ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 20:15 IST
Last Updated 25 ಆಗಸ್ಟ್ 2021, 20:15 IST
   

ಪೊಲೀಸ್‌ಕಾನ್‌ಸ್ಟೇಬಲ್ನೇಮಕಾತಿಪರೀಕ್ಷೆಯಮಾದರಿಪ್ರಶ್ನೆಗಳು

ಭಾಗ– 48

646. ಬಂಗಾಳಕೊಲ್ಲಿ ಎಲ್ಲಿದೆ?

ಎ) ಭಾರತದ ವಾಯುವ್ಯದಲ್ಲಿ

ADVERTISEMENT

ಬಿ) ಭಾರತದ ಆಗ್ನೇಯದಲ್ಲಿ

ಸಿ) ಭಾರತದ ಈಶಾನ್ಯದಲ್ಲಿ

ಡಿ) ಭಾರತದ ನೈರುತ್ಯದಲ್ಲಿ

647. ಮನುಷ್ಯನ ಪ್ರತಿ ಜೀವಕೋಶದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?

ಎ) 43ಬಿ) 23

ಸಿ) 46ಡಿ) 33

648. ಕೈಬರಹದ ಕುರಿತ ಅಭ್ಯಾಸವನ್ನು ಏನೆಂದು ಕರೆಯುತ್ತಾರೆ?

ಎ) ಅನಾಟಮಿ

ಬಿ) ಅಗ್ರೋನಾಮಿ

ಸಿ) ಕ್ಯಾಲಿಗ್ರಫಿ

ಡಿ) ಎಥಾಲಾಜಿ

649. ವಾತಾವರಣದ ಒತ್ತಡವನ್ನು ಯಾವುದರಿಂದ ಅಳೆಯುತ್ತಾರೆ?

ಎ) ಹೈಡ್ರೋಮೀಟರ್

ಬಿ) ಅಲ್ಟಿಮೀಟರ್

ಸಿ) ಹೈಗ್ರೋಮೀಟರ್

ಡಿ) ಬ್ಯಾರೋಮೀಟರ್

650. ‘ಖಡಕ್‌ನಾಥ’ ಇದು ಯಾವುದರ ತಳಿ?

ಎ) ಆಕಳುಬಿ) ಎಮ್ಮೆ

ಸಿ) ಎತ್ತುಡಿ) ಕೋಳಿ

651. ಕೆಳಗಿನವುಗಳಲ್ಲಿ ಯಾವ ಕೃತಿಯನ್ನು ಕೃಷ್ಣದೇವರಾಯ ಬರೆದಿದ್ದಾನೆ?

ಎ) ಅಮುಕ್ತಮಾಲ್ಯದ

ಬಿ) ಜಾಂಬವತಿ ಕಲ್ಯಾಣ

ಸಿ) ಮಥುರಾವಿಜಯಂ

ಡಿ) (ಎ) ಮತ್ತು (ಬಿ) ಎರಡೂ

652. ‘ಹರಿಕಥಾಪ್ರಸಂಗ’ ಕನ್ನಡ ಚಲನಚಿತ್ರದ ನಿರ್ದೇಶಕರು ಯಾರು?

ಎ) ಗಿರೀಶ್‌ ಕಾಸರವಳ್ಳಿ

ಬಿ) ಅನನ್ಯಾ ಕಾಸರವಳ್ಳಿ

ಸಿ) ಬಿ.ಸುರೇಶ್

ಡಿ) ನಾಗತಿಹಳ್ಳಿ ಚಂದ್ರಶೇಖರ

653. ರಾಷ್ಟ್ರೀಯ ಯುವ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಎ) ಜನವರಿ 10

ಬಿ) ಜನವರಿ 11

ಸಿ) ಜನವರಿ 12

ಡಿ) ಜನವರಿ 13

654. ರೀನಾಳ ವಯಸ್ಸು ಸುನೀತಾಳ ವಯಸ್ಸಿಗಿಂತ ಎರಡು ಪಟ್ಟು ಜಾಸ್ತಿ ಇದೆ. ಮೂರು ವರ್ಷಗಳ ಹಿಂದೆ, ಅವಳ ವಯಸ್ಸು ಸುನೀತಾಳ ವಯಸ್ಸಿನ ಮೂರು ಪಟ್ಟು ಜಾಸ್ತಿ ಇತ್ತು. ರೀನಾಳ ಈಗಿನ ವಯಸ್ಸು ಎಷ್ಟು?

ಎ) 6 ವರ್ಷ

ಬಿ) 7 ವರ್ಷ

ಸಿ) 8 ವರ್ಷ

ಡಿ) 12 ವರ್ಷ

655. ಒಬ್ಬ ವ್ಯಕ್ತಿಯು ಒಂದು ಕೆಲಸವನ್ನು 12 ದಿನಗಳಲ್ಲಿ ಮತ್ತು ಮತ್ತೊಬ್ಬ ವ್ಯಕ್ತಿಯು 24 ದಿನಗಳಲ್ಲಿ ಮಾಡಬಲ್ಲರು. ಇಬ್ಬರೂ ಜೊತೆಯಾದರೆ ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಹುದು?

ಎ) 8ಬಿ) 12

ಸಿ) 20ಡಿ) 15

656. ‘ಕರ್ನಾಟಕ ವೈಭವ’ ಕೃತಿಯ ಕರ್ತೃ ಯಾರು?

ಎ) ಆಲೂರು ವೆಂಕಟರಾಯರು

ಬಿ) ಬಿ.ಎಂ.ಶ್ರೀ

ಸಿ) ಕುವೆಂಪು

ಡಿ) ಗೋವಿಂದ ಪೈ

657. ಬಹುಮನಿ ಸಾಮ್ರಾಜ್ಯದ ಸ್ಥಾಪಕ ಯಾರು?

ಎ) ಅಲ್ಲಾವುದ್ದೀನ್‌ ಹಸನ್

ಬಿ) ಫಿರೋಜ್‌ ಷಾ

ಸಿ) ಅಹ್ಮದ್‌ ಷಾ

ಡಿ) ನಿಜಾಮ್‌ ಷಾ

658. ಕನ್ನಂಬಾಡಿ ಅಣೆಕಟ್ಟು ಯಾರ ಕಾಲದಲ್ಲಿ ನಿರ್ಮಾಣಗೊಂಡಿತು?

ಎ) ಚಿಕ್ಕದೇವರಾಯ ಒಡೆಯರ್

ಬಿ) ಕೃಷ್ಣರಾಜ ಒಡೆಯರ್- 4

ಸಿ) ದೊಡ್ಡದೇವರಾಯ ಒಡೆಯರ್

ಡಿ) ಕೃಷ್ಣರಾಜ ಒಡೆಯರ್-1

659. ‘ಟೇಬಲ್‌ ಶುಗರ್‌’ ಯಾವುದು?

ಎ) ಗ್ಲೂಕೋಸ್

ಬಿ) ಸುಕ್ರೋಸ್

ಸಿ) ಸೆಲ್ಯುಲೋಸ್

ಡಿ) ಪ್ರಕ್ಟೋಸ್

660. ಎಲುಬುಗಳ ಬಲವರ್ಧಿಸುವುದು ಯಾವುದು?

ಎ) ಕ್ಯಾಲ್ಸಿಯಂ

ಬಿ) ಪ್ಲಾಟಿನಂ

ಸಿ) ಸೋಡಿಯಂ

ಡಿ) ಯುರೇನಿಯಂ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.