ADVERTISEMENT

ಪಿಯುಸಿ ಕಾಮರ್ಸ್‌ ನಂತರ ಏನು ಓದಬಹುದು?

ಸಿದ್ಧಾಂತ್‌ ಎಂ.ಜೆ.
Published 1 ಆಗಸ್ಟ್ 2021, 19:30 IST
Last Updated 1 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದ್ವಿತೀಯಪಿಯುಸಿಅದರಲ್ಲೂ ವಾಣಿಜ್ಯ (ಕಾಮರ್ಸ್‌) ತೆಗೆದುಕೊಂಡು ಉತ್ತೀರ್ಣರಾದವರಿಗೆ ಮುಂದೆ ವಿವಿಧ ವಿಷಯಗಳನ್ನು ತೆಗೆದುಕೊಂಡು ಪದವಿ ಓದಲು, ಉನ್ನತ ಅಧ್ಯಯನ ಮಾಡಲು ಸಾಕಷ್ಟು ಅವಕಾಶಗಳಿವೆ. ಸಾಂಪ್ರದಾಯಿಕ ಮೂರು ವರ್ಷಗಳ ಬಿ.ಕಾಂ. ಪದವಿ ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗೆಯೇ ವಾಣಿಜ್ಯ ಬಿಟ್ಟು ಕಲಾ ಪದವಿಯನ್ನೂ ಪಡೆಯಬಹುದು, ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನೂ ಮಾಡಬಹುದು.

ಈಗಪಿಯುಸಿನಂತರ ವಾಣಿಜ್ಯ ಪದವಿ ಬಿಟ್ಟು ಬೇರೆ ಬೇರೆ ಕೋರ್ಸ್‌ಗಳತ್ತ ಗಮನ ಹರಿಸೋಣ.

ಬ್ಯುಸೆನೆಸ್‌ ಅರ್ಥಶಾಸ್ತ್ರದಲ್ಲಿ ಬಿಎ ಪದವಿಯನ್ನು ಓದಬಹುದು. ಇದು ನೇರವಾಗಿಕಾಮರ್ಸ್‌ಗೆ ಸಂಬಂಧಪಟ್ಟಿಲ್ಲ. ಆದರೆ ಬ್ಯುಸಿನೆಸ್‌ ಮತ್ತು ಹಣಕಾಸು ನಿರ್ವಹಣೆಯಲ್ಲಿ ಹೆಚ್ಚು ಅವಕಾಶಗಳಿವೆ.

ADVERTISEMENT

ಅದೇ ರೀತಿ ಪಿಯುಸಿಯಲ್ಲಿ ಗಣಿತ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಓದಿ ಉತ್ತೀರ್ಣರಾದರೆ ಅರ್ಥಶಾಸ್ತ್ರದಲ್ಲಿ ಬಿಎ ಮಾಡಬಹುದು. ನಂತರ ಅದರಲ್ಲೇ ಎಂಎ, ಎಂಬಿಎ ಮಾಡಬಹುದು.

ಬಿಬಿಎ: ಮುಂದೆ ಬ್ಯುಸಿನೆಸ್‌ ಮತ್ತು ಮ್ಯಾನೇಜ್‌ಮೆಂಟ್‌ ಓದಲು ನಿರ್ಧಾರ ಮಾಡಿದವರು ಬಿಬಿಎ ಓದಬಹುದು. ಇದರಿಂದ ಎಂಬಿಎಗೆ ಒಳ್ಳೇ ನೆಲಗಟ್ಟು ಸಿಕ್ಕಂತಾಗುತ್ತದೆ.

ಬಿಸಿಎ: ಈ ಕೋರ್ಸ್‌ಗೆ ಪ್ರವೇಶ ಪರೀಕ್ಷೆಯನ್ನು ಕೆಲವು ಕಾಲೇಜುಗಳು ನಡೆಸುತ್ತಿವೆ. ಈ ಪದವಿ ಮಾಡುವುದರಿಂದ ಐಟಿ ಉದ್ಯಮದಲ್ಲಿ ಉದ್ಯೋಗ ಗಿಟ್ಟಿಸಬಹುದು. ಹಾಗೆಯೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ಸಲ್ಟೆಂಟ್‌ ಆಗಿ ಸ್ವಂತ ಉದ್ಯಮ ಆರಂಭಿಸಬಹುದು. ಎಂಸಿಎ ಮಾಡಿದರಂತೂ ಭವಿಷ್ಯದಲ್ಲಿ ಉತ್ತಮವಾದ ವೃತ್ತಿಗೆ ಸೇರಬಹುದು.

ಬಿಎಎಫ್‌: ಪಿಯುಸಿಯಲ್ಲಿ ಅಕೌಂಟನ್ಸಿ ಮತ್ತು ಫೈನಾನ್ಸ್‌ ಓದಿದವರು ಈ ಕೋರ್ಸ್‌ ಮಾಡಿದರೆ ತೆರಿಗೆ, ಲೆಕ್ಕಪತ್ರ ಶೋಧನೆ, ಬ್ಯುಸಿನೆಸ್‌ ಲಾ, ಕಾಸ್ಟ್‌ ಅಕೌಂಟಿಂಗ್‌ ಮೊದಲಾದ ವಿಷಯಗಳಲ್ಲಿ ಪರಿಣತಿ ಸಾಧಿಸಿ ಹಣಕಾಸು ಮತ್ತು ಲೆಕ್ಕಪತ್ರ ಶೋಧನೆ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಬಹುದು.

ಬಿಬಿಐ: ಬ್ಯಾಂಕಿಂಗ್‌ ಮತ್ತು ವಿಮೆಯಲ್ಲಿ ಈ ಪದವಿ ಪಡೆದು ಹಣಕಾಸಿನಲ್ಲಿ ಎಂಬಿಎ ಮಾಡಿದರೆ ಒಳ್ಳೆಯ ವೃತ್ತಿ ಅವಕಾಶಗಳಿವೆ.

ಐಸಿಡಬ್ಲುಎಐ: ಈ ಸಂಸ್ಥೆಯು ವಿವಿಧ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳಿಗೆ ಪ್ರವೇಶ ನೀಡುತ್ತದೆ. ಇಲ್ಲಿ ಓದಿ ಸರ್ಟಿಫಿಕೇಟ್‌ ಪಡೆದವರು ಅಕೌಂಟಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ ಉತ್ತಮ ಅವಕಾಶ ಪಡೆಯಬಹುದು.

ಸಿಎಸ್‌: ಕಂಪನಿ ಸೆಕ್ರೇಟರಿ ಫೌಂಡೇಶನ್‌ ಪ್ರೋಗ್ರಾಮ್‌ಗೆ ಸೇರಿಕೊಂಡರೆ ಬಿಕಾಂ ಓದುತ್ತಲೆ ಮುಂದೆ ವಿವಿಧ ಪರೀಕ್ಷೆಗಳನ್ನು ಎದುರಿಸಿ ಸಿಎಸ್‌ ಪದವಿ ಪಡೆಬಹುದು. ನಂತರ ಕಾರ್ಪೊರೇಟ್‌ ಉದ್ಯೋಗ ಪಡೆದು ಒಳ್ಳೆಯ ವೇತನ ತೆಗೆದುಕೊಳ್ಳಬಹುದು.

ಈ ಕೋರ್ಸ್‌ಗಳಲ್ಲದೇ ಸಾಕಷ್ಟು ಡಿಪ್ಲೊಮಾ ಕೋರ್ಸ್‌ಗಳಿದ್ದುಪಿಯುಸಿನಂತರ ಅದಕ್ಕೂ ಸೇರಿಕೊಳ್ಳಬಹುದು. ಮೇಲೆ ಹೇಳಿದ ಕೆಲವು ಪದವಿ ಕೋರ್ಸ್‌ಗಳು ದೆಹಲಿ, ಮುಂಬೈ, ಚೆನ್ನೈನಂತಹ ನಗರಗಳಲ್ಲಿ ಒಳ್ಳೆಯ ಕಾಲೇಜುಗಳಲ್ಲಿ ಲಭ್ಯ. ನ್ಯಾಕ್‌, ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ಮುಂದೆ ಹೆಚ್ಚಿನ ಓದಿಗೆ, ಉದ್ಯೋಗಕ್ಕೆ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.