೆ ಗ್ರಾಹಕ ಬೆಲೆ ಸೂಚಿ ಸಂಖ್ಯೆಗಳು

ಸಿ) ಕೈಗಾರಿಕಾ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚಿ ಸಂಖ್ಯೆಗಳು

ಡಿ) ಗ್ರಾಮೀಣ ಕೃಷಿಯೇತರ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚಿ ಸಂಖ್ಯೆಗಳು

704) ಭಾರತದ ವಿದೇಶಿ ವಿನಿಮಯ ಮೀಸಲುಗಳಲ್ಲಿ ಇದು ಬಳಸಲ್ಪಡುವುದಿಲ್ಲ.

ಎ) ವಿದೇಶಿ ಕರೆನ್ಸಿಗಳು

ಬಿ) ಚಿನ್ನ

ಸಿ) ಬೆಳ್ಳಿ

ಡಿ) ವಿಶೇಷ ಡ್ರಾಯಿಂಗ್‌ ಹಕ್ಕುಗಳು

705) ಈ ಕೆಳಗಿನ ಯಾವ ಕಾರ್ಯಕ್ರಮದಡಿ ಹಸಿರು ಕ್ರಾಂತಿಯನ್ನು ಸಾಧಿಸಲಾಯಿತು?

ಎ) ತೀವ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ

ಬಿ) ತೀವ್ರ ಭೂ ಬಳಕೆ ಕಾರ್ಯಕ್ರಮ

ಸಿ) ತೀವ್ರ ನೀರಾವರಿ ಕಾರ್ಯಕ್ರಮ

ಡಿ) ಅಧಿಕ ಇಳುವರಿಯ ವಿವಿಧ ಬೀಜಗಳ ಕಾರ್ಯಕ್ರಮ

ಭಾಗ 50ರ ಉತ್ತರಗಳು: 676. ಡಿ, 677. ಎ, 678. ಎ, 679. ಎ, 680. ಎ, 681. ಡಿ, 682. ಬಿ, 683. ಎ, 684. ಎ, 685. ಸಿ, 686. ಬಿ, 687. ಡಿ, 688. ಎ, 689. ಬಿ, 690. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.