ADVERTISEMENT

18ರಿಂದ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಸರಣಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:18 IST
Last Updated 3 ಡಿಸೆಂಬರ್ 2022, 18:18 IST
   

ಬೆಂಗಳೂರು: ಕೆಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಸಹೋಗದಲ್ಲಿ ‘ಎಕ್ಸಾಮ್‌ ಮಾಸ್ಟರ್‌ ಮೈಂಡ್‌ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಆನ್‌ಲೈನ್‌ ಟೆಸ್ಟ್‌ ಸರಣಿ’ ಡಿ. 18ರಿಂದ ನಡೆಯಲಿದೆ.

ಈ ಸರಣಿಯು 12 ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು, 15 ದಿನಗಳಿಗೊಮ್ಮೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೆಎಎಸ್‌ ಪರೀಕ್ಷೆಗೆ ಅನುಗುಣವಾದ ಪ್ರಶ್ನೆಗಳು, ವಿಸ್ತೃತ ವಿವರಣೆಯ ಪಿಡಿಎಫ್‌ ಗಳು ಮರುದಿನವೇ ಲಭ್ಯ ವಾಗಲಿವೆ. ಪಠ್ಯಕ್ರಮದ ಸಮಗ್ರ ಭಾಗ ವನ್ನು ಒಳಗೊಂಡಿರುವ ಪ್ರಶ್ನೆಗಳು ಮತ್ತು ಪ್ರತಿ ಪರೀಕ್ಷೆಗೆ ರ್‍ಯಾಂಕಿಂಗ್‌ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT